ಅಬ್ಬಾ ತಂದೆಯ ರುಂಡ ಚೆಂಡಾಡಿ ಮಾನಸಿಕ ಅಸ್ವಸ್ಥನಂತೆ ನಟಿಸಿದ!

Date:

ಕ್ಲುಲ್ಲಕ ಕಾರಣಕ್ಕೆ ತಂದೆ – ಮಗನ ನಡುವೆ ನಡೆದ ಜಗಳ ತಂದೆಯ ಬರ್ಬರ ಹತ್ಯೆಯಲ್ಲಿ ಕೊನೆಗೊಂಡಿರುವ ಘಟನೆ ಪಾಣಾಜೆ ಗ್ರಾಮದ ಕಲ್ಲಪದವು ಕಂಚಿಲ್ಕುಂಜದಲ್ಲಿ ಬುಧವಾರ ನಡೆದಿದೆ. ತಂದೆಯ ರುಂಡ ಚೆಂಡಾಡಿದ ಮಗನೆಂಬ ಕ್ರೂರಿ ಬಳಿಕ ಮಾನಸಿಕ ಅಸ್ವಸ್ಥನಂತೆ ನಟಿಸಿದ್ದಾನೆ.

ಕ್ರಷ್ಣ ನಾಯ್ಕ (65) ಕೊಲೆಯಾದವರು. ಪುತ್ರ ಉದಯನಾಯ್ಕ ಆರೋಪಿ. ತಂದೆ – ಮಗನ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಬುಧವಾರ ಕೂಲಿ ಕೆಲಸ ಮುಗಿಸಿ ಕೃಷ್ಣ ನಾಯ್ಕ ಮನೆಗೆ ಬಂದಾಗ, ಉದಯನಾಯ್ಕ್ ಜಗಳ ಶುರುಮಾಡಿದ್ದಾನೆ. ಆ ಜಗಳ ತಾರಕಕ್ಕೇರಿದ್ದು, ಉದಯ್ ಕೃಷ್ಣ ಅವರ ಕುತ್ತಿಗೆಯನ್ನು ಮಚ್ಚಿನಿಂದ ಕಡಿದಿದ್ದಾನೆ. ರುಂಡ – ಮುಂಡ ಬೇರ್ಪಟ್ಟಿದ್ದು, ಮನೆಯಲ್ಲಿದ್ದ ತಾಯಿ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದಿದ್ದಾರೆ. ಈ ವೇಳೆ ಕೃಷ್ಣ ನಾಯ್ಕ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ನನ್ನನ್ನು ಪೊಲೀಸರು ಏನೂ ಮಾಡುವಂತಿಲ್ಲ! : ಕೊಲೆ ಮಾಡಿದ ಬಳಿಕ ಮನೆಯ ಅಂಗಳದಲ್ಲಿದ್ದ ಆರೋಪಿ ಉದಯ ಒಂದಷ್ಟು ಮದ್ಯದ ಬಾಟಲಿಯನ್ನು ರಾಶಿ ಹಾಕಿ ನನ್ನದೇನು ತಪ್ಪಿಲ್ಲ. ತಂದೆಯೇ ಕುಡಿದು ಬಂದು ಹೀಗೆ ಮಾಡಿದ್ದಾರೆ. ನಾನು ಮಾನಸಿಕ ಅಸ್ವಸ್ಥ ನನ್ನನ್ನು ಪೊಲೀಸರು ಏನೂ ಮಾಡುವಂತಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಎರಡು ಬಾರಿ ತಂದೆಯ ಕೊಲೆ ಯತ್ನಮಾಡಿ ಠಾಣೆ ಮೆಟ್ಟಿಲೇರಿದ್ದ. ಆ ವೇಳೆ ಆತನ ಅನಾರೋಗ್ಯ ಪ್ರಮಾಣಪತ್ರ ತೋರಿಸಿ ತಾಯಿ ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದರು. ಆರೋಪಿ ಮಾನಸಿಕ ಅಸ್ವಸ್ಥನಲ್ಲ ಆತ ಫಿಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...