ಗ್ರೇಟ್ ಇಂಡಿಯನ್, ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಇಂಡಿಯಾ ಅಬ್ದುಲ್ ಕಲಾಂ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ರೂ ಅವರ ಮಾತ್ರ ಎಂದಿಗೂ ಮಾಸಿಹೋಗದು. ಎನ್ ಟಿ ಆರ್ ಹಾಗೂ ನಟಿ ಸಾವಿತ್ರಿ ಬಯೋಪಿಕ್ ಗಳ ಬಳಿಕ ಅಬ್ದುಲ್ ಕಲಾಂ ಜೀವನಾಧಾರಿತ ಸಿನಿಮಾ ಮಾಡಲು ತೆಲುಗು ಸಿನಿಮಾ ಮಂದಿ ಮುಂದಾಗಿದ್ದಾರೆ ಬಯೋಪಿಕ್ ಈಗ ಟಾಲಿವುಡ್ ನಲ್ಲಿ ಬರುತ್ತಿದೆ. ಅಬ್ದುಲ್ ಕಲಾಂ ಸಿನಿಮಾ ಬರುವುದಾಗಿ ಬಹಳ ದಿನಗಳಿಂದ ಸುದ್ದಿ ಇತ್ತು ಈಗ ಅದು ಅಧಿಕೃತವಾಗಿದೆ.
ಈ ಹಿಂದೆ ‘ಗುಡಾಚಾರಿ’ ಎಂಬ ಸಿನಿಮಾ ನಿಮಾರ್ಣ ಮಾಡಿದ್ದ ಅಭಿಷೇಕ್ ಅಗರ್ವಾಲ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ‘ಟೈಗರ್ ನಾಗೇಶ್ವರ ರಾವ್’ ಹಾಗೂ ‘ಗುಡಾಚಾರಿ 2’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ, ಸಿನಿಮಾ ಮಾಡುವುದು ಪಕ್ಕಾ ಆಗಿದ್ದು, ಕಲಾಂ ಕುಟುಂಬದಿಂದ ಅನುಮತಿ ಪಡೆಯಬೇಕಾಗಿರೋದು ಒಂದು ಬಾಕಿ ಇದೆಯಂತೆ. ”ಕಲಾಂ ಇಡೀ ಭಾರತದ ಹೀರೋ. ಅವರು ಎಷ್ಟೋ ಯುವಕರಿಗೆ ಸ್ಫೂರ್ತಿ ನೀಡುತ್ತಾರೆ.” ಎಂದಿರುವ ಅಭಿಷೇಕ್ ಅಗರ್ವಾಲ್ ಅದೇ ಕಾರಣಕ್ಕೆ ಈ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಈ ಸಿನಿಮಾದ ತಾರ ಬಳಗ ಸೇರಿದಂತೆ ಹೆಚ್ಚಿನ ಮಾಹಿತಿ ಸದ್ಯದಲ್ಲಿಯೇ ತಿಳಿಸಲಿದ್ದಾರಂತೆ
ಅಬ್ದುಲ್ ಕಲಾಂ ಬಯೋಪಿಕ್ ಟೀಮ್ ನಲ್ಲಿ ಯಾರೆಲ್ಲಾ ಇದ್ದಾರೆ?
Date:






