ಲವ್ ಲೆಟರಲ್ಲೇ ಕಟ್ಟಿದ ಬಿಲ್ಡಿಂಗ್ ..!

0
76

ಪ್ರೇಮ ಸೌಧ ಅಂತ ನಮ್ಮ ತಾಜ್ ಮಹಲನ್ನು ಕರೆಯುತ್ತೇವೆ. ಆದ್ರೆ ಪ್ರೇಮ ಪತ್ರ ಸೌಧ ಅಂತ ಯಾವುದಾದರೂ ಕಟ್ಟಡವನ್ನು ಕರೆದಿದ್ದು ನೋಡಿದ್ರಾ…? ಬಹುಶಃ ಸಾಧ್ಯವಿಲ್ಲ ಅನ್ನಿಸುತ್ತೆ. ಆದರೆ ಜರ್ಮನಿಯ ವ್ಯಕ್ತಿಯೋರ್ವ ಕೇವಲ ಪ್ರೇಮ ಪತ್ರಗಳನ್ನು ಬಳಸಿಕೊಂಡು ಒಂದು ಕಟ್ಟಡವನ್ನು ನಿರ್ಮಿಸಿದ್ದಾನೆ. ಅರೇ ಬರೀ ಪತ್ರಗಳನ್ನು ಬಳಸಿಕೊಂಡು ಹೇಗೆ ಕಟ್ಟಡವನ್ನು ನಿರ್ಮಿಸಲು ಸಾಧ್ಯ ಅಂತೀರಾ..? ಆ ಪ್ರಶ್ನೆಗೆ ಉತ್ತರ ಬೇಕಿದ್ದರೆ ಈ ಸ್ಟೋರಿ ನೀವು ನೋಡ್ಲೇಬೇಕು.
ಜರ್ಮನಿಯ ಕಲಾವಿದ ಎಚ್ ಎ ಸ್ಕಲ್ಟ್ ಎಂಬಾತ ಒಂದು ವಿಭಿನ್ನ ಕಟ್ಟಡವನ್ನು ನಿರ್ಮಿಸಲು ಬಯಸಿದ್ದ. ಅದರಂತೆ ಒಂದು ಕಟ್ಟಡವನ್ನು ನಿರ್ಮಿಸಿದ. ಆದರೆ ಅದು ಎಲ್ಲಾ ಕಟ್ಟಡಗಳಂತೆ ಸಾಮಾನ್ಯವಾಗಿತ್ತು. ಆಗಲೇ ಆ ಕಟ್ಟಡಕ್ಕೆ ಪ್ರೇಮ ಪತ್ರಗಳನ್ನು ಅಂಟಿಸುವ ಯೋಚನೆ ಹೊಳೆಯಿತಂತೆ. ಆಗಲೇ ಕಂಡ ಕಂಡ ಪ್ರೇಮ ಪತ್ರಗಳನ್ನು ತಂದು ಕಟ್ಟಡಕ್ಕೆ ಮೆತ್ತಲು ಶುರು ಮಾಡಿದ. ಆದರೆ ಅದು ಸಾಲಲಿಲ್ಲ. ಇಮೇಲ್ ಗಳನ್ನು ಜಾಲಾಡಿದ. ಕೈಯಿಂದ ಬರೆದ ಪ್ರೇಮ ಪತ್ರ ಸಂಗ್ರಹಿಸಿದ. ಅವುಗಳೆಲ್ಲವನ್ನೂ ತಂದು ಈ ಗೋಡೆಗೆ ಮೆತ್ತಿದ. ಆಗಲೂ ಪತ್ರಗಳು ಸಾಲಲಿಲ್ಲ. ಜನರ ಬಳಿ ಇರುವ ಪ್ರೇಮ ಪತ್ರಗಳನ್ನು ನೀಡುವಂತೆ ಕೋರಿದ. ಆಗ 1.50.000ರಷ್ಟು ಪ್ರೇಮ ಪತ್ರಗಳು ಬಂದು ಬಿದ್ದವು. ಆಗ ಆ ಕಟ್ಟಡದ ಸುತ್ತ ಪ್ರೇಮ ಪತ್ರಗಳೇ ರಾರಾಜಿಸತೊಡಗಿದವು.


ಕಟ್ಟಡದ ಒಳ ಭಾಗವನ್ನು 1.15.000 ಪ್ರೇಮ ಪತ್ರಗಳಿಂದ ಸಿಂಗರಿಸಲಾಗಿದ್ದರೆ, ಹೊರಭಾಗವನ್ನು ಬೃಹತ್ ಗಾತ್ರದ 35.000 ಪ್ರೇಮ ಪತ್ರಗಳಿಂದ ಮುಚ್ಚಲಾಗಿದೆ. ಆದ್ದರಿಂದ ಇಡೀ ಕಟ್ಟಡ ಪತ್ರದ ಮನೆಯಂತೆ ಗೋಚರಿಸುತ್ತಿದೆ. ಅಚ್ಚರಿ ಎಂದರೆ ಜರ್ಮನಿಗೆ ಬರುವ ಪ್ರವಾಸಿಗರು ಈ ವಿಭಿನ್ನ ಕಟ್ಟಡಕ್ಕೆ ಭೇಟಿ ನೀಡಿ ಎಚ್ ಎಲ್ ಸ್ಕಲ್ಟ್ ನ ವಿಭಿನ್ನ ಮತ್ತು ಕಷ್ಟದ ಕಾರ್ಯವನ್ನು ಪ್ರಶಂಸಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ಎಚ್ ಎ ಸ್ಕಲ್ಟ್ ನಿರೀಕ್ಷಿಸುವುದಿಲ್ಲವೇನೋ ಎನಿಸುತ್ತದೆ ಅಲ್ಲವೇ..?

LEAVE A REPLY

Please enter your comment!
Please enter your name here