ಅಂಚೆ ಉಳಿತಾಯದ ಉಪಯುಕ್ತತೆಗಳು

Date:

ಅಂಚೆ ಉಳಿತಾಯದ ಉಪಯುಕ್ತತೆಗಳು
ಪ್ರತಿಯೊಬ್ಬರೂ ಕೂಡ ತಮ್ಮ ಉಳಿತಾಯದ ಮೇಲೆ ಗರಿಷ್ಠ ಲಾಭವನ್ನು ಬಯಸಿಯೇ ಬಯಸುತ್ತಾರೆ.ಲಾಭವಿಲ್ಲದೆ ಉಳಿತಾಯ, ಹೂಡಿಕೆಯನ್ನು ಯಾರೂ ಇಷ್ಟಪಡಲ್ಲ. ಹೀಗಿರುವಾಗ ನಾವು – ನೀವು ಠೇವಣಿ ಇಟ್ಟ ಹಣದ ಸುರಕ್ಷತೆಯು ಮುಖ್ಯ ಅಲ್ವೇ? ಖಾಸಗಿ ಬ್ಯಾಂಕುಗಳನ್ನು ಹೊರತುಪಡಿಸಿ, ದೇಶದ ಸರ್ಕಾರಿ ಬ್ಯಾಂಕುಗಳು ಠೇವಣಿ ಮಾಡಿದ ಮೊತ್ತದಲ್ಲಿ ಕೇವಲ 1 ಲಕ್ಷ ರೂಪಾಯಿಗಳ ಗ್ಯಾರಂಟಿ ಸಿಗುತ್ತೆ. ಠೇವಣಿ ಹಣವು 1 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಮತ್ತು ಬ್ಯಾಂಕ್ ಮುಳುಗಿದರೆ, ರಿಸರ್ವ್ ಬ್ಯಾಂಕ್ ಕೇವಲ 1 ಲಕ್ಷ ರೂಪಾಯಿಗಳನ್ನು ಖಾತರಿಪಡಿಸುತ್ತದೆ. ಇದಕ್ಕಿಂತ ಹೆಚ್ಚಿನ ಹಣವನ್ನು ನಾವು ಪಡೆಯಲು ಸಾಧ್ಯವಿಲ್ಲ. ಖಾಸಗಿ ಹಣಕಾಸು ಕಂಪನಿಗಳಲ್ಲಿ ಹಣ ಠೇವಣಿಗೆ ಯಾವುದೇ ರೀತಿಯ ಗ್ಯಾರಂಟಿಯಿಲ್ಲ. ಒಂದು ವೇಳೆ ಕಂಪನಿ ಕುಸಿದರೆ, ಠೇವಣಿ ಇಟ್ಟ ಹಣವೆಲ್ಲವೂ ಕಳೆದುಕೊಂಡಂತೆಯೇ. ಆದರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಅಂಥಾ ಯಾವ್ದೇ ರಿಸ್ಕ್ಗಳಿಲ್ಲ !


ಹೌದು, ನೀವು ಪೋಸ್ಟ್ ಆಫೀಸಲ್ಲಿಡುವ ಠೇವಣಿ ಮೊತ್ತದ, ಸುರಕ್ಷತೆಯನ್ನು ಭಾರತ ಸರ್ಕಾರ ಖಾತರಿ ಪಡಿಸುತ್ತೆ. ಆದ್ರಿಂದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಯಾವ್ದೇ ಆತಂಕವಿಲ್ಲದೆ ಹೂಡಿಕೆ ಮಾಡ್ಬಹುದು. ಇಲ್ಲಿ ನಿಮ್ಮ ಹಣ ದ್ವಿಗುಣ ಕೂಡ ಆಗುತ್ತೆ. ಲಾಭದ ಜೊತೆಗೆ ಸುರಕ್ಷಿತ ಕೂಡ.

ರಿಕರಿಂಗ್ ಡೆಪಾಸಿಟ್ನಿಂದ ಟೈಮ್ ಡೆಪಾಸಿಟ್ ವರೆಗೆ ಮತ್ತು ಸುಕನ್ಯಾ ಸಮೃದ್ಧಿಯಂತಹ ವಿಶೇಷ ಯೋಜನೆಗಳು ಸೇರಿದಂತೆ ಪೋಸ್ಟ್ ಆಫೀಸ್ನಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳಾಗಿವೆ. ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಯೋಜನೆಗಳು ವಿಭಿನ್ನ ವರ್ಷಗಳ ಠೇವಣಿ ಅವಧಿಗೆ ವಿಭಿನ್ನ ಬಡ್ಡಿದರಗಳನ್ನು ಹೊಂದಿವೆ. ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆ ತೆರೆಯುವ ಮೂಲಕವೂ ಹೂಡಿಕೆ ಮಾಡಬಹುದು. ಇದಲ್ಲದೆ, ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ (ಎನ್ಎಸ್ಸಿ) ಹೂಡಿಕೆ ಸಾಧ್ಯ. ಇವುಗಳೆಲ್ಲವುನಿಂದಲೂ ಖಂಡಿತಾ ಲಾಭ ಕಟ್ಟಿಟ್ಟ ಬುತ್ತಿ.


