ಅಣ್ಣಾ ಮಲೈ .. ಈ ಹೆಸ್ರು ಕೇಳದೇ ಇರುವವರೇ ಖಡಕ್ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ವೈಯಕ್ತಿಕ ಕಾರಣಗಳಿಂದ ಸೇವೆಗೆ ಗುಡ್ ಬೈ ಹೇಳಿದ ಮೇಲೆ ಬಹಳಷ್ಟು ಮಂದಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅಣ್ಣಾ ಮಲೈ ಅವರು ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದರು. ಅವರ ಖದರ್, ದಕ್ಷತೆ ಕಂಡ ಯುವಕರು ನಾವೂ ಇವರಂತೇ ಆಗಬೇಕು ಅಂತ ಹಂಬಲಿಸಿದ್ದಾರೆ. ತಂದೆ-ತಾಯಂದಿರು ನಮ್ಮ ಮಗನನ್ನು ಅಣ್ಣಾ ಮಲೈ ರೀತಿ ಖಡಕ್ ಪೊಲೀಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂದುಕೊಂಡಿದ್ದಾರೆ.
ಹೀಗೆ ಅಣ್ಣಾ ಮಲೈ ಅವರಿಂದ ಟಗರು ಸಿನಿಮಾದ ಡಾಲಿ ಖ್ಯಾತಿಯ ಧನಂಜಯ್ ಕೂಡ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇದನ್ನು ನಂಬಲು ಕಷ್ಟವಾದರೂ ನಂಬಲೇ ಬೇಕು.. ಧನಂಜಯ್ ಪೊಲೀಸ್ ಆಗಿದ್ದಾರೆ ರೀ.. ಆದರೆ, ರಿಯಲ್ ಲೈಫ್ನಲ್ಲಿ ಅಲ್ಲ.. ರೀಲ್ ಲೈಫ್ನಲ್ಲಿ..!
ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಲಗ ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿದೆ. ಟಗರು ಟೀಮ್ ಸಲಗಾಗೇ ಸಾಥ್ ನೀಡಿದ್ದು ಗೊತ್ತೇ ಇದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಂತಿಂತಾಪೊಲೀಸ್ ಅಲ್ಲ ಖಡಕ್ ಪೊಲೀಸ್..!
ಧನಂಜಯ್ ಲುಕ್ ಅಣ್ಣಾ ಮಲೈ ಅವರನ್ನೇ ಹೋಲುವಂತಿದ್ದು, ಅಣ್ಣಾಮಲೈ ಅವರೇ ಧನಂಜಯ್ ಅವರಿಗೆ ಸ್ಫೂರ್ತಿಯಂತೆ. ಅಣ್ಣಾಮಲೈ ಸ್ಟೈಲ್ನಲ್ಲಿ ಧನಂಜಯ್ ಅವರನ್ನು ಪೊಲೀಸ್ ಗೆಟಪ್ ನಲ್ಲಿ ಕಂಡ ಮೇಲೆ ಸಲಗ ಸಿನಿಮಾದ ಮೇಲೆ ಕುತೂಹಲ ದುಪ್ಪಟ್ಟಾಗಿದೆ.