ಅಂಬಿ ಹೆಸ್ರು ಹೇಳಲು ಯೋಗ್ಯತೆ ಇಲ್ಲದವ್ರು ಬಳಸಿದ್ದಾರೆ : ಸುಮಲತಾ!

Date:

ಬೆಂಗಳೂರು: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸುತ್ತಿದ್ದಾರೆ. ಅಂಬರೀಶ್ ಕಾಲದಲ್ಲಿ ಅಕ್ರಮ ಆಗಿದ್ರೆ ದಾಖಲೆ ಬಿಡುಗಡೆ ಮಾಡಿ ಎಂದು ಸಂಸದೆ ಸುಮಲತಾ ಅಂಬರೀಶ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ಜೆಡಿಸ್ ಅವರು ಅಂಬರೀಶ್ ಅವರು ವಿರುದ್ಧವಾಗಿ ನಿಡಿರುವ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ರವೀಂದ್ರ ಶ್ರೀಕಂಠಯ್ಯ ಇದೇ ರೀತಿ ಮಾತಾಡಲಿ. ಜಿಲ್ಲೆಯ ಜನಕ್ಕೆ ಒಳ್ಳೆಯದಾಗುತ್ತದೆ. ಅವರ ವ್ಯಕ್ತಿತ್ವ ನಿಜ ಸ್ವರೂಪ ಜನಕ್ಕೆ ಗೊತ್ತಾಗುತ್ತಿದೆ. ಶ್ರೀಕಂಠಯ್ಯ ಲೂಸ್ ಟಾಕ್ ಮಾತಾಡ್ತಿದ್ದಾರೆ. ಆಗ ಅಕ್ರಮ ಆಗಿದ್ದು ದಾಖಲೆ ಇದ್ದರೆ ತರೋಕೆ ಹೇಳಿ. ಇಬ್ಬರು ಸೇರು ಹೋರಾಡೋಣ. ಅಂಬರೀಶ್ ಹೆಸರು ಯಾಕೆ ಉಪಯೋಗ ಮಾಡ್ತೀರಾ. ಜಿಲ್ಲೆಯ ಜನ ಎಲ್ಲಾ ನೋಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.


ಅಂಬರೀಶ್ ಸ್ಮಾರಕ ನನ್ನಿಂದ ಆಯ್ತು ಅಂತೀರಾ. ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವರ ಹೆಸರು ಬಳಸ್ತೀರಾ? ನಿಮ್ಮ ಸಾಧನೆ ಇಲ್ಲವಾ. ನೀವು ಏನು ಕೆಲಸ ಮಾಡಿಲ್ಲ. ಅಂಬರೀಶ್ ಹೆಸರು ಹೇಳಿ ಅನುಕಂಪ ಗಿಟ್ಟಿಸುತ್ತೀರಾ ಯಾಕೆ ಕುಮಾರಸ್ವಾಮಿ ಹೀಗೆ ಆಟ ಆಡ್ತಿದ್ದೀರಾ? ಒಬ್ಬೊಬ್ಬ ಶಾಸಕರು ಒಂದೊಂದು ರೀತಿ ಮಾತಾಡ್ತೀರಾ. ಅಂಬರೀಶ್ ಕಾಲದಲ್ಲಿ ಅಕ್ರಮ ಆಗಿದ್ರೆ ದಾಖಲೆ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ.
ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿಲ್ಲ. ಯಡಿಯೂರಪ್ಪ ಸಹಿ ಮಾಡಿದ್ರಿಂದ ಕೆಲಸ ಪ್ರಾರಂಭ ಮಾಡಿದ್ರು. ಸ್ಮಾರಕ ಬಗ್ಗೆ ಮಾತಾಡಲು ದೊಡ್ಡಣ್ಣ, ಶಿವರಾಮ್ ಹೋದಾಗ ಇವರು ಹೇಗೆ ಮಾತಾಡಿದ್ರು ಅಂತ ಅವರನ್ನೇ ಕೇಳಿ ಕುಮಾರಸ್ವಾಮಿ ಅವತ್ತೇ ವಿರೋಧ ಮಾಡಿದ್ರು. ಸ್ಮಾರಕ ಕೇಳಲು ಹೋದಾಗ ಪೇಪರ್ ಮುಖದ ಮೇಲೆ ಎಸೆದು ಹೋಗಿದ್ದು ಕುಮಾರಸ್ವಾಮಿ ಅವರು. ಸ್ಮಾರಕ ಅವರ ಮಾಡುವಾಗ ಯಾವೇಲ್ಲ ಮಾತುಗಳನ್ನು ಆಡಿದ್ದರು ಎನ್ನುವುದನ್ನು ನೆನೆಪಿಸಬೇಕು. ಈ ವಿಚಾರವನ್ನು ನಾನು ಸಿಂಗಾಪುರ್ ಸಮಾವೇಶದಲ್ಲಿ ಆದಿಚುಂಚನಗಿರಿ ಶ್ರೀ ಬಳಿ ಇದ್ದನ್ನ ನಾನು ಹೇಳಿದ್ದೆ. ಅವರು ಅಂದು ಧೈರ್ಯದ ಮಾತುಗಳನ್ನು ಹೇಳಿದ್ದರು. ಇದೀಗ ಅಂಬರೀಶ್ ಸ್ಮಾರಕದಿಂದ ಕ್ರೆಡಿಟ್ ತೆಗೆದುಕೊಳ್ತಿದ್ದಾರೆ. ವಿಷ್ಣು ಸ್ಮಾರಕವೂ ಆರಂಭ ಆಗಿದೆ. ಯಾಕೆ ತಿರುಚುತ್ತಿದ್ದಾರೆ ಗೊತ್ತಿಲ್ಲ ಒಳ್ಳೆ ಜಾಗದಲ್ಲಿ ವಿಷ್ಣು ಸ್ಮಾರಕ ಮಾಡಿದ್ದಾರೆ. ದೊಡ್ಡಣ್ಣ ಅವತ್ತು ಪೇಪರ್ ಮುಖದ ಮೇಲೆ ಎಸೆದ್ರು ಕುಮಾರಸ್ವಾಮಿ ಅಂತ ಕಣ್ಣೀರು ಹಾಕಿದ್ದರು.
ಡೀಲ್ ಮಾಡೋದು ಅವ್ರ ಬುದ್ಧಿ. ಅಕ್ರಮ ಮಾಡೋಕೆ ಡೀಲ್ ಮಾಡೋಕೆ ಕುಮಾರಸ್ವಾಮಿ ಅವ್ರಿಗೆ ಗೊತ್ತು ಪ್ರತಿಯೊಂದು ಕೆಲಸದಲ್ಲೂ ಶಾಸಕರ ಕ್ಷೇತ್ರದಲ್ಲಿ ಅಕ್ರಮ ನಡೆಯುತ್ತಿದೆ. ಅಕ್ರಮದ ಬಗ್ಗೆ ನಾನು ಮಾತಾಡಿದ್ರೆ ಈಗ ನನ್ನ ಮೇಲೆ ಮಾತಾಡ್ತಿದ್ದೀರಾ..? ಫೋನ್ ಟ್ಯಾಪ್ ಮಾಡಿದ್ದು ನೀವು. ಯಾವ ಕಳ್ಳನು ನಾನು ಕಳ್ಳ ಅಂತ ಹೇಳ್ತಾನಾ? ಸಿಬಿಐ ಅಧಿಕಾರಿಗಳು ಎರಡು ಬಾರಿ ನನ್ನಿಂದ ಮಾಹಿತಿ ಪಡೆದಿದ್ದಾರೆ. ಟ್ಯಾಪ್ ಆಗಿರೋ ಲಿಸ್ಟ್ ಕೊಟ್ಟರು. ಯಾರೇ ಸಿಎಂ ಆಗಿದ್ರು ಅವತ್ತು ಸಹಕಾರ ಕೊಡ್ತಿದ್ದರು. ನಾನು ಯಾರನ್ನು ಎಡ ಬಲ ಡೀಲಿಂಗ್ ಇಟ್ಟುಕೊಂಡಿಲ್ಲ. ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ. ನನಗೆ ಯಾವುದೇ ಭಯ ಇಲ್ಲ ಎಂದು ಸುಮಲತಾ ಸವಾಲ್ ಹಾಕಿದ್ದಾರೆ.

