ಅಂದು ನಾಲ್ವರಿಗೆ, ಈಗ 10 ಜನರಿಗೆ ಪುನೀತ್ ಕಣ್ಣುಗಳಿಂದ ದೃಷ್ಟಿ

1
34

ಪುನೀತ್‌ ರಾಜ್‌ಕುಮಾರ್‌ ಅವರನ್ನು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ. ಆದರೆ ಅವರ ಸಿನಿಮಾಗಳು ಅವರ ಆದರ್ಶಗಳು ಅವರ ಕೆಲಸಗಳು ನಮ್ಮ ಮುಂದೆ ಸದಾಕಾಲ ಇದ್ದೇ ಇರುತ್ತದೆ. ಈ ನಡುವೆ ಪುನೀತ್‌ ಅವರು ನೇತ್ರದಾನ ಮಾಡಿದ್ದು, ಅವರ ಪುಣ್ಯದ ಕೆಲಸದಿಂದ ಈಗಾಗಲೇ ನಾಲ್ವರು ಈ ಜಗತ್ತನ್ನು ನೋಡುತ್ತಿದಿದ್ದಾರೆ.

ಈ ನಡುವೆ ಪುನೀತ್‌ ಅವರ ನೇತ್ರದಿಂದ ತೆಗೆದುಕೊಂಡಿದ್ದ ಇತರೆ ಅಗಾಂಶಗಳಿಂದ ಇನ್ನೂ 10 ಮಂದಿಗೆ ಸಹಾಯವಾಗಲಿದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ವೈದ್ಯರು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು, ಪುನೀತ್‌ ಅವರ ಕಣ್ಣಿನಿಂದ ಸ್ಟೆಮ್ ಸೆಲ್ (ಕಣ್ಣಿನ ರಿಮ್ ಭಾಗದಿಂದ ) ಗಳನ್ನು ಪ್ರಯೋಗಲಾಯದಲ್ಲಿ, ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದು, ಈ ಪ್ರಯೋಗ ಮಲ್ಟಿಪಲ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಹೀಗಾಗಿ ಕನ್ನಡಿಗರ ಮುದ್ದಿನ ಅಪ್ಪು, ಕನ್ನಡ ನಾಡನ್ನು ಮತ್ತೊಬ್ಬರ ಕಣ್ಣಿನಲ್ಲಿ ನೋಡಲಿದ್ದು, ಮತ್ತೆ ಕನ್ನಡ ನಾಡಿನಲ್ಲಿ ಅಭಿಮಾನಿ ದೇವರುಗಳ ಕಣ್ಣಿನಲ್ಲಿ ನಾಡನ್ನು ನೋಡಲಿದ್ದಾರೆ.

. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಸೆಲ್ ಚಿಕಿತ್ಸೆಯು ಉತ್ತಮವಾಗಿದೆ. ಉದಾಹರಣೆಗೆ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಲ್ (RPE) ಕೋಶಗಳು. ಕಣ್ಣಿನ ಕಾಯಿಲೆಯಿಂದಾಗಿ ಹಾನಿಗೊಳಗಾದ ಅಥವಾ ಕಳೆದುಹೋದ ಜೀವಕೋಶಗಳನ್ನು ಬದಲಿಸಲು ಹೊಸ RPE ಕೋಶಗಳನ್ನು ಮತ್ತೆ ಕಣ್ಣಿನೊಳಗೆ ಚುಚ್ಚಲಾಗುತ್ತದೆ

1 COMMENT

LEAVE A REPLY

Please enter your comment!
Please enter your name here