ʻವೇಷ ಬೇರೆ ಭಾಷೆ ಬೇರೆ ದೇಶವೊಂದೆ ಇಂಡಿಯಾʼ ಎಂದ ಮ್ಯಾಡಿ ಅಲಿಯಾಸ್ ಮಾಧವ..

0
336

‘ಮ್ಯಾಡಿ ಅಲಿಯಾಸ್ ಮಾಧವ’ ಇಂತಹದೊಂದು ವಿಭಿನ್ನ ಟೈಟಲ್ ನಲ್ಲಿ ಚಿತ್ರವೊಂದು ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಸದ್ಯ ಚಿತ್ರದ ಸಾಂಗ್ ವೊಂದನ್ನ ಬಿಡುಗಡೆ ಮಾಡಿ ಸದ್ದು ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿತ್ರದ ಹಾಡನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನು ನಾಲ್ಕು ಭಾಷೆಯಲ್ಲಿ ಸಿನಿಮಾ ತಯಾರಾಗಿದ್ದು, ಹಾಡು ಕೂಡಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಆನ್ಮೈ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರ ಮ್ಯಾಡಿ ಅಲಿಯಾಸ್ ಮಾಧವ. ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ದಗೊಂಡಿರುವ ಈ ಸಿನಿಮಾ ಜಾಗತಿಕ ಮಟ್ಟದ ಕಥಾವಸ್ತುವನ್ನು ಒಳಗೊಂಡಿರೋದು ವಿಶೇಷ.

ಅತೀ ಚಿಕ್ಕ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಬಡ ಕುಟುಂಬದ ಹುಡುಗ ತಾಯಿಯ ಆಸರೆಯಲ್ಲೇ ಬೆಳೆಯುತ್ತಿರುತ್ತಾನೆ. ಭಾರತ ಮೂಲದ ಅಮೆರಿಕನ್ ವಿಜ್ಞಾನಿಯೊಬ್ಬರು ಮಕ್ಕಳ ವೈಜ್ಞಾನಿಕ ಜ್ಞಾನವನ್ನು ಗುರುತಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ. ಆ ಸ್ಪರ್ಧೆಗೆ ಮಾಧವ ಕೂಡಾ ಆಯ್ಕೆಯಾಗಿರುತ್ತಾನೆ. ಯುವ ವಿಜ್ಞಾನಿಗಳೆಲ್ಲಾ ತಮ್ಮ ಆವಿಷ್ಕಾರಗಳನ್ನು ಪರಿಚಯಿಸಲು ಸಿದ್ಧರಾಗಿದ್ದ ಸಂದರ್ಭದಲ್ಲೇ ಅವರ ರಿಸರ್ಚ್ ಗಳನ್ನು ಕದಿಯುವ ಉದ್ದೇಶದಿಂದ ದುಷ್ಟರ ಗುಂಪೊಂದು ಸಂಚು ರೂಪಿಸಿ ಅವರನ್ನೆಲ್ಲ ಅಪಹರಿಸುತ್ತಾರೆ. ಈ ಹೊತ್ತಿನಲ್ಲಿ ಮಾಧವನ ಜಾಣ್ಮೆ, ಧೈರ್ಯ ಮತ್ತು ಸಮಯ ಪ್ರಜ್ಞೆ ಹೇಗೆ ಸಹಾಯಕ್ಕೆ ಬರುತ್ತದೆ..? ಮಾಧವ ಅಪಹರಣಕಾರರಿಂದ ಎಲ್ಲರನ್ನೂ ರಕ್ಷಿಸುತ್ತಾನಾ? ಎಂಬ ಸಾಹಸಮಯ ಮತ್ತು ಸಕಾರಾತ್ಮಕ ಅಂಶಗಳನ್ನು ಒಳಗೊಂಡ ಕಥೆ ‘ಮ್ಯಾಡಿ ಅಲಿಯಾಸ್ ಮಾಧವ’ ಚಿತ್ರದ್ದಾಗಿದೆ. ಹೆತ್ತವರೊಂದಿಗೆ ಮಕ್ಕಳ ನಿಜವಾದ ಬಾಂಧವ್ಯ ಹೇಗಿರುತ್ತದೆ ಅನ್ನೋದು ಈ ಚಿತ್ರದಲ್ಲಿ ಅನಾವರಣಗೊಂಡಿದೆ.

