ಅವರಿಬ್ಬರು ಬಹುಕಾಲದ ಸ್ನೇಹಿತರು. ಅವರಿಬ್ಬರ ತಂದೆಯಿಂದರೂ ಕೂಡ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಛಾಪು ಮೂಡಿಸಿದ ಸಾಧಕರೇ. ತಂದೆಯ ದಾರಿಯಲ್ಲೇ ಇಬ್ಬರು ಸಾಗ ಹೊರಟಿದ್ದಾರೆ.
ಇದು ಮುಖ್ಯಮಂತ್ರಿ ಹೆಚ್.ಡಿ ಕುಮಾಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಸ್ನೇಹದ ಕಥೆ.
ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಮಂಡ್ಯದಲ್ಲಿ ಸ್ಪರ್ಧಿಸಿದ್ದರು. ನಿಖಿಲ್ ಅವರ ಪ್ರತಿಸ್ಪರ್ಧಿಯಾಗಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ, ಅಭಿಷೇಕ್ ಅಂಬರೀಶ್ ಅವರ ತಾಯಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಿದ್ದರು.
ಸುಮಲತಾ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಮತ್ತು ರಾಕಿಂಗ್ ಸ್ಟಾರ್ ಯಶ್ ಸಹ ಪ್ರಚಾರ ಮಾಡಿದ್ದರು.
ಚುನಾವಣೆಯ ಸಂದರ್ಭದಲ್ಲಿ ಅಭಿಷೇಕ್ ಮತ್ತು ನಿಖಿಲ್ ಕೂಡ ಪರಸ್ಪರ ಟಾಂಗ್ ಕೊಟ್ಟುಕೊಂಡಿದ್ದರು. ಎಲೆಕ್ಷನ್ ನಿಂದ ಇಬ್ಬರ ಸ್ನೇಹವೂ ಸ್ವಲ್ಪ ಹಳಸಿತ್ತು . ಅವರು ಇಲ್ಲ ಎಂದರೂ ವಾಸ್ತವವನ್ನು ಯಾರೂ ಮರೆಮಾಚುವಂತಿಲ್ಲ.
ಈಗ ಎಲೆಕ್ಷನ್ ಮುಗಿದಿದೆ. ಸುಮಲತಾ ಅಂಬರೀಶ್ ಅವರು ಗೆದ್ದಿದ್ದಾರೆ. ಅದರ ಬೆನ್ನಲ್ಲೇ ಅಭಿಷೇಕ್ ಅವರ ಸಿನಿಮಾ ರಿಲೀಸ್ ಆಗಿದೆ. ಆ ಸಿನಿಮಾ ನಿಖಿಲ್ ಮತ್ತು ಅಭಿಯನ್ನು ಒಂದು ಮಾಡಿದೆ.
ಅಭಿಷೇಕ್ ಅವರ ಚೊಚ್ಚಲ ಚಿತ್ರ ಅಮರ್ ರಿಲೀಸ್ ಗೆ ವೇಳೆ ಯಲ್ಲಿ ಶುಭ ಹಾರೈಸಿ ನಿಖಿಲ್ ಟ್ವೀಟ್ ಮಾಡಿದ್ದರು. ಅದಕ್ಕೆ ಅಭಿಷೇಕ್ ಕೂಡ ಪ್ರತಿಕ್ರಿಯೆ ನೀಡಿದ್ದರು.
ಅಭಿಷೇಕ್ ಮುಕ್ತವಾಗಿ ಮಾತನಾಡಿದ್ದಾರೆ. ರಾಜಕೀಯ ಬೇರೆ ಸಿನಿಮಾ ಬೇರೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಮೊದಲು ಹೇಳಿದ್ದೆ. ರಾಜಕೀಯ ಬೇರೆ ಸ್ನೇಹ ಬೇರೆ ಸ್ನೇಹವೇ ದೊಡ್ಡದು ಎಂದು ಹೇಳಿದ್ದಾರೆ. ಇದರಿಂದ ಅಮರ್ ಸಿನಿಮಾ ಸ್ನೇಹಿತರನ್ನು ಒಂದು ಮಾಡಿದೆ.
ಮಂಡ್ಯ ಎಲೆಕ್ಷನ್ ಗೆ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ನಡುವೆಯೂ ಸ್ಟಾರ್ ವಾರ್ ಇತ್ತು. ಅದು ಶಮನವಾಗಿದೆ.
ಮಂಡ್ಯ ರಾಜಕೀಯ ಸ್ಟಾರ್ ವಾರ್ ಗೆ ಬ್ರೇಕ್ ಹಾಕಿದ್ರೆ, ಅಮರ್ ಸಿನಿಮಾ ಸ್ನೇಹಿರನ್ನು ಒಂದು ಮಾಡಿದೆ.