ಅವನು ಅವಳ ಪ್ರೀತಿಗಾಗಿ 5 ವರ್ಷ ಕಾದ..! ಆಮೇಲೇನಾಯ್ತು?

0
82

ಫ್ರೆಂಡ್ಸ್ ಎಷ್ಟೇ ಹೇಳಿದ್ರು ಅವ್ನು ಕೇಳಿರ್ಲಿಲ್ಲ! “ಬೇಡ ಕಣೋ, ಆದಿ, ನಾವ್ ಹೇಳೋದು ಸ್ವಲ್ಪ ಅರ್ಥ ಮಾಡ್ಕೊಳ್ಳೋ? ಬೇಡ್ವೇ ಬೇಡ ಕಣೋ! ಅವ್ಳು ಯಾವ್ದೇ ರೀತಿಲೂ ನಿಂಗೆ ಸೂಟ್ ಆಗಲ್ಲ! ನಮ್ ಮಾತು ಸ್ವಲ್ಪ ಆದ್ರು ಕೇಳೋ ಮಾರಾಯ! ಯಾಕಿಂಗೆ ಹುಚ್ಚನಂತೆ ಆಡ್ತಾ ಇದ್ಯಾ? ಅವ್ಳೇನು ಊರಿಗೆ ಇಲ್ಲದೇ ಇರೋ ಪದ್ಮಾವತಿನಾ? ನೀನ್ ಮನಸ್ಸು ಮಾಡಿದ್ರೆ ಎಂಥೆಂಥ ಹುಡ್ಗೀರು ನಿನ್ನ ಹಿಂದೆ ಬೀಳ್ತಾರೋ! ಅಂಥ ಸಾರಿ ಸಾರಿ ಹೇಳಿದ್ರು ಆದಿತ್ಯ ಮಾತ್ರ ಅಂಜಲಿಯನ್ನ ಬಿಡೋ ಥರ ಕಾಣ್ತಾ ಇರ್ಲಿಲ್ಲ! ಅವಳೋ ಇವನ ಕಡೆ ತಿರುಗಿ ಕೂಡ ನೋಡ್ತಾ ಇರ್ಲಿಲ್ಲ! ಅವಳ ರೇಂಜೇ ಬೇರೆ ಗುರು!

ಆದಿತ್ಯ ಮಾತ್ರ ಅಂಜಲಿ ಹಿಂದೇನೇ ಅಲಿತಾ ಇದ್ದ! ಯಾರ್ ಏನ್ ಹೇಳ್ತಾರೋ ಅನ್ನೋ ಭಯನೂ ಇಲ್ಲದೆ ಪದೇ ಪದೇ ಅವಳನ್ನ ಲವ್ ಮಿ, ಲವ್ ಮಿ, ಲವ್ ಮಿ ಅಂಥಾ ಗೋಗರಿತಾ ಇದ್ದ! “ಲವ್ವು ಗಿವ್ವು ಮಾಡೋಕೆ ಆಗಲ್ಲ! ನಾನ್ ಓದೋಕೆ ಬಂದಿದ್ದು, ನಿನ್ ಮುಖ ಕನ್ನಡಿಲೀ ನೋಡ್ಕೊಂಡಿದ್ಯಾ? ಅಂತ ಎಲ್ಲರ ಎದುರೇ ಮುಲಾಜಿಲ್ಲದೆ ಬೈತಾ ಇದ್ಲು ಅಂಜಲಿ! ಈ ಪಾಗಲ್ ಆದಿತ್ಯನಿಗೆ ಅವಳ ಬೈಗುಳ ಅಂದ್ರೆ ಪೂಜೆ ಮಂತ್ರದ ಥರ ಕೇಳ್ತಾ ಇತ್ತು! ಸೋ, ಅಂಜಲಿ ಏನೇ ಬೈದ್ರು ನಗ್ತಾ ಇರ್ತಿದ್ದ! “ನಿಂಗೆ ಮಾನ ಮರ್ಯಾದೆ ಇಲ್ವೇನೋ”? ಅಂಥ ಫ್ರೆಂಡ್ಸ್ ಕೇಳಿದ್ರೆ, ಹೇ, ಹೋಗ್ರೋ ಯಾವ್ ಹುಡ್ಗಿ ಆದ್ರು ಒಂದೇ ಸಲಕ್ಕೆ ಪ್ರಪೋಸಲ್ ಅಕ್ಸೆಪ್ಟ್ ಮಾಡ್ತಾಳಾ? ಅಂತ ಕತೆ ಹೊಡೆಯೋಕೆ ಶುರು ಮಾಡೋನು! ಎಲ್ಲಾ ಫ್ರೆಂಡ್ಸ್ ಸಾಯ್ಲಿ ಅಂಥ ಸುಮ್ನೆ ಆದ್ರು! ಅವಳನ್ನಾ ಒಪ್ಪಿಸೋಕೆ ಆಗದ ಆದಿ “ನನ್ನ ಪ್ರೀತಿ ಸುಳ್ಳಲ್ಲ, ಅಂಜಲಿ ನಂಗೆ ಸಿಕ್ಕೇ ಸಿಗ್ತಾಳೆ” ಅಂತ ಸ್ವಲ್ಪ ಟೈಮ್ ಸುಮ್ನೆ ಆಗಿದ್ದ! ತನ್ನ ಕ್ಲಾಸ್ ನ ಬೇರೆ ಹುಡ್ಗೀರ್ ಜೊತೆ ಹೇಗೆ ಇದ್ನೋ ಅದೇರೀತಿ ಇದ್ದ! ಡಿಗ್ರಿ ಮುಗಿದ ಮೇಲೆ ಅವಳು ಒಂದ್ ಕಡೆ ಇವನು ಒಂದ್ ಕಡೆ!