https://youtu.be/dEhPfkLobMg

ತಮಿಳಿನ ಖ್ಯಾತ ನಟ ಪ್ರಭು, ತಲೈವಾಸಲ್ ವಿಜಯ್, ಭಾನು ಪ್ರಕಾಶ್, ನೇಹಾ ಖಾನ್, ಆದಿತ್ ಅರುಣ್, ರಿಚಾ ಪಲ್ಲೋಡ್, ವಯ್ಯಾಬುರಿ ಸೇರಿದಂತೆ ಸಾಕಷ್ಟು ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಪ್ರತೀಶ್ ದೀಪು ನಿರ್ದೇಶನದ ಈ ಚಿತ್ರಕ್ಕೆ ಅಜಯ್ ವಿನ್ಸೆಂಟ್ ಮತ್ತು ಆಕಾಶ್ ವಿನ್ಸೆಂಟ್ ತಮ್ಮ ಕ್ಯಾಮೆರಾದಲ್ಲಿ ಸುಂದರ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ. ತೋಟಾ ತಾರಿಣಿ ಕಲಾ ನಿರ್ದೇಶನವಿರೋ ಈ ಚಿತ್ರಕ್ಕೆ ಅನಿಲ್ ಕುಮಾರ್ ಕಥೆ ಬರೆಯುವುದರ ಜೊತೆಗೆ ನಿರ್ಮಾಣವನ್ನೂ ಕೂಡ ಮಾಡಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ʻವೇಷ ಬೇರೆ ಭಾಷೆ ಬೇರೆ ದೇಶವೊಂದೆ ಇಂಡಿಯಾʼ ಎನ್ನುವ ಹಾಡನ್ನು ಲೋಕಾರ್ಪಣೆ ಮಾಡಲಾಗಿದೆ.

ಭಾರತದ ಪ್ರತಿಯೊಬ್ಬ ಮಕ್ಕಳು ಮತ್ತು ಮಕ್ಕಳನ್ನು ಹೆತ್ತ ಪೋಷಕರು ನೋಡಲೇಬೇಕಿರುವ ಚಿತ್ರ ʼಮ್ಯಾಡಿ ಅಲಿಯಾಸ್ ಮಾಧವʼ.

ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರೋ ನಿರ್ಮಾಪಕ ಅನಿಲ್ ಕುಮಾರ್ ಹೇಳುವ ಪ್ರಕಾರ ಈ ಸಿನಿಮಾ ಕೇವಲ ಒಂದೇ ಭಾಷೆಗೆ ಸೀಮಿತವಾಗಿಲ್ಲ, ಬದಲಾಗಿ ಜಗತ್ತಿನ ಯಾವುದೇ ಭಾಷೆಯಲ್ಲೂ ಈ ಸಿನಿಮಾ ಒಂದೇ ಸಂದೇಶವನ್ನ ಹೊಂದಿದೆ. ಸದ್ಯದಲ್ಲಿಯೇ ತೆರೆಗೆ ಬರಲು ಎಲ್ಲಾ ತಯಾರಿಯನ್ನು ಚಿತ್ರತಂಡ ಮಾಡಿಕೊಳ್ಳುತ್ತಿದ್ದು, ಥಿಯೇಟರ್ ಗೆ ಅವಕಾಶ ನೀಡುತ್ತಿದ್ದಂತೆ ‘ಮ್ಯಾಡಿ ಅಲಿಯಾಸ್ ಮಾಧವ’ ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here