ಅಭಿಷೇಕ್ ರಗಡ್‌ ಲುಕ್ ಗೆ ನಿಖಿಲ್ ‘ಶಾರ್ಪ್’ ಕಮೆಂಟ್ ವೈರಲ್..!

Date:

ಅಭಿಷೇಕ್ ಅಂಬರೀಶ್…. ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ. ಅಮರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ಮಂಡ್ಯದ ಗಂಡು. ತಾಯಿ ಸುಮಲತಾ ಸಂಸದೆ…

ನಿಖಿಲ್ ಕುಮಾರಸ್ವಾಮಿ…. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ಪುತ್ರ…ಸಿನಿಮಾ ನಟ , ಯುವ ರಾಜಕೀಯ ನಾಯಕ. ಜಾಗ್ವಾರ್ ಸಿನಿಮಾ ಮೂಲಕ ಸಿನಿಯಾನ ಆರಂಭಿಸಿದ್ದ ಇವರು ಸೀತಾರಾಮ ಕಲ್ಯಾಣ, ಕುರುಕ್ಷೇತ್ರದಲ್ಲಿ ನಟಿಸಿದ್ದಾರೆ. ಸೀತಾರಾಮ ಕಲ್ಯಾಣದ ಹೀರೋ, ಕುರುಕ್ಷೇತ್ರದ ಅಭಿಮನ್ಯು.

ಈ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಆತ್ಮೀಯ ಗೆಳೆಯರು‌. ಕಳೆದ ಲೋಕಸಭಾ ಚುನಾವಣೆ ಇಬ್ಬರ ನಡುವೆ ಅಂತರ ಉಂಟು ಮಾಡಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರ ಪ್ರತಿ ಸ್ಪರ್ಧಿ ಅಭಿಷೇಕ್ ಅವರ ತಾಯಿ, ದಿ. ರೆಬೆಲ್ ಸ್ಟಾರ್ ಅಂಬಿಯವರ ಧರ್ಮಪತ್ನಿ ಸುಮಲತಾ ಅಂಬರೀಶ್. ಆದ್ದರಿಂದ ಅಭಿ ಸಹಜವಾಗಿ ಅಮ್ಮ ಸುಮಲತಾ ಪರ ಪ್ರಚಾರದ ಅಖಾಡದಲ್ಲಿದ್ದರು. ನಿಖಿಲ್ – ಅಭಿ ರಾಜಕೀಯ ರಣಕಣದಲ್ಲಿ‌ ವೈರಿಗಳಾದರು. ಸುಮಲತಾ ಚುನಾವಣೆಯಲ್ಲಿ ಗೆದ್ದಿದ್ದಾರೆ.
ರಾಜಕೀಯವೇ ಬೇರೆ ಸ್ನೇಹವೇ ಬೇರೆ ಎಂದು ಅಂದೇ ಹೇಳಿದ್ದ ಯುವರತ್ನರು ಈಗಲೂ ಆ ಮಾತಿಗೆ ಬದ್ಧರಾಗಿದ್ದಾರೆ.

ಅಮರ್ ಚಿತ್ರಕ್ಕೆ ಶುಭ ಕೋರಿದ್ದ ನಿಖಿಲ್ ಮತ್ತೊಮ್ಮೆ ಅಭಿಯ ಕುರಿತು ಮಾತಾಡಿದ್ದಾರೆ. ಅಭಿಯ ಫೋಟೋಕ್ಕೆ ಪ್ರೀತಿಯಿಂದ ಕಮೆಂಟ್ ಮಾಡಿದ್ದಾರೆ. ಆ ಕಮೆಂಟ್ ಗೆ ಅಭಿ ಕೂಡ ಪ್ರೀತಿಯಿಂದ ರಿಪ್ಲೆ ಕೊಟ್ಟಿದ್ದಾರೆ.

ಎರಡನೇ ಸಿನಿಮಾದ ಸಿದ್ಧತೆಯಲ್ಲಿರುವ ಅಭಿಷೇಕ್ ಅಂಬರೀಶ್ ಹುರಿ ಮೀಸೆ, ಗಡ್ಡಧಾರಿಯಾಗಿ ರಗಡ್ ಲುಕ್ ನಲ್ಲಿನ ತಮ್ಮ ಫೋಟೋವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದು, ನಿಖಿಲ್ looking Sharp ಅಂತ ಕಮೆಂಟ್ ಮಾಡಿದ್ದಾರೆ. ಜೊತೆಗೆ ವಿಶ್ ಮಾಡಿದ್ದಾರೆ. ನಿಖಿಲ್ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಕುರುಕ್ಷೇತ್ರದ ಅಭಿಮನ್ಯು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ..ಗೆಲ್ಲುವಂತೆ ಶುಭಹಾರೈಸಿದ್ದಾರೆ. ಆದಷ್ಟು ಬೇಗ ಮುಂದಿನ ಸಿನಿಮಾ ಬರಲಿ ಎಂದಿದ್ದಾರೆ..

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...