ಕನ್ನಡದ ಕನ್ವರ್ ಲಾಲ್, ಕಲಿಯುಗ ಕರ್ಣ, ಮಂಡ್ಯದ ಗಂಡು ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಕೆಲವು ಆಪಾದನೆಗಳು, ಗಾಸಿಪ್ ಗಳು ಆಗಾಗ ಹರಿದಾಡುತ್ತಿರುತ್ತವೆ. ಆದರೆ ಅಂಬರೀಶ್ ಮಾತ್ರ ಇದ್ಯಾವುದಕ್ಕೂ ಕೇರ್ ಮಾಡುವ ಮನುಷ್ಯರಲ್ಲ.
ಅವರನ್ನು ಹತ್ತಿರದಿಂದ ಬಲ್ಲವರಿಗೆ ಅಂಬರೀಶ್ ಬಗ್ಗೆ ಸಾಕಷ್ಟು ಗೊತ್ತಿರುತ್ತದೆ. ಆದರೆ ಅವರ ಅಭಿಮಾನಿಗಳು ಕೇವಲ ಊಹಾಪೋಹಗಳನ್ನೇ ನಿಜವೆಂದು ಭ್ರಮಿಸುತ್ತಾರೆ. ನೋಡಲು ರಫ್ ಅಂಡ್ ಟಪ್ ನಂತಿದ್ದರೂ ಅವರು ಇದ್ದಲ್ಲಿ ಸದಾ ನಗುವಿನ ವಾತಾವರಣವಿರುತ್ತಿತ್ತತತ
ಅವರ ಜನ್ಮದಿನದ ನೆನಪಲ್ಲಿ ಒಂದಿಷ್ಟು
ಅಂಬರೀಶ್ ಅವರಿಗೆ ರಾಜಕೀಯಕ್ಕೆ ಬರಬೇಕು ಎಂಬ ಮಹದಾಸೆಯೇನು ಇರಲಿಲ್ಲ. ಬಂದ ಮೇಲೆ ಇಲ್ಲಿನ ರಾಜಕೀಯ ದೊಂಬರಾಟವನ್ನು ನೋಡಿ ಬೇಸತ್ತಿದ್ದೂ ಇದೆ. ಇದೆಲ್ಲಾ ಬೇಕಾಗಿತ್ತಾ ಎಂದೂ ಅವರು ಅಂದುಕೊಂಡದ್ದುಂಟು. ಸ್ಲೈಡ್ ನಲ್ಲಿ ನೋಡಿ ಮತ್ತಷ್ಟು ಸೀಕ್ರೆಟ್ ಸಂಗತಿಗಳು…
ಶಾಲಾ ದಿನಗಳಲ್ಲಿ ಅಂಬಿ ಫಸ್ಟ್ ಕ್ಲಾಸ್ ವಿದ್ಯಾರ್ಥಿ ಅಂಬರೀಶ್ ಅವರು ಶಾಲಾ ದಿನಗಳಲ್ಲಿ ಫಸ್ಟ್ ಕ್ಲಾಸ್ ವಿದ್ಯಾರ್ಥಿಯಾಗಿದ್ದರು. ಆದರೆ ಕಾಲೇಜು ಮೆಟ್ಟಿಲೇರಿದ ಮೇಲೆ ‘ಎ’ ವಿದ್ಯಾರ್ಥಿ ಅನ್ನಿಸಿಕೊಂಡರು. ಅವರ ಪ್ರಕಾರ ‘ಎ’ ಎಂದರೆ ಗ್ರೇಡ್ ಅಲ್ಲ, ಆಬ್ಸೆಂಟ್ ಎಂದರ್ಥ.
ಕನ್ನಡ ಮೇಷ್ಟ್ರಿಗೆ ಪಾಠ ಕಲಿಸಿದ ಅಂಬರೀಶ್ ಒಮ್ಮೆ ಅವರು ಶಾಲಾ ದಿನಗಳಲ್ಲಿ ಕನ್ನಡ ಮೇಷ್ಟ್ರೊಬ್ಬರು ಪಾಠ ಮಾಡುತ್ತಾ ಬೋರ್ಡ್ ಮೇಲೆ ‘ರಾಮನು ಮನೆಗೆ ಹೋದನು’ ಎಂದು ಬರೆದರಂತೆ. ಕೊನೆಯ ಬೆಂಚ್ ನಲ್ಲಿ ಕೂತಿದ್ದ ಅಂಬರೀಶ್ ಕೂಡಲೆ ಕೈ ಎತ್ತಿ ಅಂಬರೀಶನು ಮನೆಗೆ ಹೋಗುತ್ತಿದ್ದಾನೆ ಎಂದು ಹೇಳಿ ಹೊರಟೇ ಬಿಟ್ಟರು. ಇದನ್ನು ಯಾವಾಗಲೂ ನೆನೆಸಿಕೊಂಡು ಅಂಬಿ ಗಹಗಹಿಸಿ ನಗುತ್ತಿದ್ದರು.
ಖಳನಟನಾಗಿ ಎಂಟ್ರಿ
ಅಮರನಾಥ ಎಂಬ ಮೂಲ ಹೆಸರು ಹೊಂದಿದ್ದ ಅಂಬರೀಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಾಗರಹಾವು ಸಿನಿಮಾ ಮೂಲಕ. ವಿಷ್ಣುವರ್ಧನ್ ಕೂಡ ನಟನಾಗಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಿದ್ರು. ಅಂಬಿ ವಿಲನ್ ಆಗಿ ಈ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಾರೆ. ಅಂಬಿ ಅವರದ್ದು ಈ ಚಿತ್ರದಲ್ಲಿ ಚಿಕ್ಕಪಾತ್ರವಾಗಿದ್ರೂ ರಾತ್ರೋ ರಾತ್ರಿ ದೊಡ್ಡ ಮಟ್ಟದ ಹೆಸರು ತಂದು ಕೊಡುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೇ, ಅಂಬಿ ನಾಗರಹಾವು ಸಿನಿಮಾದಲ್ಲಿ ನಟಿ ಆರತಿ ಅವರನ್ನು ಚುಡಾಯಿಸುವ ದೃಶ್ಯವಿದೆ. ಆದರೆ ಅಂಬಿ ಈ ಸಿನಿಮಾದಲ್ಲಿ ನಟಿಸುವ ಮೊದಲೇ ಆರತಿಯನ್ನು ಚುಡಾಯಿಸುತ್ತಿದ್ದರಂತೆ. ಈ ವಿಷ್ಯ ಅದೆಷ್ಟೋ ಜನರಿಗೆ ಗೊತ್ತೆ ಇಲ್ಲ.
ಅಂಬರೀಶ್ ಆರತಿ ಒಂದೇ ಕಾಲೇಜಲ್ಲಿ ಓದಿದ್ದು
ಅಂಬರೀಶ್ ಮತ್ತು ಆರತಿ ಓದಿದ್ದು ಒಂದೇ ಕಾಲೇಜಿನಲ್ಲಿ. ಕಾಲೇಜು ಕ್ಯಾಂಪಸ್ನಲ್ಲಿ ಆರತಿ ಎದುರಾದಾಗ ಅಂಬಿ ಯಾವಾಗಲೂ ಅವರನ್ನು ಚುಡಾಯಿಸುತ್ತಿದ್ದರಂತೆ. ಈ ವಿಷಯವನ್ನ ಸ್ವತಃ ಅಂಬರೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.