No menu items!
24.4 C
Munich
Sunday, July 26, 2026

ದೊಡ್ಡ ಸಿನಿಮಾಗಳ ಜೊತೆ ಯುವರತ್ನ ಫೈಟ್!

Must read

ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಯುವರತ್ನ ಬಿಡುಗಡೆಯಾದ ಮಾರನೇ ದಿನವೇ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಯುವರತ್ನ ದೊಡ್ಡ ಸಿನಿಮಾ , ಈ ದೊಡ್ಡ ಸಿನಿಮಾದ ಎದುರಿಗೆ ದೊಡ್ಡ ಸಿನಿಮಾಗಳೇ ಪೈಪೋಟಿ ಗೆ ಬರಬೇಕು.. ಯುವರತ್ನ ಎದುರಿಗೆ ಇಷ್ಟೆಲ್ಲಾ ಕಾಂಪಿಟೇಶನ್ ಇಲ್ಲದಿದ್ದರೆ ಹೇಗೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

 

 

ಏಪ್ರಿಲ್ 2 ನೇ ತಾರೀಖಿನಂದು ತಮಿಳಿನ ಸುಲ್ತಾನ್ & ತೆಲುಗಿನ ವೈಲ್ಡ್ ಡಾಗ್ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು ಯುವರತ್ನಗೆ ಪೈಪೋಟಿ ನೀಡಲಿವೆ. ಕರ್ನಾಟಕದಲ್ಲಿ ಈಗಾಗಲೇ ಯುವರತ್ನ ಬುಕಿಂಗ್ ಓಪನ್ ಆಗಿದ್ದು ಭರ್ಜರಿಯಾಗಿ ಟಿಕೆಟ್ ಗಳು ಬುಕ್ ಆಗುತ್ತಿವೆ.

 

 

ಪುನೀತ್ ಸಿನಿಮಾ ಬಿಡುಗಡೆ ವೇಳೆ ಕರ್ನಾಟಕದಲ್ಲಿ ಬಿಡುಗಡೆಯಾಗೋ ಅನ್ಯಭಾಷೆಯ ಸಿನಿಮಾಗಳಿಗೆ ಯಾರೂ ಕೂಡ ಸೊಪ್ಪು ಹಾಕೋದಿಲ್ಲ. ಅದೇ ರೀತಿ ಸುಲ್ತಾನ್ & ವೈಲ್ಡ್ ಡಾಗ್ ಗೆ ಚಿತ್ರಮಂದಿರಗಳೂ ಕಡಿಮೆ & ನೋಡುವ ಹಂಬಲ ಹೊಂದಿರುವವರೂ ಸಹ ತೀರ ಕಡಿಮೆ. ಆದರೆ ಆಂಧ್ರ & ತೆಲಂಗಾಣ ರಾಜ್ಯಗಳಲ್ಲಿ ಈ ಮೂರೂ ಸಿನಿಮಾಗಳೂ ಸಹ ಭರ್ಜರಿ ಪೈಪೋಟಿ ನಡೆಸಲಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article