ಟೀಂ ಇಂಡೀಯಾದ ಮಾಜಿ ಎಡಗೈ ವೇಗಿ ಇದೀಗ ತಾನು ಟೀಂ ಇಂಡಿಯಾದ ಕೋಚ್ ಆಗಲು ಸಿದ್ದ ಎಂದು ಹೇಳಿದ್ದಾರೆ. ಟೀಂ ಇಂಡಿಯಾದ ಪೂರ್ಣಾವಧಿಯ ಕೋಚ್ ಆಗಿ ಕರ್ನಾಟಕ ಅನೀಲ್ ಕುಂಬ್ಳೆ ಅವರು ಈಗಾಗಲೇ ಆಯ್ಕೆಯಾಗಿದ್ದು, ಇದೀಗ ಟೀಂ ಇಂಡಿಯಾಗೆ ಬೌಲಿಂಗ್ ಕೋಚ್‍ಗಾಗಿ ಭಾರತ ಕ್ರಿಕೇಟ್ ಮಂಡಳಿ(ಬಿಸಿಸಿಐ) ಹುಡುಕಾಟದಲ್ಲಿದ್ದಾರೆ. ಇದರಲ್ಲಿ ಮಾಜೀ ವೇಗಿ ಜಹೀರ್ ಖಾನ್ ಅವರ ಹೆಸರು ಮುಂಚೂಣಿಯಲಿದ್ದು, ಈ ಕುರಿತು ಜಹೀರ್ ಕೂಡ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಸಧ್ಯಕ್ಕೆ ನಾನು ಮುಂದಿನ ಐಪಿಎಲ್ ಸೀಸನ್ ಬಗ್ಗೆ ಚಿಂತನೆ ನಡೆಸಿದ್ದು, ಅದರ ಜೊತೆಗೆ ನನ್ನ ಹೊಸ ಉದ್ಯಮ ಫಿಟ್ನಿಸ್ ಸೆಂಟರ್ ಬಗ್ಗೆಯೂ ಗಮನ ಹರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಭಾರತ ಕ್ರಿಕೇಟ್ ಟೀಂಗೆ ಉಪಯುಕ್ತವಾಗುವಂತಹ ಯಾವುದೇ ಹುದ್ದೆಯನ್ನು ನಿಭಾಯಿಸಲೂ ನಾನು ಸಿದ್ಧನಿದ್ದೇನೆ ಎಂದರು. ಪ್ರಸ್ತುತದಲ್ಲಿರುವ ಭಾರತ ಕ್ರಿಕೇಟ್ ತಂಡದ ಬೌಲಿಂಗ್ ಕೋಚ್ ಅರುಣ್ ಅವರನ್ನೇ ಮುಂದುವರೆಸುವ ಸಾಧ್ಯತೆಯೂ ಇದೆ ಎಂದು ಬಿಸಿಸಿಐ ಬಲ್ಲ ಮೂಲಗಳು ತಿಳಿಸಿದೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಟೀಂ ಇಂಡಿಯಾದ ವೇಗಿ ಮಹಮ್ಮದ್ ಶಮಿ, ಜಹೀರ್ ಅವರು ಟೀಂ ಇಂಡಿಯಾದ ಬೌಲಿಂಗ್ ವಿಭಾಗವನ್ನು ಸೂಕ್ತವಾಗಿ ನಿಭಾಯಿಸುವ ಎಲ್ಲಾ ಸಾಮಥ್ರ್ಯವಿದೆ ಎಂದು ಹೇಳಿದ್ದಾರೆ.
ಜಹೀರ್ ಆಯ್ಕೆ ಬಗ್ಗೆ ಕೋಚ್ ಅನೀಲ್ ಕುಂಬ್ಳೆ, ಕ್ರಿಕೇಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷಣ್ ಅವರು ಸಲಹೆ ನೀಡಲಿದ್ದು, ಅದರಂತೆ ಬಿಸಿಸಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
POPULAR STORIES :
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???
ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!
ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??
ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!