ಅಭಿಮಾನಿಯ ಸಾವಿನ ವಿಚಾರ ತಿಳಿದು ಭಾವುಕರಾದ ಕಿಚ್ಚ ಸುದೀಪ್..
ಕಿಚ್ಚ ಸುದೀಪ್ ಈ ಹಿಂದೆ ಮೈಸೂರಿನಲ್ಲಿ ಬಾಲಕನೊಬ್ಬನನ್ನ ಭೇಟಿಯಾಗಿದ್ರು.. ಆತ ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದ.. ಚಿಕ್ಕ ವಯಸ್ಸಿನಲ್ಲೇ ಖಾಯಿಲೆಯೊಂದಕ್ಕೆ ತುತ್ತಾಗಿದ್ದ ಈ ಬಾಲಕ, ಸುದೀಪ್ ಅವರನ್ನ ಒಮ್ಮೆಯಾದ್ರು ಭೇಟಿಯಾಗಬೇಕು ಎಂಬ ಹಂಬಲವನ್ನ ವ್ಯಕ್ತ ಪಡೆಸಿದ್ದ.. ಈ ವಿಚಾರ ತಿಳಿಯುತ್ತಿದ್ದಂತೆ ಕಿಚ್ಚ ತನ್ನ ನೆಚ್ಚಿನ ಅಭಿಮಾನಿಯನ್ನ 2014 ರಲ್ಲಿ ಮೈಸೂರಿನಲ್ಲಿ ಭೇಟಿ ಮಾಡಿದ್ರು…
ಈ ಸಂದರ್ಭದಲ್ಲಿ ಕಿಚ್ಚನ ಬಳಿ ಹಲವು ಆಸೆಗಳನ್ನ ಹೇಳಿಕೊಂಡಿದ್ದ.. ಆದರೆ ಅನಾರೋಗ್ಯದಿಂದ ಆದಿತ್ಯ ಮೃತಪಟ್ಟಿದ್ದಾನೆ.. ಈ ವಿಚಾರ ತಿಳಿಯುತ್ತಿದ್ದ ಹಾಗೆ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ನಿಮ್ಮೊಂದಿಗೆ ಕಳೆದ ಸಮಯವನ್ನ ಎಂದಿಗು ಮರೆಯಲು ಸಾಧ್ಯವಿಲ್ಲ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ..