‘ಬಿಗ್ ಬಾಸ್’ ಶೋ ಗೆಲ್ಲಬೇಕು ಅಂದ್ರೆ ವೀಕ್ಷಕರ ಬೆಂಬಲ ಅತ್ಯಗತ್ಯ. ಫಿನಾಲೆವರೆಗೂ ತಲುಪಬೇಕು ಅಂದ್ರೆ ಪ್ರತಿ ವಾರ ನಾಮಿನೇಷನ್‌ನಿಂದ ಬಚಾವ್ ಆಗಬೇಕು. ‘ಬಿಗ್ ಬಾಸ್’ ಕೊಡುವ ಚಟುವಟಿಕೆಗಳಲ್ಲಿ ಉತ್ತಮವಾಗಿ ಆಟವಾಡಿ ಕ್ಯಾಪ್ಟನ್‌ಆಗಿ ಇಮ್ಯೂನಿಟಿ ಪಡೆದರೆ ಮಿನಿಮಂ ಎರಡು ವಾರ ವರದಾನ ಸಿಕ್ಕ ಹಾಗೆ. ಇದೇ ಕಾರಣಕ್ಕೆ ಕ್ಯಾಪ್ಟನ್ ಪಟ್ಟದ ಮೇಲೆ ಹಲವರಿಗೆ ಕಣ್ಣಿದೆ.
‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ ಆಗಲು ಸದ್ಯ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಮಂಜು, ಶುಭಾ ಪೂಂಜಾ, ನಿಧಿ ಸುಬ್ಬಯ್ಯಗೆ ಆಸೆ ಇದೆ. ಆದರೆ, ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್‌ಗಾಗಿ ಕ್ಯಾಪ್ಟನ್ ವಿಶ್ವನಾಥ್ ತೆಗೆದುಕೊಂಡ ನಿರ್ಧಾರ ಕೆಲವರಿಗೆ ಬೇಸರ ತರಿಸಿದೆ.
ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲು ಕ್ಯಾಪ್ಟನ್ ವಿಶ್ವನಾಥ್‌ಗೆ ‘ಬಿಗ್ ಬಾಸ್’ ಆದೇಶ ನೀಡಿದರು. ಈ ವೇಳೆ ‘ಸಲಹೆ ನೀಡಬಹುದಾ’ ಎಂದು ಎಲ್ಲರಿಗೂ ವಿಶ್ವನಾಥ್ ಕೇಳಿದರು. ಆಗ, ”ಸ್ಟ್ರಾಂಗ್ ಅಂತ ಯಾರು ಅನ್ಸುತ್ತೆ ಅವರನ್ನು ಡಿವೈಡ್ ಮಾಡು” ಅಂತ ದಿವ್ಯಾ ಉರುಡುಗ ಹೇಳಿದರು. ಹಾಗೇ, ”ಹೆಣ್ಮಕ್ಕಳು ಕ್ಯಾಪ್ಟನ್ ಆದರೂ ಸಂತೋಷ” ಎಂದರು ಪ್ರಶಾಂತ್ ಸಂಬರಗಿ. ನಂತರ ಯೋಚಿಸಿದ ವಿಶ್ವನಾಥ್, ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾರನ್ನ ಎರಡು ತಂಡಗಳ ನಾಯಕಿಯರಾಗಿ ಸೂಚಿಸಿದರು.
ಇಬ್ಬರು ನಾಯಕಿಯರು ತಮ್ಮ ತಮ್ಮ ತಂಡಗಳನ್ನು ರಚಿಸಿಕೊಳ್ಳಬೇಕಿತ್ತು. ಇದಕ್ಕಾಗಿ ‘ಬಿಗ್ ಬಾಸ್’ ಟಾಸ್ಕ್ ನೀಡಿದ್ದರು. ಟಾಸ್ಕ್‌ನಲ್ಲಿ ಗೆಲ್ಲುವ ನಾಯಕಿ ತಂಡದ ಮೊದಲ ಸದಸ್ಯನನ್ನು ಆಯ್ಕೆ ಮಾಡಬೇಕಿತ್ತು. ಜೊತೆಗೆ ಸೋತ ತಂಡಕ್ಕೂ ಒಬ್ಬ ಸದಸ್ಯನನ್ನು ಆಯ್ಕೆ ಮಾಡಬೇಕಿತ್ತು. ಇದಕ್ಕಾಗಿ ‘ಬಿಗ್ ಬಾಸ್’ ತೋಳಿನ ಕುಸ್ತಿ ಚಟುವಟಿಕೆ ನೀಡಿದರು. ಇದರಲ್ಲಿ ದಿವ್ಯಾ ಉರುಡುಗ ಗೆದ್ದರು. ಪರಿಣಾಮ ತಮ್ಮ ತಂಡಕ್ಕೆ ಅರವಿಂದ್‌ರನ್ನು ಆಯ್ಕೆ ಮಾಡಿಕೊಂಡರು. ಶುಭಾ ಪೂಂಜಾ ತಂಡಕ್ಕೆ ವೈಷ್ಣವಿಯನ್ನು ಆಯ್ಕೆ ಮಾಡಿದರು.
ಬಳಿಕ ದಿವ್ಯಾ ಸುರೇಶ್, ಶಮಂತ್, ಶಂಕರ್ ಅಶ್ವತ್ಥ್.. ದಿವ್ಯಾ ಉರುಡುಗ ತಂಡ ಸೇರಿದರು. ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ.. ಶುಭಾ ಪೂಂಜಾ ತಂಡದ ಪಾಲಾದರು. ಎರಡೂ ತಂಡಗಳಲ್ಲಿ ಸಮಬಲ ಇಲ್ಲ. ದಿವ್ಯಾ ಉರುಡುಗ ತಂಡ ಮಾತ್ರ ಸ್ಟ್ರಾಂಗ್ ಆಗಿದೆ ಎಂಬ ಅಭಿಪ್ರಾಯ ಕೆಲವರಿಗೆ ಬಂತು.
ಬಳಿಕ ದಿವ್ಯಾ ಸುರೇಶ್, ಶಮಂತ್, ಶಂಕರ್ ಅಶ್ವತ್ಥ್.. ದಿವ್ಯಾ ಉರುಡುಗ ತಂಡ ಸೇರಿದರು. ಮಂಜು ಪಾವಗಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ.. ಶುಭಾ ಪೂಂಜಾ ತಂಡದ ಪಾಲಾದರು. ಎರಡೂ ತಂಡಗಳಲ್ಲಿ ಸಮಬಲ ಇಲ್ಲ. ದಿವ್ಯಾ ಉರುಡುಗ ತಂಡ ಮಾತ್ರ ಸ್ಟ್ರಾಂಗ್ ಆಗಿದೆ ಎಂಬ ಅಭಿಪ್ರಾಯ ಕೆಲವರಿಗೆ ಬಂತು.