ಹೈದರಾಬಾದ್ ಅತ್ಯಾಚಾರ ಸಂತ್ರಸ್ತೆ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ದೇಶದಾದ್ಯಂತ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತ ಹೇಯ ಕೃತ್ಯಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಬಗ್ಗೆ ಬಾರಿ ವಿರೋಧ ಹಾಗು ಪ್ರತಿಭಟನೆ ನೆಡೆಯುತ್ತಿದ್ದರೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಯಾರನ್ನು ಕೊಲ್ಲುವ ನಮಗಿಲ್ಲ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡುವ ಅಗತ್ಯವಿಲ್ಲ ಎಂಬ ಹೇಳಿಕೆಯನ್ನು ನೀಡಿ ಎಲ್ಲರ ಟೀಕೆಗೆ ಗುರಿಯಾಗಿದೆ.
ಇಂತಹ ಹೇಳಿಕೆಗಳನ್ನು ನೀಡುವುದು ಅವರ ಮಾನಸಿಕ ಸ್ಥಾನವನ್ನು ತೋರಿಸುತ್ತವೆ. ಇಡೀ ರಾಷ್ಟ್ರವು ಮರಣದಂಡನೆಗೆ ಒತ್ತಾಯಿಸುತ್ತಿರುವಾಗ, ಅವರು ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ ಎಂಬ ಮಾತುಗಳು ಎಲ್ಲರಲ್ಲೂ ಕೇಳಿ ಬರ್ತಾ ಇದೆ .