ಅಕ್ಟೋಬರ್ ನಲ್ಲಿ ರಜನಿಕಾಂತ್ – ಯಶ್ ಮೆಗಾ ಫೈಟ್?

Date:

ಅಕ್ಟೋಬರ್ನಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ , ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಡುವೆ ಬಿಗ್ ಫೈಟ್ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಸ್ಯಾಂಡಲ್ವುಡ್ ಮತ್ತು ಕಾಲಿವುಡ್ ಅಂಗಳದಲ್ಲಿ ಇಂತಹದ್ದೊಂದು ಮೆಗಾ ವಾರ್ ಸುದ್ದಿ ಹರಡುತ್ತಿದೆ. 

ಹೌದು ಕೆಜಿಎಫ್ ಸಿನಿಮಾ ಮೂಲಕ ಪಂಚಭಾಷಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ -2 ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನ್ಯಾಷನಲ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯದ , ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಈಗಾಗಲೇ ಸಖತ್ ಸದ್ದು ಮಾಡುತ್ತಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 2018ರಲ್ಲಿ ಚಾಪ್ಟರ್ ಬಂದಾಗಲೇ ಚಾಪ್ಟರ್ 2 ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಇದೀಗ ಆ ಕುತೂಹಲ ತಣಿಯುವ ಸಮಯ ಬಂದಿದೆ. ಅಕ್ಟೋಬರ್ 23ರಂದು ಕೆಜಿಎಫ್ 2 ರಿಲೀಸ್ ಮಾಡುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.


ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕೆಜಿಎಫ್ ರಿಲೀಸ್ ಡೇಟ್ ಅನೌನ್ಸ್ ಆದ ಬೆನ್ನಲ್ಲೇ ಕಾಲಿವುಡ್ ತಲೈವಾ ರಜನಿಕಾಂತ್ ಹೊಸ ಸಿನಿಮಾ ಚರ್ಚೆ ಶುರುವಾಗಿದೆ. ರಜನಿಕಾಂತ್, ಖುಷ್ಪು, ನಯನಾತಾರ, ಕೀರ್ತಿ ಸುರೇಶ್ ಸೇರಿದಂತೆ ದೊಡ್ಡ ತಾರಾಗಣ ಇರುವ ಅನ್ನಾಥೆ ಸಿನಿಮಾ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ ಎಂಬ ಮಾತು ಕೇಳಿಬಂದಿವೆ.

ಯಶ್ ಅಭಿನಯದ ಕೆಜಿಎಫ್ -2 ಮತ್ತು ರಜನಿಕಾಂತ್ ಅವರ ಅನ್ನಾಥೆ ಎರಡೂ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಆಸುಪಾಸಿನಲ್ಲಿ ರಿಲೀಸ್ ಆದಲ್ಲಿ ಬಾಕ್ಸ್ ಆಫೀಸಲ್ಲಿ ಮೆಗಾ ಫೈಟ್ ಏರ್ಪಡೋದ್ರಲ್ಲಿ ಡೌಟಿಲ್ಲ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...