ಮೂರು ದಿನಗಳ ಕಾಲ ಅದ್ದೂರಿಯಾಗಿ ನೆರವೇರಿದ್ದು ಆಯ್ತು, ತಾರೆಯರು , ಗಣ್ಯರು ಆಗಮಿಸಿ ಸಂಭ್ರಮಿಸಿದ್ದು ಆಯ್ತು. ಇಶಾ ಅಂಬಾನಿಯ ವಿವಾಹದ ಬಳಿಕ ಮಗನ ಮದುವೆಯೂ ನೆರವೇರಿದ್ದು ಈ ಅದ್ದೂರಿ ವಿವಾಹಕ್ಕೆ ಬಾಲಿವುಡ್ ತಾರೆಯರು, ಕ್ರೀಡಾತಾರೆಯರು ಸೇರಿದಂತೆ ಗಣ್ಯಾತಿ ಗಣ್ಯರು ಸಾಕ್ಷಿಯಾದರು.
ಈ ನಡುವೆ ಇಶಾ ಅಂಬಾನಿ ವಿವಾಹ ಸಮಾರಂಭಕ್ಕಾಗಿ ಅಂಬಾನಿ 110 ಕೋಟಿ ರೂಪಾಯಿ ಖರ್ಚು ಮಾಡಿದರೆ, ಆಕಾಶ್ ಅಂಬಾನಿ ವಿವಾಹ ಸಮಾರಂಭದ ವೆಚ್ಚ ಇದಕ್ಕಿಂತಲೂ ಜಾಸ್ತಿ ಎನ್ನಲಾಗುತ್ತಿದೆ.
ಅಂದಹಾಗೆ ವಿವಾಹ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದ ಬಚ್ಚನ್ ಕುಟುಂಬ, ಶಾರೂಖ್ ಖಾನ್ ಕುಟುಂಬ ಸದಸ್ಯರು, ವಿವಾಹ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಆಕಾಶ್ ಅಂಬಾನಿ, ಶಾರೂಖ್ ಖಾನ್ ಅವರನ್ನು ಸೈಡ್ ಗೆ ನಿಲ್ಲುವಂತೆ ಸೂಚಿಸಿ ತನ್ನ ತಾಯಿಯನ್ನು ಕರೆದು ನೃತ್ಯ ಮಾಡುತ್ತಿದ್ದಾರೆ.
ನೀತಾ ಅಂಬಾನಿ ಬರುತ್ತಿರುವಾಗ, ಅಲ್ಲೇ ನೃತ್ಯ ಮಾಡುತ್ತಿದ್ದ ಶಾರೂಖ್ ಖಾನ್ ಅವರನ್ನು ಸೈಡ್ ಗೆ ನಿಲ್ಲುವಂತೆ ಕೈ ಬೆರಳು ಸೂಚಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಬಳಿಕ ತಾಯಿಯನ್ನು ಸ್ವಾಗತಿಸುವ ಆಕಾಶ್ ಅವರೊಂದಿಗೆ ನೃತ್ಯ ಮಾಡುತ್ತಾನೆ. ಆಕಾಶ್ ಸೂಚನೆಯಂತೆ ಶಾರೂಖ್ ಖಾನ್ ಬದಿಗೆ ಸರಿದು ನಿಂತು, ಆಕಾಶ್ ಹಾಗೂ ಕುಟುಂಬ ಸದಸ್ಯರಿಗೆ ನೃತ್ಯ ಮಾಡಲು ಅವಕಾಶ ಮಾಡಿಕೊಡುತ್ತಾರೆ.