ಪ್ರಶಾಂತ್ ನೀಲ್ ಅಲ್ಲಿಗೆ ಹೋದಾಗ ಶ್ರೀಮುರಳಿ 10 ಜನರ ಜೊತೆ ಫೈಟ್ ಮಾಡ್ತಾ ಇದ್ರು…!

Must read

ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಭೇಟಿ ನೀಡಿದಾಗ ರೋರಿಂಗ್ ಸ್ಟಾರ್ ಶ್ರೀಮುರಳಿ ಫೈಟ್ ಮಾಡ್ತಾ ಇದ್ರು..! ಅದು ಒಬ್ಬಿಬ್ಬರ ಜೊತೆಯಲ್ಲ…10ಮಂದಿ ಜೊತೆಗೆ.
ಇದು ಭರಾಟೆ ಶೂಟಿಂಗ್ ಸ್ಪಾಟ್ ಗೆ ನೀಲ್ ಹೋದ ಸಂದರ್ಭ. ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಭಾವ-ಭಾವ ಮೈದುನರು. ನೀಲ್ ಅವರ ಮೊದಲ ಸಿನಿಮಾ ಉಗ್ರಂನ ನಾಯಕ ನಟ ಇದೇ ಶ್ರೀಮುರಳಿ ಅವರು. ಈ ಸಿನಿಮಾ ಮುರಳಿಗೆ ಬ್ರೇಕ್ ಕೊಟ್ಟ ಮೂವಿ‌.
ನೀಲ್ ಅವರ ಎರಡನೇ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್. ಈ ಸಿನಿಮಾ 5 ಭಾಷೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ.
ನಟ ಮುರಳಿ ಭರಾಟೆ ಸಿಮಾದಲ್ಲಿ ನಟಿಸುತ್ತಿದ್ದಾರೆ. ನೆಲಮಂಗಲದ ಬಳಿ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನೀಲ್ ಭೇಟಿ ನೀಡಿದ್ದರು. ಈ ವೇಳೆ ಮುರಳಿ 10ಮಂದಿ ವಿಲನ್ ಗಳ ಜೊತೆ ಫೈಟ್ ಮಾಡುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಭರಾಟೆ ಚೇತನ್ ನಿರ್ದೇಶನದ ಚಿತ್ರವಾಗಿದೆ. ಕೆಜಿಎಫ್ 2 ನಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್ ನಂತರ ಶ್ರೀಮುರಳಿ ಅವರೊಡನೆ ಉಗ್ರಂ-ವೀರಂ ಸಿನಿಮಾ ಮಾಡಲಿದ್ದಾರೆ.

- Advertisement -spot_img

More articles

- Advertisement -spot_img

Latest article