ಮಾಸ್ಟರ್ ಡಿಗ್ರಿಯಲ್ಲಿ ಆದಿ ರೂಂಮೇಟ್ ಅಭಿ ! ಆದಿನ ಚೂ ಬಿಟ್ಟು ಮಜಾ ತಗೋಳೋದೆಂದ್ರೆ ಅವನಿಗೆ ಎಲ್ಲಿಲ್ಲದ ಜೋಶ್ ಕಣ್ರಿ! ಈ ಆದಿನೋ, ಅಂಜಲೀನ ಫ್ರೀತಿಸಿಕೊಂಡು ಸುಮ್ನೆ ಇರ್ಬೇಕೋ, ಬೇಡ್ವೋ? ದಿನಾ ರಾತ್ರಿ ಅಭಿ ಹತ್ರ ತಲೆ ತಿನ್ನೋನು! “ಈ ನನ್ ಮಗಾ ಸಿಕ್ಕಾಪಟ್ಟೆ ಕಾಟ ಕೊಡ್ತಾನಲ್ಲಾ! ಏನಾದ್ರು ಮಾಡ್ಲೇ ಬೇಕು, ರಾತ್ರಿ ಒಂದ್ ಗಂಟೆ ಆದ್ರೂ ಇವ್ನ ಲವ್ ಸ್ಟೋರಿ ಕೇಳ್ತಾ ಸಾಯಿಬೇಕಲ್ಲಾ! ಮಲಗೋಕೆ ಬಿಡಲ್ಲ”! ಅಂತ ಒಂದ್ ಐಡಿಯಾ ಮಾಡ್ತಾನೆ!
” ಹೇ, ಆದಿ ಇವತ್ತು ಒಂದ್ ಡಿಸೈಡ್ ಆಗ್ಲೇ ಬೇಕು ಕಣೋ? ಅವಳು ನಿನ್ನ ಲವ್ ಮಾಡ್ಬೇಕು, ಇಲ್ಲ ಇವತ್ತೇ ಕೊನೆ ನೀನು ಅವಳನ್ನ ಬಿಡ್ಬೇಕು”! ಅಂತ ಅಭಿ ಹೇಳ್ತಾನೆ! ಆದಿ, ಹೌದು ಮಗಾ, ಏನ್ ಮಾಡೋದು ಹೇಳು ಅಂತ ಅಭಿ ಹತ್ರ ಸಜೆಷನ್ ಕೇಳ್ತಾನೆ! “ಅಂಜಲಿ, ಪ್ಲೀಸ್ ಕಣೇ ನನ್ ಲವ್ವು ಮಾಡೇ! ನೋಡು ನೀನು ಆಗಲ್ಲ ಅಂದ್ರೂ ನಾನು ನೀನೇ ಬೇಕು ಅಂತ ಹಠ ಮಾಡ್ತಾ ಇಲ್ವಾ? ಅಂತ ಅಭಿನೇ ಆದಿ ಸೆಲ್ ನಿಂದ ಮೆಸೇಜ್ ಮಾಡ್ತಾನೆ!” “ಒಂದ್ ಸಲ ಹೇಳಿದ್ರೆ ಅರ್ಥ ಆಗಲ್ವಾ? ನಾನು ನಿನ್ನ ಲವ್ ಮಾಡಲ್ಲ, ಮಾಡಲ್ಲ ಮಾಡಲ್ಲ, ಮಾಡೋಕೆ ಚಾನ್ಸೇ ಇಲ್ಲ”! ಅಂತ ಅಂಜಲಿಯಿಂದ ಮೆಸೇಜ್ ಬರುತ್ತೆ! “ಅಂಜಲಿ, ಇಲ್ಲ ಅನ್ಬೇಡ ಪ್ಲೀಸ್ ಕಣೇ” ಅಂತ ಆದಿ ಪರವಾಗಿ ಅಭಿನೇ ರಿಪ್ಲೇ ಮಾಡ್ತಾನೆ! “ನೀನು ಇದೇ ರೀತಿ, ತಲೆ ತಿನ್ತಾ ಇದ್ರೆ ಮಾತು ಕೂಡ ಆಡಲ್ಲ! ನನ್ನ ಮದ್ವೆ ಆಗೋ ಹುಡ್ಗ ಸೈಂಟಿಸ್ಟ್ ಆಗಿರಬೇಕು”! ಅಂಥ ಅಂಜಲಿ ರಿಪ್ಲೇ ಮಾಡ್ತಾಳೆ! “ಹೇ, ಮಾತಾಡ್ದೇ ಇರ್ಬೇಡ ಕಣೇ…, ನಾನು ಸೈಂಟಿಸ್ಟ್ ಆದ್ರೆ…,! ಲವ್ ಮಾಡ್ತೀಯಾ? ಮದ್ವೆ ಆಗ್ತೀಯಾ? ಎಂದು ಒನ್ಸ್ ಅಗೇನ್ ಆದಿ ಬದ್ಲು ಅಭಿನೇ ಮೆಸೇಜ್ ಮಾಡ್ತಾನೆ!
