‘ಅದನ್ನು’ ಪ್ರಶ್ನಿಸಿದ ನೆಟ್ಟಿಗ ಭೂಪಗೆ ಖಡಕ್ ಉತ್ತರ ಕೊಟ್ಟ ನಟಿ…!

Date:

ಈ ಸಾಮಾಜಿಕ ಜಾಲತಾಣದ ಯುಗದಲ್ಲಿ ಕೆಲವರ ವರ್ತನೆ ಅತಿರೇಖಕ್ಕೆ ತಲುಪಿದೆ. ತಮ್ಮ ಕೆಟ್ಟ ಮನಸ್ಥಿತಿಯನ್ನು ತಿಳಿದೋ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಾರೆ. ಕೆಲವರ ವರ್ತನೆಯಂತು ಅಸಹ್ಯ ಹುಟ್ಟಿಸುತ್ತದೆ. ಅವರು ಪುಕ್ಸಟೆ ಪಬ್ಲಿಸಿಟಿಗೆ ಈ ರೀತಿ ಮಾಡುತ್ತಾರೋ ಅಥವಾ ಅದು ಅವರ‌ ಕೆಟ್ಟ ಖಯಾಲಿಯೋ ದೇವರೇ ಬಲ್ಲ….

ಕೆಲವು ಕೆಟ್ಟ ಮನಸ್ಥಿತಿಗಳು ಹೆಣ್ಣುಮಕ್ಕಳ ಬಗ್ಗೆ ಅದರಲ್ಲೂ ನಟಿಯರ ವಿಚಾರದಲ್ಲಿ ತುಂಬಾ ಅಸಹ್ಯ ಹಾಗೂ ಅವಿವೇಕದಿಂದ ನಡೆದುಕೊಳ್ಳುತ್ತಾರೆ. ಅಂತಹವರಿಗೆ ಆಯಾಯ ನಟಿಯರು ತಕ್ಕ‌ ಪಾಠ ಕಲಿಸಿದ್ದೂ ಇದೆ.‌ ಇದೀಗ ನಟಿ ಸಂಯುಕ್ತ ಮೆನನ್ ಅವಿವೇಕಿ ನೆಟ್ಟಿಗನೊಬ್ಬನಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ತಪರಾಕಿ ನೀಡಿದ್ದಾರೆ.‌

ಸಂಯುಕ್ತ ಮೆನನ್ 2016 ರಲ್ಲಿ ತೆರೆಕಂಡ ಮಲೆಯಾಳಂನ ಪಾಪ್ ಕಾರ್ನ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ. ಇದುವರೆಗೆ ಆನಂತರ ಲಿಲ್ಲಿ, ಕಲರಿ, ಉಯರೇ , ಕಲ್ಕಿ, ಅಂಡರ್ ವರ್ಲ್ಡ್ ಸಿನಿಮಾಗಳು ಸೇರಿದಂತೆ 11 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವೆಲ್ಲಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರ ಕೆಲಸಗಳಿಲ್ಲದೆ ಸಹಜವಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ನಟಿ ಸಂಯುಕ್ತಾ ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲರಾಗಿದ್ದಾರೆ. ಬಿಡುವಿರುವುದರಿಂದ ಅಭಿಮಾನಿಗಳಿಗೆ ಟೈಮ್ ಕೊಡೋ ಮನಸ್ಸು ಮಾಡಿದ್ದಾರೆ.

