ಮೊನ್ನೆ ಮೈಸೂರಿನ ವಿದ್ಯಾರಣ್ಯ ಪುರ ಬಳಿಯ ರಿಂಗ್ ರೋಡ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಯುವಕನೋರ್ವನನ್ನು ಬೈಕ್ ನಲ್ಲಿ ತೆರಳುತ್ತಿದ್ದಾಗ ತಡೆಯಲು ಯತ್ನಿಸಿದರ ಪರಿಣಾಮ ಆತ ಅಪಘಾತಕ್ಕೀಡಾಗಿ ಮೃತಪಟ್ಟ ಎಂಬ ಕಾರಣವನ್ನು ನೀಡಿ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಾಹನವನ್ನು ಜಖಂಗೊಳಿಸಿದ್ದರು.

ಹೀಗೆ ಪೊಲೀಸರ ಮೇಲೆ ಕೈ ಮಾಡಿದ ಹನ್ನೊಂದು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 3ವಿವಿಧ ಕೇಸ್ ಗಳನ್ನು ದಾಖಲಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ಇದೀಗ ಮೃತಪಟ್ಟ ಯುವಕನ ಹಿಂದೆ ಬೈಕ್ ನಲ್ಲಿ ಕುಳಿತಿದ್ದ ವ್ಯಕ್ತಿ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಹೌದು ಹಿಂಬದಿ ವಾಹನ ಸವಾರ ಹೇಳಿರುವುದೇನೆಂದರೆ ಪೊಲೀಸರು ತಮ್ಮ ಬೈಕ್ ಅನ್ನು ತಡೆಯಲು ಯತ್ನಿಸಲೇ ಇಲ್ಲ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾನೆ.

ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಯಾವುದೇ ಪೊಲೀಸರು ನಮ್ಮನ್ನು ವಾಹನ ತಪಾಸಣೆಗೆ ತಡೆಯಲಿಲ್ಲ ಅದೊಂದು ಆಕಸ್ಮಿಕ ಅಪಘಾತವಷ್ಟೆ ಎಂದರು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾನೆ.