“ತೂ, ನಿನ್ನ ಮುಖ ಮುಚ್ಚ ನಿಂಗೆ ನೋಬೆಲ್ ಪ್ರೈಸ್ ಬಂದ್ರು ನಿನ್ನ ಮದ್ವೆ ಆಗಲ್ಲ”ಅಂತಾಳೆ ಅಂಜಲಿ! “ಹೇ, ಮಗಾ, ಸಾಕ ಇನ್ನೂ ಬೇಕಾ? ಈ ಪಾಟಿ ಬೈತಾ ಇದ್ದಾಳಲ್ಲೋ? ನೀನು ಅವಳನ್ನ ಬಿಟ್ ಬಿಡು, ಅಂತ ಅಭಿ ಆದಿಗೆ ಹೇಳ್ತಾನೆ! ಆದಿ, ಅವತ್ತು ರಾತ್ರಿ ಇಡೀ ಅಳ್ತಾನೇ ಮಲಗ್ತಾನೆ! ನಾನು ಸೈಂಟಿಸ್ಟ್ ಆಗೇ ಆಗ್ತೀನಿ ಕಣೋ, ಸತ್ರು ಅವಳನ್ನಾ ಮಾತ್ರ ಮದ್ವೆ ಆಗಲ್ಲ! ಅವಳು ಮದ್ವೆಗೆ ಹೋಗೇ ಹೋಗ್ತೀನಿ! ಅವಳನ್ನ ಕಟ್ಕೊಳೋನನ್ನ ನೋಡ್ತೀನಿ! ಹೆಂಗ್ ಇರ್ತಾನೆ, ನಾನೂ ನೋಡ್ಬೇಕು ಎಂದು ತೆಪ್ಪಗಾದ!
ಅಭಿ ಎಷ್ಟೇ ಲೂಸ್ ಲೂಸ್ ಥರ ಆಡ್ತಾ ಇದ್ರೂ ಪ್ರೀತಿ ವಿಷಯದಲ್ಲಿ ಮಾತ್ರ ಜೀವ ಕೊಡೋಕು ರೆಡಿ! ಅಂಜಲಿ ಹತ್ರ ಅವನೇ ಮಾತಾಡ್ತಾನೆ! “ಅಂಜಲಿ ಅವತ್ತು ರಾತ್ರಿ ಆದಿ ಮೊಬೈಲ್ ನಿಂದ ನಾನೇ ಮೆಸೇಜ್ ಮಾಡಿದ್ದು! ಅವನು ನಿನ್ನ ನೆನಪು ಮಾಡಿಕೊಳ್ದೇ ಇರೋ ದಿನ ಇಲ್ವೇ ಇಲ್ಲ ಕಣೇ! ನನ್ನಿಂದ ನೀನು ಅವನ ಜೊತೆ ಮಾತು ಬಿಡುವ ಹಾಗೆ ಆಯ್ತು” ಎಂದು ಹೇಳ್ತಾನೆ! ಅಭಿ, ನೀನ್ ಏನೇ ಹೇಳು, ಆದಿ ನಂಗೆ ಇಷ್ಟ ಆಗಲ್ಲ! ಸಿಕ್ಕಾಪಟ್ಟೆ ಚೊರೆ ಪಾರ್ಟಿ ಕಣೋ! ಅವನು ಮಾತಾಡ್ದೇ ಹೀಗೆ ಇದ್ರೆ ಒಳ್ಳೆಯದಾಗುತ್ತೆ ಎಂದು ಅಭಿ ಮಾತನ್ನೂ ಕೇಳದೆ ಆದಿಯನ್ನ ತಿರಸ್ಕರಿಸ್ತಾಳೆ! www.tnit.in
