ವಲಸಿಗ ಸಚಿವರಿಗೆ ಡಮ್ಮಿ ಖಾತೆ ನೀಡಿದ ವಿಚಾರ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ನಾನು ವಿಧಾನಸಭೆಯಲ್ಲಿ ಮೊದಲೇ ಹೇಳಿದ್ದೆ ನೀವೆಲ್ಲಾ ರಾಜಕೀಯ ಸಮಾಧಿ ಆಗ್ತೀರಾ ಅಂತ
ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ ಅಂತ ಸರ್ಕಾರ ಐಸಿಯು,ಆಕ್ಸಿಜನ್ ನಲ್ಲಿ ನಡೆಯುತ್ತಿದೆ ಗೋಪಾಲಯ್ಯ, ಎಂಟಿಬಿ ನಾಗರಾಜ್ ನಾರಾಯಣಗೌಡ,ರೋಷನ್ ಬೇಗ್ ಕಥೆ ಏನಾಗಿದೆ ನೋಡಿ ಎಂಟಿಬಿಗೆ ಪಾಪ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ.
ಅವರನೆಲ್ಲ ಯೂಸ್ ಆಂಡ್ ಥ್ರೋ ಮಾಡಿದ್ದಾರೆ, ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿ ಪರೋಕ್ಷವಾಗಿಯೇ ಎಲ್ಲರನ್ನ ಛೇಡಿಸಿದ ಡಿಕೆಶಿ ನಂತರ ಶಿವಮೊಗ್ಗ ಜಿಲೆಟಿನ್ ಸ್ಪೋಟ ವಿಚಾರ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಅವಘಡ ಆಗಿದೆ ಸಿಎಂ ತವರೂರು ಅದು,ತಕ್ಷಣಕ್ಕೆ ಸಿಎಂ ಭೇಟಿ ಕೊಡಬೇಕು ಸಚಿವ ನಿರಾಣಿ ಕೂಡ ಅಲ್ಲಿಗೆ ಬೇಟಿ ನೀಡಬೇಕು ಈ ಪ್ರಕರಣ ಸಂಪೂರ್ಣ ತನಿಖೆಯಾಗ ಬೇಕುಅಷ್ಟು ದೊಡ್ಡ ಪ್ರಮಾಣದ ಜಿಲಿಟಿನ್ ಕಡ್ಡಿ ಹೇಗೆ ಸಂಗ್ರಹಿಸಿದ್ರುಅದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕುಮೂರು ನಾಲ್ಕು ಜಿಲ್ಲೆಗೆ ಹಾನಿಯಾಗಿದೆ ಇದಕ್ಕೆಲ್ಲ ಯಾರು ಹೊಣೆ? ಯಾರು ಜವಾಬ್ದಾರಿ ತಗೋತಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.