ಅಯ್ಯಪ್ಪನ ಭಜನೆ: ದೇವರ ಸಮನಾಗಿ ಅಪ್ಪು ಫೋಟೋ!

Date:

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ 50 ದಿನಗಳು ಆಗುತ್ತಾ ಬರುತ್ತಿದ್ದರೂ ಸಹ ಅವರ ನೆನಪು ಮಾತ್ರ ಕೊಂಚವೂ ಮರೆಯಾಗುವ ಹಾಗೆ ಕಾಣುತ್ತಿಲ್ಲ. ಪುನೀತ್ ರಾಜ್ ಕುಮಾರ್ ಅವರು ತಾವು ಮಾಡಿದ ಹಲವಾರು ಸಹಾಯಗಳು ಮತ್ತು ದಾನ ಧರ್ಮಗಳಿಂದ ನಿಧನ ಹೊಂದಿದ ಮೇಲೆ ಹೆಚ್ಚಿನ ಗೌರವವನ್ನು ಪಡೆದುಕೊಳ್ಳುತ್ತಿದ್ದಾರೆ. ಬದುಕಿದ್ದಾಗ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ನಿಧನ ಹೊಂದಿದ ನಂತರ ಆ ಅಭಿಮಾನಿಗಳಿಂದ ಮತ್ತಷ್ಟು ಪ್ರೀತಿಯನ್ನು ಪಡೆದುಕೊಂಡಿದ್ದಾರೆ.

ನೆಚ್ಚಿನ ನಟನ ನೆನಪಿನಲ್ಲಿ ಪ್ರತಿದಿನ ಬೇಸರಕ್ಕೊಳಗಾಗುತ್ತಿರುವ ಲಕ್ಷಾಂತರ ಅಭಿಮಾನಿಗಳು ವಿಭಿನ್ನವಾದ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆ ಮಾಡತೊಡಗಿದ್ದಾರೆ. ಕೆಲವರು ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಮನೆಗಳಿಗೆ ತಂದು ದೇವರ ಪಕ್ಕದಲ್ಲಿಟ್ಟು ಅಪ್ಪು ದೇವರು ಎಂದು ಪೂಜೆ ಮಾಡುತ್ತಿದ್ದರೆ, ಇನ್ನೊಬ್ಬ ಅಭಿಮಾನಿ ಶಬರಿಮಲೆಗೆ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ತೆಗೆದುಕೊಂಡು ಹೋಗಿ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಅಪ್ಪು ಫೋಟೋ ಜೊತೆಗೆ ಅಯ್ಯಪ್ಪನ ದರ್ಶನಮಾಡಿ ಬಂದಿದ್ದ.

 

 

ಹೀಗೆ ಮಾನವ ಯಾವುದೇ ಕಾರಣಕ್ಕೂ ದೇವರಾಗಲಾರ ದೇವರು ಯಾವತ್ತಿದ್ದರೂ ದೇವರೇ ಎಂದು ಹೇಳಲಾಗುತ್ತಿತ್ತು. ಆದರೆ ಈ ಮಾತನ್ನು ಇದೀಗ ಪುನೀತ್ ಅಭಿಮಾನಿಗಳು ಹುಸಿ ಮಾಡಿದ್ದು, ಪುನೀತ್ ರಾಜ್ ಕುಮಾರ್ ಅವರನ್ನು ದೇವರ ಸ್ಥಾನದಲ್ಲಿಟ್ಟು ಪ್ರತಿದಿನ ಆರಾಧಿಸುತ್ತಿದ್ದಾರೆ. ಈ ಮಾತು ಎಷ್ಟು ಸತ್ಯ ಅಲ್ಲವೇ ಎನಿಸುವಂತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಮವೊಂದರ ಜನರು ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಭಜನೆ ಮಾಡುವ ವೇಳೆ ದೇವರ ಫೋಟೋಗೆ ಸಮನಾಗಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟು ಫೋಟೋಗೆ ಹಾರಗಳನ್ನು ಹಾಕಿ ಭಜನೆಯಲ್ಲಿ ನಿರತರಾಗಿದ್ದಾರೆ. ಆ ವಿಶೇಷ ವಿಡಿಯೋ ಈ ಕೆಳಕಂಡಂತಿದೆ..

 

ಹೀಗೆ ಅಯ್ಯಪ್ಪಸ್ವಾಮಿ ಫೋಟೋ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟು ಭಜನೆಯಲ್ಲಿ ತೊಡಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮಾನವ ದೇವರಾಗಲಾರ ಎಂಬ ಮಾತನ್ನು ಪುನೀತ್ ರಾಜ್ ಕುಮಾರ್ ಹುಸಿ ಮಾಡಿದ್ದಾರೆ ಎಂದು ಜನರು ಮತ್ತೊಮ್ಮೆ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...