ಇನ್ಸ್ಟಾಗ್ರಾಮಲ್ಲಿ ತನ್ನ ಅಭಿಮಾನಿಗಳಿಗೆ‌‌ ‘Ask me question’ ಎಂದು ಕೇಳಿದ್ದರು. ಈ ವೇಳೆ ನೆಟ್ಟಿಗನೊಬ್ಬ ತನ್ನ ಕೆಟ್ಟ ಚಾಳಿಯನ್ನು ಅನಾವರಣ ಮಾಡಿ , ಅತಿರೇಕದ ತಲೆಪ್ರತಿಷ್ಠೆ ಪ್ರಶ್ನೆ ಕೇಳಿದ್ದಾನೆ…ಆ ಪ್ರಶ್ನೆಗೆ ಸಂಯುಕ್ತ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಂಯುಕ್ತಾ ಮೆನನ್ ಗೆ ನೆಟ್ಟಿಗ ಭೂಪ ಅತುಲ್ ಎಂಬಾತ ನೇರ ನೇರವಾಗಿ ‘ ಆರ್ ಯು ವರ್ಜಿನ್’ ಎಂದು ಪ್ರಶ್ನಿಸಿದ್ದಾನೆ. ಅವನ ಪ್ರಶ್ನೆಗೆ ಸಂಯುಕ್ತ ಇನ್ನೆಂದೂ ಆತ ಇಂಥಾ ಮಾತನ್ನು ಯಾರೊಡನೆಯೂ ಆಡ ಬಾರದು ಆ ರೀತಿ ಉತ್ತರಿಸಿದ್ದಾರೆ.

ಆ ನೆಟ್ಟಿಗ ಮಹಾಶಯನ ಹೆಸರನ್ನು ಹೆಸರಿಸಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ ಸಂಯುಕ್ತಾ…

“ಮಿಸ್ಟರ್ ಅತುಲ್ ವರ್ಜಿಸಿನಿ, ಸೆ ಕ್ಸ್ ಆಲ್ಕೋಹಾಲ್ ಇವೆಲ್ಲಾ ಈಗಿನ ಹೆಣ್ಣು ಮಕ್ಕಳನ್ನು ಹೆದರಿಸುತ್ತದೆ ಎಂದು ಅಂದುಕೊಳ್ಳುತ್ತೀರಾ? ಅಥವಾ ಹೆಣ್ಣು ಮಕ್ಕಳ ವರ್ಜಿನಿಟಿ ಬಗ್ಗೆ ತಿಳಿದುಕೊಳ್ಳುವುದೇ ನಿಮ್ಮ ಕೆಲಸನಾ?
ಹೆಸರು ಮಾಡಬೇಕೆಂದರೆ ಶಾರ್ಟ್ ಕಟ್ ಹುಡುಕಬೇಡಿ. ನಿಮಗೆ ಒಂದು ದಿನ ಯಾರಿಂದಾದರು ಕಪಾಳ ಮೋಕ್ಷ ಆಗುತ್ತದೆ” ಎಂದು ಪ್ರತಿಕ್ರಿಸಿದ್ದಾರೆ. ಸಂಯುಕ್ತಾ ನೀಡಿದ ಖಡಕ್ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…ತಲೆಹರಟೆ ನೆಟ್ಟಿಗನನ್ನು ಹಿಗ್ಗಾಮುಗ್ಗ ಜಾಡಿಸುತ್ತಿದ್ದಾರೆ …

ಒಟ್ಟಿನಲ್ಲಿ ಸಂಯುಕ್ತಾ ಮೆನನ್ ಕೊಟ್ಟ ಖಡಕ್ ತಪರಾಕಿಗೆ ಅತುಲ್ ಎಂಬ ನೆಟ್ಟಿಗ ಭೂಪ ಬೆವರಿರುವುದಂತು ಪಕ್ಕಾ … ಇಂಟರ್ ನೆಟ್ ಇದೆ , ಕೈಯಲ್ಲೊಂದು ಮೊಬೈಲ್ ಇದೆ, ನಂದೂ ಕೂಡ ಒಂದು ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ಇದೆ ಅಂತ ಬಾಯಿಗೆ ಬಂದಂಗೆ ಪ್ರಶ್ನಿಸುವ, ಹರಟುವ ಮಂದಿ ಎಚ್ಚೆತ್ತುಕೊಳ್ಳಬೇಕು. ತಮ್ಮ ಅತೀ ಜಾಣ್ಮೆ ಹಾಗೂ ದಿಢೀರ್ ಪಬ್ಲಿಸಿಟಿ ಸಿಗುತ್ತೆ ಅಂತ ಕೆಟ್ಟ ಮನಸ್ಥಿತಿ ಪ್ರದರ್ಶಿಸಬಾರದು.

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...