ದಿನದಿಂದ ದಿನಕ್ಕೆ ಕನ್ನಡ ಭಾಷೆಯ ಕಡೆಗಣನೆ ಆಗುತ್ತಿದೆ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುತ್ತಿಲ್ಲ ಎಂಬ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಆರೋಪ ಹೆಚ್ಚಾಗಿ ಕೇಳಿ ಬರುತ್ತಿರುವುದು ಬೆಂಗಳೂರು ನಗರದಲ್ಲಿ. ಹೌದು ಬೆಂಗಳೂರು ನಗರದಲ್ಲಿ ಕನ್ನಡ ಭಾಷೆಯ ನಿರ್ಲಕ್ಷ್ಯ ಆಗುತ್ತಿದೆ ಅಂಗಡಿಯ ನಾಮಫಲಕಗಳಲ್ಲಿ ಕನ್ನಡ ಅತಿ ಕಡಿಮೆ ಎಂದು ಆಗಾಗ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಕನ್ನಡ ನಾಡಿನಲ್ಲಿ ಇದ್ದುಕೊಂಡು ಕನ್ನಡ ಭಾಷೆಗಿಂತ ಬೇರೆ ಭಾಷೆಯನ್ನು ಹೆಚ್ಚಾಗಿ ಬರೆಯುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಇನ್ನು ಇದೀಗ ಈ ನಾಮಫಲ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್ ಗೌತಮ್ ಕುಮಾರ್ ಅವರು ಹೊಸ ರೂಲ್ಸ್ ಜಾರಿ ಮಾಡಿದ್ದಾರೆ.
ಹೌದು ಕನ್ನಡ ರಾಜ್ಯೋತ್ಸವ ದಿನವಾದ ಇಂದಿನಿಂದ ಕನ್ನಡ ಪರ ಹೊಸ ರೂಲ್ಸ್ ಒಂದನ್ನು ಮೇಯರ್ ಗೌತಮ್ ಕುಮಾರ್ ಅವರು ಹೊರಡಿಸಿದ್ದು , ಬೆಂಗಳೂರಿನ ಯಾವುದೇ ಅಂಗಡಿ ಯಾದರೂ ಸರಿ ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು ಎಂದು ಆದೇಶ ಮಾಡಿದ್ದಾರೆ. ಯಾವುದೇ ಅಂಗಡಿಯ ಬೋರ್ಡ್ ನಲ್ಲಿ ಶೇ 60 ಭಾಗ ಕನ್ನಡವೇ ಇರಬೇಕು ಇಲ್ಲದೇ ಇದ್ದರೆ ಆ ಅಂಗಡಿಯ ಲೈಸೆನ್ಸ್ ಅನ್ನು ರದ್ದು ಮಾಡಲಾಗುವುದು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಮೇಯರ್ ಅವರ ಈ ಒಂದು ನಿರ್ಧಾರದಿಂದ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದ ಅಂಗಡಿಯವರಿಗೆ ತಕ್ಕ ಪಾಠವಂತೂ ಆಗಲಿದೆ.