ಅಕ್ಷಯ ತೃತಿಯಕ್ಕೆ ಚಿನ್ನ ಖರೀದಿಸುವ ಮುನ್ನ ಇದನ್ನು ಓದಿರಿ..!?

0
187

ಇನ್ನೇನು ಅಕ್ಷಯ ತೃತಿಯಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ ಭಾರತೀಯ ಸಂಪ್ರದಾಯದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಸ್ಥಾನ ಮಾನ ಇದೆ, ವರ್ಷದ ಎಲ್ಲಾ ದಿನಗಳಿಗಿಂತ ಅಕ್ಷಯ ತೃತೀಯದಂದೆ ಅತಿ ಹೆಚ್ಚು ಚಿನ್ನ ಮಾರಾಟವಾಗುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ, ಏಕೆಂದರೆ ಈ ದಿನದಂದು ಚಿನ್ನ ಖರೀದಿಸುವುದನ್ನು ಮಂಗಳಕರ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇಂತಹ ಸಂಧರ್ಭದಲ್ಲೇ ಜನರು ಸ್ವಲ್ಪ ಯಾಮಾರೋದು ಹೆಚ್ಚು ಆದ ಕಾರಣ ನೀವು ಚಿನ್ನವನ್ನು ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಒಳ್ಳೆಯದು..?

* ಚಿನ್ನವನ್ನು ಖರೀದಿಸುವಾಗ ಮೊದಲು ಗಮನಿಸಬೇಕಾದ ವಿಷಯವೆಂದರೆ ಚಿನ್ನದ ಅದರ ಹಾಲ್ ಮಾರ್ಕ್ ಗುರುತು, ಹೌದು ಚಿನ್ನವನ್ನು ಖರೀದಿಸುವಾಗ ಮೊದಲು ಅದರ ಹಾಲ್ಮಾರ್ಕ್ ನ್ನು ಪರೀಕ್ಷಿಸಬೇಕು ಭಾರತೀಯ ಕಾನೂನಿನ (ಬಿಐಎಸ್ ಕಾಯಿದೆ) ಪ್ರಕಾರ ಲೋಹಕ್ಕೆ ಸಂಭಂಧಪಟ್ಟ ವಿಚಾರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶುದ್ಧತೆಗೆ ಅನುಗುಣವಾಗಿ ದೃಢೀಕರಿಸಲು ಆಭರಣಕಾರರು ಚಿನ್ನಾಭರಣಗಳ ಪ್ರತಿಯೊಂದು ತುಣುಕುಗಳನ್ನು ಹಾಲ್ಮಾರ್ಕಿಂಗ್ ಸಂಸ್ಥೆ ಮೌಲ್ಯಮಾಪನ ಮಾಡುತ್ತದೆ, ಮೌಲ್ಯಮಾಪನ ಮಾಡಿದ ನಂತರ ಅದರ ಪರಿಶುದ್ದತೆಯ ಆಧಾರದ ಮೇಲೆ ಪ್ರಮಾಣ ಪತ್ರವನ್ನು ನೀಡುತ್ತದೆ, ಹೀಗೆ ಪ್ರಮಾಣ ಪತ್ರ ನೀಡಿದ ಹಾಲ್ಮಾರ್ಕ್ ಇರುವ ಚಿನ್ನ ಮಾತ್ರ ಖರೀದಿಸಲು ಯೋಗ್ಯವಾಗುತ್ತದೆ

* ಚಿನ್ನ ಖರೀದಿಸುವಾಗ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅದರ ಪರಿಶುದ್ದತೆಯನ್ನು ಪರೀಕ್ಷಿಸಿ ಅದು 24 ಕ್ಯಾರೆಟ್ ಆಗಿದೆಯೆ ಎಂದು ಧೃಡೀಕರಿಸಿಕೊಂಡು ನಂತರ ಖರೀದಿಸುವುದು.

* ಇನ್ನು ಅಕ್ಷಯ ತೃತಿಯಕ್ಕೆ ಚಿನ್ನ ಖರೀದಿ ಮಾಡಲೇ ಬೇಕು ಎಂದು ನಿರ್ದರಿಸಿದ್ದರೆ ಆಭರಣದ ಬದಲಾಗಿ ಚಿನ್ನದ ನಾಣ್ಯಗಳನ್ನು ಖರೀದಿಸುವುದು ಉತ್ತಮ, ಯಾಕೆಂದರೆ ಆಭರಣಗಳ ಮೇಲೆ ವಿಧಿಸುವ ತಯಾರಿಕಾ ಶುಲ್ಕಕ್ಕಿಂತ ನಾಣ್ಯಗಳ ಮೇಲೆ ವಿಧಿಸುವ ತಯಾರಿಕಾ ಶುಲ್ಕ ತುಂಬಾ ಕಡಿಮೆ ಇರುತ್ತದೆ ಆದ್ದರಿಂದ ಆಭರಣಗಳಿಗಿಂತ ನಾಣ್ಯವೇ ಉತ್ತಮ.
* ಕೊನೆಯದಾಗಿ ನೀವು ಯಾವುದೇ ಆಭರಣ ತಯಾರಕರ ಬಳಿ ಚಿನ್ನವನ್ನು ಖರೀದಿ ಮಾಡಿದರೂ ಸಹ ಚಿನ್ನದ ಶುಲ್ಕದ ಪ್ರತೀ ವಿವರ ಸರಿಯಾಗಿ ಇರುವ ಪ್ರಮಾಣಿಕೃತ ಬಿಲ್ ಪಡೆಯುವುದನ್ನು ಮರೆಯುವಂತಿಲ್ಲ ಒಂದು ವೇಳೆ ನೀವು ಮರೆತರೆ ನೀವು ಖರೀದಿ ಮಾಡಿದ ಚಿನ್ನಕ್ಕೆ ಯಾವುದೇ ರೀತಿ ಮಾನ್ಯತೆ ಇರುವುದಿಲ್ಲ.

ಆದ್ದರಿಂದ ಅಕ್ಷಯ ತೃತಿಯದ ದಿನ ಚಿನ್ನ ಖರೀದಿ ಮಾಡುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಒಳಿತು.

 

LEAVE A REPLY

Please enter your comment!
Please enter your name here