ದೂರು ನೀಡಿದ ವ್ಯಕ್ತಿ ಹಾಗೂ ಆರೋಪಿತ ವ್ಯಕ್ತಿ ಇಬ್ಬರು ರಾಜ್ಯದ ಮುಂದಿನ ಭವಿಷ್ಯ ಎಂದು ಹೇಳಿ ಗುವಾಹಟಿ ಹೈಕೋರ್ಟ್ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅತ್ಯಾಚಾರ ಆರೋಪಿತ ವಿದ್ಯಾರ್ಥಿಗೆ ಜಾಮೀನು ಮಂಜೂರು ಮಾಡಿದೆ. ಆಗಸ್ಟ್ 13 ರಂದು ಗುವಾಹಟಿ ಹೈಕೋರ್ಟ್ ಮಾರ್ಚ್‌ನಲ್ಲಿ ಅತ್ಯಾಚಾರ ಆರೋಪಕ್ಕೆ ಒಳಗಾದ ಐಐಟಿ ವಿದ್ಯಾರ್ಥಿ ಉತ್ಸವ್ ಕದಮ್‌ಗೆ ಜಾಮೀನು ನೀಡಿದೆ. ಈ ಜಾಮೀನು ನೀಡುವ ಸಂದರ್ಭದಲ್ಲಿ, ನ್ಯಾಯಮೂರ್ತಿ ಅಜಿತ್ ಬೂರ್ತಾಕುರ್, “ಸಂತ್ರಸ್ತೆ ಹಾಗೂ ಅತ್ಯಾಚಾರಿ ಆರೋಪಿಯು ಇಬ್ಬರೂ ಐಐಟಿ ವಿದ್ಯಾರ್ಥಿಗಳು ಆಗಿರುವ ಕಾರಣ ಇಬ್ಬರೂ ರಾಜ್ಯಗಳ ಮುಂದಿನ ಭವಿಷ್ಯ,” ಎಂದು ಹೇಳಿದ್ದಾರೆ.
“ಗುವಾಹಟಿಯ ಐಐಟಿಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಇಬ್ಬರೂ ವಿದ್ಯಾರ್ಥಿಗಳು ಕೂಡಾ ಪ್ರತಿಭಾವಂತರು. ಹಾಗೆಯೇ 19 ರಿಂದ 21 ವಯಸ್ಸಿನೊಳಗಿನವರು. ಇನ್ನು ಈ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಕ್ಕೆ ಸೇರಿದವರು. ರಾಜ್ಯದ ಭವಿಷ್ಯದ ಆಸ್ತಿ,” ಎಂದು ನ್ಯಾಯಮೂರ್ತಿ ಅಜಿತ್ ಬೂರ್ತಾಕುರ್ ಆರೋಪಿಗೆ ಜಾಮೀನು ನೀಡುವ ಸಂದರ್ಭ ತಿಳಿಸಿದ್ದಾರೆ.
ಇನ್ನು ನ್ಯಾಯಾಲಯಕ್ಕೆ ಎಫ್‌ಐಆರ್, ವೈದ್ಯಕೀಯ ವರದಿ ಮತ್ತು ಸಾಕ್ಷ್ಯಗಳ ಹೇಳಿಕೆಗಳಿಂದ ಆರೋಪಿತ ವಿದ್ಯಾರ್ಥಿ ತಪ್ಪಿತಸ್ಥ ಎಂದು ತಿಳಿದು ಬಂದಿದೆ. ಆದರೂ ಯುವಕ, ಯುವತಿ ಇಬ್ಬರೂ ರಾಜ್ಯದ ಭವಿಷ್ಯದ ಆಸ್ತಿ ಎಂದು ಜಾಮೀನು ನೀಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.