ಆದ್ರೆ ಆದಿಯಲ್ಲಿ ಮಾತ್ರ ಅವಳ ಬಗ್ಗೆ ಪ್ರೀತಿ ಹಾಗೇ ಇರುತ್ತೆ! ಎಂಎಸ್ಸಿ ಮುಗಿದ ಮೇಲೆ ಆದಿತ್ಯ ಚಿಕ್ಕಮಗಳೂರಿನ ಕಾಲೇಜ್ ಒಂದ್ರಲ್ಲಿ ಲೆಕ್ಚರರ್ ಆಗಿದ್ದಾನೆ! ಅಂಜಲಿ ಮೈಸೂರಿನಲ್ಲಿ ಲ್ಯಾಬ್ ಒಂದ್ರಲ್ಲಿ ಕೆಲಸಕ್ಕೆ ಸೇರಿದ್ಲು! ಕೆಲವು ತಿಂಗಳ ಹಿಂದಷ್ಟೇ ಲ್ಯಾಬ್ ನಲ್ಲಿ ಏನೋ ಮಾಡ್ತಾ ಇರುವಾಗ, ಸೆಲ್ಫ್ ಮೇಲಿದ್ದ ಆ್ಯಸಿಡ್ ಇವಳ ಮುಖದ ಮೇಲೆ ಬಿದ್ದಿದೆಯಂತೆ! ಚೆಂದುಳ್ಳಿ ಚೆಲುವೆ ಅಂತಿದ್ದ ಅಂಜಲಿಯ ಎಡ ಕೆನ್ನೆ ಸುಟ್ಟಿದೆಯಂತೆ! ಈ ವಿಚಾರ ತಿಳಿದ ಕೂಡಲೇ ಆದಿತ್ಯ ಅವಳನ್ನು ನೋಡಿಕೊಂಡು ಬಂದಿದ್ದಾನಂತೆ! ಎರಡು ವರ್ಷದಿಂದ ಮಾತನಾಡದೇ ಇದ್ದಿದ್ದ ಇವರು ಈಗ ಮಾತಾಡ್ತಾ ಇದ್ದಾರೆ! ಆದಿತ್ಯ ಇವತ್ತಿಗೂ ಅವಳನ್ನು ಪ್ರೀತಿಸ್ತಾ ಇದ್ದಾನೆ! ಆದಿತ್ಯನಂತಹ ಹುಚ್ಚು ಪ್ರೇಮಿ ಸಿಗೋದು ಅಪರೂಪ ಕಣ್ರೀ ರೀ,! ಈಗ ಅವನ ಪ್ರೀತಿ ಗೆದ್ದಿದೆ! ಅವಳೂ ಅವನಿಗೆ ಸಿಕ್ಕಿದ್ದಾಳೆ!
ಫ್ರೆಂಡ್ಸ್ ನಿಜವಾದ ಪ್ರೀತಿ ಸಾಯಲ್ಲ! ಆದಿತ್ಯ ಅವಳ ಮುಖ ನೋಡಿ ಪ್ರೀತಿಸಿದವನಲ್ಲ! ಅವತ್ತು ಕನ್ನಡಿಯಲ್ಲಿ ನಿನ್ನ ಮುಖ ನೋಡ್ಕೋ ಎಂದಿದ್ದ ಅಂಜಲಿಯ ಮುಖ ಈಗ ಹಾಳಾಗಿದೆ! ಆದ್ರೆ ಆದಿ ಮನಸ್ಸಲ್ಲಿ ಅವಳ ಮೇಲಿದ್ದ ಪ್ರೀತಿ ಜೀವಂತ! ಅಂಜಲಿಯ ಅಂದ ಚೆಂದ ನೋಡಿ ಅವನು ಅವಳನ್ನು ಪ್ರೀತಿಸಿದ್ದಾಗಿದ್ರೆ? ಮುಖ ಸುಟ್ಟರೂ ಅವಳ ಹಿಂದೆ ಹೋಗುತ್ತಿರಲಿಲ್ಲ! ಪ್ರೀತಿ ಅಂದ್ರೆ ಇದು ಕಣ್ರೀ!

LEAVE A REPLY

Please enter your comment!
Please enter your name here