ಹೌದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಟ್ರಂಪ್ ಸರ್ಕಾರದ ಪ್ರಮುಖರಾದ ಯಾರೂ ಕೂಡ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ಹೀಗಾಗಿ ಇಮ್ರಾನ್ ಖಾನ್ ಗೆ ಭಾರಿ ಮುಖಭಂಗವಾಗಿದೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಅವರನ್ನು ನೆಟ್ಟಿಗರು ಟ್ರೋಲ ಮಾಡಲು ಶುರು ಮಾಡಿದ್ದಾರೆ. ಇಮ್ರಾನ್ ಖಾನ್ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳು ಹಾಗೂ ಏರ್ ಪೋರ್ಟ್ ನಲ್ಲಿ ಅಮೆರಿಕ ಸ್ವಾಗತ ಕೋರದ ವಿಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪಾಕ್ ಕಾಲೆಳೆಯುತ್ತಿದ್ದಾರೆ.