ಅಂಬರೀಶ್ ನಮ್ಮನ್ನು ಅಗಲಿದಾಗ ಕುಮಾರಸ್ವಾಮಿ ಅವತ್ತೆ ಮಂಡ್ಯಕ್ಕೆ ಬಂದ್ರೆ ಸಮಸ್ಯೆ ಆಗುತ್ತೆ ಅಂತ ಹೇಳಿದ್ರು. ಅಭಿ ಮಂಡ್ಯಕ್ಕೆ ಹೋಗಬೇಕು ಅಂತ ಹೇಳಿದ್ರು ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಈಗ ಪದೇ ಪದೇ ಸುಳ್ಳು ಹೇಳ್ತಿದ್ದಾರೆ. ರಾಜ್ ಕುಮಾರ್, ವಿಷ್ಣು, ಅಂಬಿ ಬಗ್ಗೆ ಮಾತಾಡೋ ಮುನ್ನ ಸಂಸ್ಕಾರ ಇಟ್ಟುಕೊಳ್ಳಿ. ರಾಜ್ ಕುಮಾರ್ ಮೃತರಾದಾಗ ಸಿಎಂ ಆಗಿದ್ದು ಕುಮಾರಸ್ವಾಮಿ. ನೈತಿಕತೆ, ಸಂಸ್ಕಾರ ಇದ್ದರೆ ಅಂಬರೀಶ್ ಬಗ್ಗೆ ಮಾತಾಡೋದು ಬಿಡಿ ಅಕ್ರಮ ಗಣಿಗಾರಿಕೆ ಬೇನಾಮಿ ಹೆಸರಲ್ಲಿ ಮಾಡ್ತಿದ್ದಾರೆ. ನಿಮ್ಮದು ಯಾವುದೇ ಅಕ್ರಮ ಇಲ್ಲ ಅಂದ್ರೆ ನೀವು ಯಾಕೆ ಮಾತಾಡ್ತಿದ್ದೀರಾ. ಜೆಡಿಎಸ್ ಶಾಸಕರು ಏನ್ ಬೇಕೋ ಮಾತಾಡಿ. ಎರಡು ವರ್ಷ ಚುನಾವಣೆ ಇದೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...