ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್. ಅಗತ್ಯವಿದ್ದಾಗ ವಿಕೆಟ್ ಕೀಪಿಂಗ್ ಕೂಡ ಮಾಡಬಲ್ಲ ಕನ್ನಡದ ಕ್ರಿಕೆಟಿಗ. ಇತ್ತೀಚೆಗೆ ಕಳಪೆ ಫಾರ್ಮ್ನಿಂದ ಒಂದಿಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಕ್ರಿಕೆಟ್ ಮೈದಾನದ ಆಚೆಗೂ ಒಂದಿಷ್ಟು ಗಾಸಿಪ್, ಕಾಂಟ್ರವರ್ಸಿ ಮೂಲಕ ರಾಹುಲ್ ಸುದ್ದಿಯಲ್ಲಿದ್ದಾರೆ. ಈ ಎಲ್ಲದರ ನಡುವೆ ಈ ಬಾರಿ ರಾಹುಲ್ ಒಂದು ಪ್ರತಿಯೊಬ್ಬರೂ ಶಹಬ್ಬಾಶ್ ಎನ್ನುವ ಕೆಲಸ ಮಾಡಿದ್ದಾರೆ.
ರಾಹುಲ್ ಹೃದಯವಂತಿಕೆ, ಮಾನವೀಯತೆಗೆ ಹಿಡಿದ ಕನ್ನಡಿ ಇದು. ಇವರ 18 ವರ್ಷದ ಅಭಿಮಾನಿಯೊಬ್ಬ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಈತನಿಗೆ ಒಮ್ಮೆಯಾದರೂ ರಾಹುಲ್ ಅವರನ್ನು ಹತ್ತಿರದಿಂದ ನೋಡಬೇಕು, ಮಾತನಾಡಬೇಕೆನ್ನುವ ಆಸೆ. ಈ ವಿಷಯವನ್ನು ಯಾರೋ ಒಬ್ಬರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದರು. ಇದು ರಾಹುಲ್ ಗಮನಮಕ್ಕೆ ಬಂದಿದೆ. ಟ್ವೀಟರ್ ಮೂಲಕ ವಿಷಯ ತಿಳಿದ ರಾಹುಲ್ ಹಿಂದೆ ಮುಂದೆ ನೋಡದೆ ಕೂಡಲೇ ಆತನನ್ನು ಭೇಟಿ ಮಾಡಿದ್ದಾರೆ.
ರಾಹುಲ್ ಸಾವಂತ್ ಎಂಬ 18 ವರ್ಷದ ಪೋರನೇ ರಾಹುಲ್ ಅವರ ಅಪ್ಪಟ ಅಭಿಮಾನಿ. ಈತನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ರಾಹುಲ್ ನೇರವಾಗಿ ಭೇಟಿ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಅಭಿಮಾನಿ ಸಾವಂತ್ ಜೊತೆ ಮಾತುಕತೆ ನಡೆಸಿದ್ದಾರೆ. ಅದಲ್ಲದೆ ಆತನ ಚಿಕಿತ್ಸೆಗೆ ಕೈ ಜೋಡಿಸಲು ಕೂಡ ರಾಹುಲ್ ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಮಾನವೀಯತೆಯನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ರಾಹುಲ್ ಮರಳಿ ಫಾರ್ಮ್ಗೆ ಬರಬೇಕು. ಟೀಮ್ ಇಂಡಿಯಾಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕು ಎನ್ನುವುದು ಅಸಂಖ್ಯ ಅಭಿಮಾನಿಗಳ ಆಶಯ.
ಅಭಿಮಾನಿಗೆ ಕ್ಯಾನ್ಸರ್ ಇದೆ ಅಂತ ಗೊತ್ತಾದ ಕೂಡಲೇ ಕೆ.ಎಲ್ ರಾಹುಲ್ ಮಾಡಿದ್ದೇನು?
Date: