No menu items!
12.4 C
Munich
Wednesday, April 29, 2026

ಕೊರೋನಾದಿಂದ ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಎಷ್ಟು ನಷ್ಟ ಆಗುತ್ತೆ ಗೊತ್ತಾ?

Must read

ಕೊರೋನಾ, ಕೊರೋನಾ , ಕೊರೋನಾ.. ಎಲ್ಲೆಲ್ಲೂ ಮಹಾಮಾರಿ ಕೊರೋನಾದ್ದೇ ಕೋಲಾಹಲ… ಮಾಲ್ಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಎಲ್ಲವೂ ಕೊರೋನಾದಿಂದ ಬಂದ್ ಆಗಿವೆ! ಸದಾ ಜಿಗಿ ಜಿಗಿ ಅಂತಿದ್ದ ಸಾರ್ವಜನಿಕ ಸ್ಥಳಗಳು ಬಿಕೋ ಎನ್ನುತ್ತಿವೆ. ವ್ಯಾಪಾರ ವಹಿವಾಟುಗಳು ಪಾತಾಳಕ್ಕೆ ಕುಸಿದಿವೆ.. ಜನ ಸ್ವಯಂ ಪ್ರೇರಿತರಾಗಿ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಹೆಮ್ಮಾರಿ ಕೊರೋನಾ ಭೀತಿ ಕ್ರೀಡೆಗೂ ತಟ್ಟಿದೆ.


ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ, ಈಗಾಗಲೇ ನಿವೃತ್ತಿ ಘೋಷಿಸಿರುವ ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮದ ರೋಡ್ಸೇಫ್ಟಿ ಟಿ20 ಸರಣಿ ಸೇರಿದಂತೆ ಅನೇಕ ಕ್ರಿಕೆಟ್ ಪಂದ್ಯಾವಳಿಗಳು, ನಾನಾ ಕ್ರೀಡಾಕೂಟಗಳು ರದ್ದಾಗಿವೆ.
ಪ್ರತಿಷ್ಠಿತ ಕ್ರಿಕೆಟ್ ಲೀಗ್ ಇಂಡಿಯನ್ ಕ್ರಿಕೆಟ್ ಲೀಗ್ ಮೇಲೂ ಕೊರೋನಾ ಕರಿನೆರಳು ಬೀರಿದೆ. ಬಿಸಿಸಿಐ ಐಪಿಎಲ್ ಅನ್ನು ಮುಂದೂಡಿದೆ. ಮಾರ್ಚ್ 29ರಿಂದ ನಡೆಯೇ ಬೇಕಿದ್ದ ಐಪಿಎಲ್ ಸದ್ಯದ ಮಟ್ಟಿಗೆ ಏಪ್ರಿಲ್ 19ರವರೆಗೆ ಮುಂದೂಡಲ್ಪಟ್ಟಿದೆ. ಆದರೆ ಅಂದಿನಿಂದ ಕೂಡ ನಡೆಯುವುದು ಅನುಮಾನ. ಕೊರೋನಾ ಅಟ್ಟಹಾಸದ ಅವಲೋಕನದ ಬಳಿಕ ದಿನಾಂಕ ನಿಗಧಿ ಆಗಲಿದೆ. ಬಹುತೇಕ ಟೂರ್ನಿ ರದ್ದಾಗುವ ಸಾಧ್ಯತೆಯೇ ಹೆಚ್ಚಿದೆ.


ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುರಕ್ಷತೆಗೆ ಮೊದಲ ಆದ್ಯತೆ ಎಂದಿದ್ದಾರೆ. ಸಾಂಕ್ರಮಿಕ ರೋಗ ಕೊರೋನಾ ಭೀತಿಯಿಂದ ಈ 13ನೇ ಆವೃತ್ತಿಯ ಐಪಿಎಲ್ ರದ್ದಾಗುವ ಸಾಧ್ಯತೆಯೇ ಹೆಚ್ಚಿದೆ. ಒಂದು ವೇಳೆ ಐಪಿಎಲ್ ರದ್ದಾದಲ್ಲಿ ಬಿಸಿಸಿಐಗೆ ಕೋಟಿ ಕೋಟಿ ರೂ ನಷ್ಟವಾಗಲಿದೆ.
ಐಪಿಎಲ್ ರದ್ದಾಗುವುದರಿಂದ ಕಡಿಮೆ ಅಂದ್ರೂ 10 ಕೋಟಿ ರೂ ನಷ್ಟ ಸಂಭವಿಸಲಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಕೊರೋನಾ ಬೇರೆ ಬೇರೆ ಉದ್ಯಮಕ್ಕೆ ನಷ್ಟ ಉಂಟು ಮಾಡಿದಂತೆ ಕ್ರಿಕೆಟ್ಗೂ ಭಾರಿ ನಷ್ಟ ಉಂಟು ಮಾಡುತ್ತಿದೆ. ಈಗಾಗಲೇ ಐಪಿಎಲ್ ಗುಂಗಿಗೆ ಹೋಗಿದ್ದ ಜನ ಇದೀಗ ಬೇಸರಗೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article