No menu items!
9.3 C
Munich
Wednesday, April 29, 2026

ಈ ಕಂಪನಿಗಳಲ್ಲಿ 2022ರವರೆಗೂ ವರ್ಕ್ ಫ್ರಮ್ ಹೋಮ್!

Must read

ಕರ್ನಾಟಕ ಸರ್ಕಾರವು ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ ವರೆಗಿನ ರಸ್ತೆಗಳಲ್ಲಿ ತೆರಳುವ ಐಟಿ ಕಂಪನಿ ಉದ್ಯೋಗಿಗಳಿಗೆ 2022ರ ಡಿಸೆಂಬರ್ ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಕೇಳಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಮಾತನಾಡಿ, ಆ ಮಾರ್ಗದಲ್ಲಿ ಸರ್ಕಾರ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಕಾರಣ ಈ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸೂಚಿಸಲಾಗಿದೆ.

ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಆರ್ ಪುರಂವರೆಗೆ ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ನಿರ್ಮಾಣ ಕಾರ್ಯಗಳನ್ನು ಆರಂಭಿಸುತ್ತಿದೆ. ಇದರ ನಿರ್ಮಾಣ ಕಾರ್ಯ ಮುಗಿಯಲು ಕನಿಷ್ಠ 1.5ರಿಂದ 2 ವರ್ಷ ಹಿಡಿಯಬಹುದು. ಈ ಭಾಗಗಳಲ್ಲಿ ದೊಡ್ಡ ಟೆಕ್ ಪಾರ್ಕ್ ಮತ್ತು ಐಟಿ ಕಂಪನಿಗಳು ಕ್ಯಾಂಪಸ್‌ಗಳನ್ನು ಹೊಂದಿವೆ. ಹಾಗೂ ದಿನವಿಡೀ ಹೆಚ್ಚಿನ ಪ್ರಮಾಣದ ಟ್ರಾಫಿಕ್ ಕೂಡ ಈ ಭಾಗದಲ್ಲಿ ಇರುತ್ತದೆ.

ಓಆರ್‌ಆರ್ 6 ಲೈನ್‌ಗಳನ್ನು ಹೊಂದಿದ್ದರೂ ಕೂಡ ಸರ್ವೀಸ್ ರಸ್ತೆಗಳಲ್ಲಿ ನಿತ್ಯ ಸಾಕಷ್ಟು ಸಂಚಾರ ದಟ್ಟಣೆ ಇರುತ್ತದೆ. ಹೀಗಾಗಿ ಐಟಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಸಂಚಾರ ದಟ್ಟಣೆ ಕೊಂಚ ಕಡಿಮೆಯಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article