ಸದ್ಯ ಸರ್ಕಾರ ಸ್ಥಿರ ಠೇವಣಿ ಯೋಜನೆಗಳಲ್ಲಿನ ಬಡ್ಡಿಯನ್ನು ಕಡಿತಗೊಳಿಸಿದೆ, ಲಾಭ ಕಮ್ಮಿಯಾಗಿದೆ. ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ ಹಾಗೂ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಯಲ್ಲಿ ಕಂಡುಬರೋ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಆದ್ರೂ ಬ್ಯಾಂಕ್ಗಳಿಗಿಂತ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಬಡ್ಡಿದರ ಹೆಚ್ಚಿದೆ.

ಕಡಿಮೆ ಸಮಯದಲ್ಲಿ ಹೆಚ್ಚು ಲಾಭ – ಕಿಸಾನ್ ವಿಕಾಸ್ ಪತ್ರ
ಪೋಸ್ಟ್ ಆಫೀಸ್ ಎಲ್ಲಾ ಉಳಿತಾಯ ಯೋಜನೆಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ, ಆದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭವನ್ನು ಪಡೆಯಲು, ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡೋದು ಉತ್ತಮ ಎಂದು ಹೇಳಾಗಿದೆ. ಈ ಯೋಜನೆಯಲ್ಲಿ ಬೇರೆ ಉಳಿತಾಯ ಯೋಜನೆಗಳಿಗಿಂತ ಕಮ್ಮಿ ಸಮಯದಲ್ಲಿ ಹಣ ದ್ವಿಗುಣಗೊಳ್ಳುತ್ತದೆ.


ಹೂಡಿಕೆ ಮಾಡಿದ ಮೊತ್ತ ಕೇವಲ 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಏಪ್ರಿಲ್ 1, 2020 ರಿಂದ, ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ಶೇ 6.9 ಆಗಿದೆ. ಈ ಮೊದಲು ಇದೇ ಬಡ್ಡಿದರ ಶೇ 7.6 ರಷ್ಟಿತ್ತು. ಆದರೂ ಹೂಡಿಕೆ ಮಾಡಿದ 4 ತಿಂಗಳ ಬಳಿಕ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ. ಇದರಲ್ಲಿ 5 ಲಕ್ಷ ರೂ.ಗಳ ಹೂಡಿಕೆ ಮಾಡಿದರೆ, 124 ತಿಂಗಳ ನಂತರ 10 ಲಕ್ಷ ರೂ ಸಿಗುತ್ತದೆ!
ಇನ್ನು ಇದರಲ್ಲಿ ಕನಿಷ್ಠ 1000 ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಒಬ್ಬನು ತನಗೆ ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಯಾವುದೇ ಖಾತೆಯನ್ನು ತೆರೆಯಬಹುದು. ಇದರಲ್ಲಿ, ಸಿಂಗಲ್ ಮತ್ತು ಜಂಟಿ ಖಾತೆಗಳನ್ನು ತೆರೆಯಲು ಅವಕಾಶವಿದೆ. ಮೂರು ವಯಸ್ಕರು ಒಟ್ಟಿಗೆ ಜಂಟಿ ಖಾತೆಯನ್ನು ತೆರೆಯುವ ಅವಕಾಶವೂ ಇದೆ. 10 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಪ್ರಾಪ್ತ ವಯಸ್ಕನು ಸಹ ಕಿಸಾನ್ ವಿಕಾಸ್ ಪತ್ರ ಖರೀದಿಸಬಹುದು!

ಕಿಸಾನ್ ವಿಕಾಸ್ ಪತ್ರ ಪಡೆದ ದಿನಾಂಕದಿಂದ ಎರಡೂವರೆ ವರ್ಷಗಳ ನಂತರ ನೀವು ಹಣವನ್ನು ಹಿಂಪಡೆಯಬಹುದು. ಇದರಲ್ಲಿ, ಶೇಕಡಾ 6.9 ದರದಲ್ಲಿ ಬಡ್ಡಿಯನ್ನು ಸೇರಿಸುವ ಮೂಲಕ ನಿಮಗೆ ಹಣ ನೀಡುತ್ತಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...