ಹೈದರಾಬಾದ್ ನಲ್ಲಿ ಅನಿರ್ದಿಷ್ಟ ವೆಸಗಿದ ಹಾಗೂ ಪಶು ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದೆವು. ಈ ಸಮಯದಲ್ಲಿ ಮೊಹಮ್ಮದ್ ಆರಿಫ್ ಮತ್ತು ಕೇಶವುಲು ಶಸ್ತ್ರಾಸ್ತ್ರವನ್ನು ಕಸಿದುಕೊಂಡರು. ಆರೋಪಿಗಳು ಪೊಲೀಸರಿಂದ ಬಂದೂಕನ್ನು ಕಿತ್ತು ಗುಂಡು ಹಾರಿಸಿದ್ದರು ಎಂದು ತಿಳಿಸಿದ್ದಾರೆ.
ಬೆಳಗಿನ ಜಾವ 5.45ರಿಂದ 6 ಗಂಟೆ ಮಧ್ಯೆ ಎನ್ ಕೌಂಟರ್ ನಡೆದಿದೆ ಎಂದಿದ್ದಾರೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ದಾಖಲೆ ಇದೆ. ಒಬ್ಬ 24 ವರ್ಷದವನಾದ್ರೆ ಉಳಿದ ಮೂವರ ವಯಸ್ಸು 20 ವರ್ಷವೆಂದು ಅವ್ರು ಹೇಳಿದ್ದಾರೆ. ಘಟನೆ ವೇಳೆ ಶಸ್ತ್ರಾಸ್ತ್ರ ನೀಡಿ ಶರಣಾಗುವಂತೆ ಆರೋಪಿಗಳಿಗೆ ಪೊಲೀಸರು ಹೇಳಿದ್ದರಂತೆ. ಆದ್ರೆ ಆರೋಪಿಗಳು ಫೈರಿಂಗ್ ಮುಂದುವರೆಸಿದ್ದರಂತೆ. ಹಾಗಾಗಿ ನಾವು ಫೈರಿಂಗ್ ಮಾಡಬೇಕಾಯ್ತು ಎಂದು ಪೊಲೀಸರು ಹೇಳಿದ್ದಾರೆ