ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವನ್ನು ಪಡೆದುಕೊಂಡಿದ್ದರೆ ಒಂದು ವೇಳೆ ಒಂದು ವೇಳೆ ಕಾಂಗ್ರೆಸ್ನವರು ಟಿಕೆಟ್ ಟಿಕೆಟ್ ಕೊಟ್ಟಿದ್ದಿದ್ದರೆ ಇಂದು ಮಂಡ್ಯ ಕ್ಷೇತ್ರ ಕಾಂಗ್ರೆಸ್ ಪಾಲಾಗುತ್ತಿತ್ತು ಎಂದು ಸ್ವತಃ ಸಮಲತಾ ಅಂಬರೀಶ್ ಅವರೇ ಹೇಳಿದ್ದಾರೆ .
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಒಂದಾಗಿ ನನಗಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಮಂಡ್ಯದ ಜನತೆ ಸ್ವಾಭಿಮಾನದಿಂದಲೇ ಉತ್ತರಿಸಿದ್ದಾರೆ. ಎಲ್ಲಾ ಟೀಕೆಗಳಿಗೂ ಇಂದು ಉತ್ತರ ಸಿಕ್ಕಿದೆ ಎಂದರು.
ಇನ್ನು, ಮೇ.29ರಂದು ಅಂಬರೀಶ್ ಹುಟ್ಟುಹಬ್ಬ. ಹೀಗಾಗಿ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಲು ಮೇ. 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತೇವೆ.ಈ ಕಾರ್ಯಕ್ರಮದಲ್ಲಿ ನಟ ದರ್ಶನ್, ಯಶ್ ಎಲ್ಲರೂ ಭಾಗಿ ಆಗುತ್ತಾರೆ ಎಂದು ತಿಳಿಸಿದರು.