ಹೃತಿಕ್ ರೋಷನ್ ಬಾಲಿವುಡ್ನ ಸ್ಟಾರ್ ನಟ ಹೃತಿಕ್ ಎಂದರೆ ಸಾಕು ಚಿಕ್ಕ ವಯಸ್ಸಿನ ಬಾಲಕಿಯರಿಂದ ಹಿಡಿದು ಧಾರಾವಾಹಿ ನೋಡುವ ಆಂಟಿಯ ರವರೆಗೂ ಹಾಟ್ ಫೇವರಿಟ್ ನಟ. ಹೃತಿಕ್ ರೋಷನ್ ಅವರಿಗೆ ಭಾರತದಾದ್ಯಂತ ಅಪಾರ ಮಹಿಳಾ ಅಭಿಮಾನಿ ಬಳಗ ಇದೆ ಇನ್ನೂ ಭಾರತ ಹೊರತುಪಡಿಸಿ ಹೊರ ದೇಶಗಳಲ್ಲಿಯೂ ಸಹ ಹೃತಿಕ್ ರೋಷನ್ ಅವರಿಗೆ ಅಭಿಮಾನಿ ಬಳಗ ಇದೆ. ಇನ್ನು ಇದೇ ಹೃತಿಕ್ ಅವರ ಫ್ಯಾನಿಸಂ ಕುಟುಂಬವೊಂದನ್ನು ನಾಶ ಮಾಡಿದೆ. ಹೌದು ನ್ಯೂಯಾರ್ಕ್ ನಗರದಲ್ಲಿ ವಾಸವಿದ್ದ ಭಾರತ ಮೂಲದ ಯುವತಿ ಡೋನೆ ದೊಜೋಯ್ ದಿನೇಶ್ವರ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಹೃತಿಕ್ ರೋಷನ್ ಅಭಿನಯದ ಕಹೋನಾ ಪ್ಯಾರ್ ಹೈ ಚಿತ್ರವನ್ನು ವೀಕ್ಷಿಸಿದ ನಂತರ ಹೃತಿಕ್ ರೋಷನ್ ಗೆ ಅಭಿಮಾನಿಯಾಗಿದ್ದ ಈಕೆ ತದನಂತರ ಬಂದ ಹೃತಿಕ್ ಅಭಿನಯದ ಎಲ್ಲಾ ಚಿತ್ರಗಳನ್ನು ವೀಕ್ಷಿಸುತ್ತಿದ್ದಳು. ಮದುವೆಯಾದ ಮೇಲೂ ಸಹ ಹೃತಿಕ್ ರೋಷನ್ ಸಿನಿಮಾವನ್ನು ಅತಿಯಾಗಿ ನೋಡುತ್ತಿದ್ದ ಈಕೆ ಗಂಡನ ಎದುರೇ ಹೃತಿಕ್ ರೋಷನ್ ಅವರನ್ನು ಸಾಕಷ್ಟು ಬಾರಿ ಹೋಗುತ್ತಿದ್ದಳು. ಇದರಿಂದ ಬೇಸತ್ತಿದ್ದ ಆಕೆಯ ಗಂಡ ದಿನೇಶ್ವರ್ ಸಹನೆ ಕಳೆದುಕೊಂಡಿದ್ದಾನೆ. ಇತ್ತೀಚೆಗಷ್ಟೇ ಆಕೆಯನ್ನು ಸಿನಿಮಾಗೆ ಕರೆದೊಯ್ದಿದ್ದ ತದನಂತರ ಮನೆಗೆ ಬಂದವನೇ ಆಕೆಯನ್ನು ಹತ್ಯೆ ಮಾಡಿ ತದನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಒಬ್ಬ ಸ್ಟಾರ್ ನಟನ ಅಭಿಮಾನಿ ಯಾಗಿದ್ದಕ್ಕೆ ಹೆಂಡತಿಯನ್ನು ಕೊಲ್ಲುವ ಮಟ್ಟಕ್ಕೆ ಇಳಿದದ್ದು ನಿಜಕ್ಕೂ ಮೂರ್ಖತನದ ಪರಮಾವಧಿ..