No menu items!
20.3 C
Munich
Friday, August 21, 2026

ಹಸೆಮಣೆ ಏರುವ ಮುನ್ನ ಹಕ್ಕು ಚಲಾಯಿಸಿದ ಮಧು ಮಗಳು

Must read

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ರಂಗೇರಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ಪಕ್ಷದ ಮಧ್ಯೆ ತೀವ್ರ ಪೈಪೋಟಿ ನಡೆಸುತ್ತಿದೆ. ಅಂತೆಯೇ ಯುವತಿಯೊಬ್ಬಳು ಹಸೆಮಣೆ ಏರುವ ಮುನ್ನ ಮತ ಚಲಾಯಿಸಿ ಜನರ ಗಮನ ಸೆಳೆದ ಘಟನೆ ಶೃಂಗೇರಿ ತಾಲೂಕಿನ ಕೂತಗೋಡಿನಲ್ಲಿ ನಡೆದಿದೆ.


ಗ್ರಾಮದ ಸ್ಪಂದನ ಮತ ಚಲಾಯಿಸಿದ ಯುವತಿ. ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ದಾರಿಯ ಮಧ್ಯೆ ಕೂತಗೋಡು ಮತಗಟ್ಟೆಗೆ ತೆರಳಿ ಅವರು ಮತ ಚಲಾಯಿಸಿದ್ದಾರೆ. ಮದುವೆ ದಿನ ತಪ್ಪದೇ ಬಂದು ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ ಮದುಮಗಳಿಗೆ ಚುನಾವಣಾ ಸಿಬ್ಬಂದಿ ಹಾಗೂ ಮತದಾರರು ಶುಭ ಹಾರೈಸಿದ್ದಾರೆ

- Advertisement -spot_img

More articles

- Advertisement -spot_img

Latest article