ಅಕ್ಕಪಕ್ಕ ಕುಳಿತು ‘ಸೀತಾರಾಮ ಕಲ್ಯಾಣ’ ವೀಕ್ಷಿಸಿದ ಮಾಜಿ ಮತ್ತು ಹಾಲಿ ಸಿಎಂ..
ನಾಳೆ ರಾಜ್ಯಾದ್ಯಂತ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ತೆರೆಗೆ ಬರ್ತಿದೆ.. ಬೆಳಗ್ಗೆ 7 ಗಂಟೆಗೆ ಷೋ ಆಯೋಚಿಸಲಾಗಿದ್ದು, ನಿಖಿಲ್ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದ್ದಾರೆ.. ಹೀಗಾಗೆ ಇಂದು ಗಣ್ಯರಿಗಾಗಿ ಪ್ರೀಮಿಯರ್ ಷೋವನ್ನ ಆಯೋಜಿಸಲಾಗಿತ್ತು.. ಇಡೀ ಕರ್ನಾಟಕ ರಾಜಕೀಯ ದಿಗ್ಗಜರೆಲ್ಲ ಒಟ್ಟಿಗೆ ಕುಳಿತು ಮೂರು ಗಂಟೆ ರಿಲ್ಯಾಕ್ಸ್ ಮೂಡ್ ನಲ್ಲಿ ಸೀತಾರಾಮ ಕಲ್ಯಾಣ ಚಿತ್ರವನ್ನ ವೀಕ್ಷಿಸಿದ್ರು..
ಕುಮಾರಸ್ವಾಮಿ ಅವರ ಮಗ ನಾಯಕನಾಗಿರುವ ಸಿನಿಮಾ ಇದಾಗಿರೋದ್ರಿಂದ ಇಂದು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ, ಈಶ್ವರಪ್ಪ ಸೇರಿದಂತೆ ಹಲವರು ಸಿನಿಮಾ ವೀಕ್ಷಿಸಿದ್ರು..
ಅಂದಹಾಗೆ ಸೀತಾರಾಮ ಕಲ್ಯಾಣ ಚಿತ್ರವನ್ನ ಎ.ಹರ್ಷ ನಿರ್ದೇಶನ ಮಾಡಿದ್ದಾರೆ.. ರಚಿತಾ ರಾಮ್ ನಿಖಿಲ್ ನಾಯಕಿಯಾಗಿದ್ದು, ನಾಳೆ ರಾಜ್ಯಾದ್ಯಂತ ಸಿನಿಮಾ ತೆರೆ ಕಾಣುತ್ತಿದೆ..