ಪುನೀತ್ ರಾಜ್ಕುಮಾರ್ ಅವರು ಅಣ್ಣಾವ್ರ ಹಾದಿಯಲ್ಲಿ ನಡೆಯುತ್ತಿರುವ ನಟ ಎಂದು ಹಲವಾರು ಅಭಿಮಾನಿಗಳು ಹೇಳುತ್ತಾರೆ. ಅಪ್ಪು ಅವರಲ್ಲಿ ರಾಜಣ್ಣನವರನ್ನು ನೋಡುತ್ತಿರುವ ಅಭಿಮಾನಿ ಬಳಗ ದೊಡ್ಡ ಮಟ್ಟದಲ್ಲಿಯೇ ಇದೆ. ಇನ್ನು ಇತ್ತೀಚೆಗಷ್ಟೇ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಅಪ್ಪು ಅವರನ್ನು ಅಣ್ಣಾವ್ರು ಅಭಿನಯಿಸಿರುವ ಚಿತ್ರಗಳನ್ನು ರಿಮೇಕ್ ಮಾಡುತ್ತೀರಾ ಎಂದು ಪ್ರಶ್ನೆಯನ್ನು ಅಪ್ಪು ಅವರಿಗೆ ಕೇಳಿದರು.

ಇನ್ನು ಸ್ಪರ್ಧೆ ಈ ಪ್ರಶ್ನೆ ಕೇಳುತ್ತಿದ್ದಂತೆ ಆ ಪ್ರಶ್ನೆಗೆ ಉತ್ತರವಾಗಿ ಕೈ ಮುಗಿದ ಅಪ್ಪು ಯಾವುದೇ ಕಾರಣಕ್ಕೂ ಅಣ್ಣಾವ್ರ ಚಿತ್ರಗಳನ್ನು ರಿಮೇಕ್ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದರು. ಅಣ್ಣಾವ್ರು ಅತಿ ದೊಡ್ಡ ಮೇರು ನಟ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವಂತಹ ನಟ, ಅವರ ಅಭಿಮಾನಿಗಳಲ್ಲಿ ನಾನೂ ಸಹ ಒಬ್ಬ. ಒಬ್ಬ ಅಭಿಮಾನಿಯಾಗಿ ಅವರ ಚಿತ್ರಗಳನ್ನು ನಾನು ನೋಡುತ್ತೇನೆ ಹೊರತು ಅವರ ಚಿತ್ರಗಳನ್ನು ನಾನು ರಿಮೇಕ್ ಮಾಡುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದರು.






