ಬೆಂಗಳೂರು: ಕೇಂದ್ರ ಬಜೆಟ್ ದಿನವೇ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ತಗುಲಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಟೋ, ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಲಿದ್ದಾರೆ. ಸುಮಾರು 10 ಸಾವಿರ ಚಾಲಕರು ರಸ್ತಗಿಳಿಯಲಿದ್ದು, ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಕರ್ನಾಟಕ ಚಾಲಕರ ಒಕ್ಕೂಟದಿಂದ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಪ್ರತಿಭಟನೆಗೆ ಏರ್ ಪೋರ್ಟ್ ಟ್ಯಾಕ್ಸಿ, ಒಲಾ-ಊಬರ್, ಟ್ರಾವೆಲ್ಸ್ ಅಸೋಸಿಯೇಷನ್ ಬೆಂಬಲ ನೀಡಿವೆ. ಇಂದು ಬೆಳಗ್ಗೆ 10 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಿದ್ದಾರೆ.
ಪ್ರತಿಭಟನಾ ನಿರತರ ಬೇಡಿಕೆಗಳೇನು?:
1. ನಿರ್ದಿಷ್ಟವಾಗಿ ಒಂದೇ ದರ ನಿಗದಿಪಡಿಸುವುದು. ಆನ್‍ಲೈನ್ ಆ್ಯಪ್‍ಗಳಿಗೆ ದರ ನಿಗದಿ ಪಡಿಸಿ ಮೂಗುದಾರ ಹಾಕುವುದು.
2. ಸರ್ಕಾರ ನಿಗದಿಪಡಿಸಿದ ದರವನ್ನು ಬಿಟ್ಟು ಹೆಚ್ಚು ಅಥವಾ ಕಡಿಮೆ ದರ ಯಾವುದೇ ಆನ್‍ಲೈನ್ ಆ್ಯಪ್ ನೀಡಬಾರದು.
3. ಪ್ರೈವೇಟ್ ಫೈನಾನ್ಸ್ ಕಂಪನಿಗಳ ಕಾನೂನು ಸಂಪೂರ್ಣವಾಗಿ ಚಾಲಕರಿಗೆ ವಿರೋಧವಾಗಿದೆ. ಗ್ರಾಹಕರು ಕಂಪನಿಗಳು ಮಾಡುವ ಮೋಸವನ್ನು ತಡೆಯಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರೈವೇಟ್ ಫೈನಾನ್ಸ್ ಕಂಪನಿಗಳ ಕಾನೂನು ಸಂಪೂರ್ಣವಾಗಿ ಮರು ತಿದ್ದುಪಡಿಗೊಳಿಸಬೇಕು.
4. ಸರ್ಕಾರ ಚಾಲಕರಿಗೆ ನೀಡಿದ ವಿಮೆ ಅಪಘಾತಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ಹೃದಯಾಘಾತ ಮತ್ತು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಕೊಡಬೇಕು.
5. ಚಾಲಕರ ನಿಗಮ ಮಂಡಳಿ ತುರ್ತಾಗಿ ಸ್ಥಾಪಿಸುವುದು.
6. ಚಾಲಕರ ದಿನಾಚರಣೆ ಸರ್ಕಾರದ ವತಿಯಿಂದ ನಿಗದಿ ಪಡಿಸುವುದು.
ಕಳೆದ 25 ವರ್ಷಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಕಿಚ್ಚ ಸುದೀಪ್ ಅವರಿಗೆ ಈಗ ಚಿತ್ರರಂಗದಲ್ಲಿ ಬೆಳ್ಳಿಹಬ್ಬದ ಸಂಭ್ರಮ. ಆ ಸಲುವಾಗಿ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಅವರ ಕಟೌಟ್ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾದ ಟೈಟಲ್ ಲೋಗೋ ರಾರಾಜಿಸಿದೆ. ಈ ಸಂದರ್ಭದಲ್ಲಿ ಅನೇಕ ಪರಭಾಷೆಯ ಕಲಾವಿದರು ಕೂಡ ಕಿಚ್ಚನಿಗೆ ವಿಶ್ ಮಾಡಿದ್ದಾರೆ.
ಟಾಲಿವುಡ್‌ನ ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಕ್ರಿಕೆಟಿಗ ಅನಿಲ್ ಕುಂಬ್ಳೆ, ಟಾಲಿವುಡ್ ನಟ ಸಾಯಿ ಧರಮ್ ತೇಜ್ ಸೇರಿದಂತೆ ಅನೇಕರು ಕಿಚ್ಚನಿಗೆ ಶುಭ ಕೋರಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಅನ್ನಪೂರ್ಣ ಸ್ಟುಡಿಯೋಸ್’ ಕಡೆಯಿಂದಲೂ ಸುದೀಪ್‌ಗೆ ಅಭಿನಂದನೆ ಸಲ್ಲಿಕೆ ಆಗಿದೆ. ರಮೇಶ್ ಅರವಿಂದ್, ಶಿವರಾಜ್‌ಕುಮಾರ್, ಉಪೇಂದ್ರ, ಗಣೇಶ್, ವಸಿಷ್ಠ ಸಿಂಹ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.
ಟೋಕಿಯೋದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ 48 ವರ್ಷದ ಯೂಮಿ ಯೋಶಿನೊ, ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ 10 ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ತಾಯಿಯ ಶವವನ್ನು ಫ್ರೀಜರ್‌ನಲ್ಲಿ ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಯೋಶಿನೊ ವಾಸವಿದ್ದ ಅಪಾರ್ಟ್‌ಮೆಂಟ್ ಲೀಸ್ ಪೇಪರ್ ಮೇಲೆ ಆಕೆಯ ತಾಯಿಯ ಹೆಸರಿತ್ತು. ಆಕೆಯ ನಿಧನದ ನಂತರ ಯೋಶಿನೊ ಈ ಅಪಾರ್ಟ್‌ಮೆಂಟ್‌ನ್ನು ಬಿಟ್ಟು ಹೋಗಬೇಕಿತ್ತು. ಆದರೆ ಆ ಮನೆ ಬಿಡಲು ಮನಸ್ಸಿನಲ್ಲದ ಯೋಶಿನೊ, ಆಕೆಯ ಸಾವನ್ನೇ ಜಗತ್ತಿನಿಂದ ಮುಚ್ಚಿಟ್ಟು 10 ವರ್ಷ ಅದೇ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಬಾಡಿಗೆ ಕಟ್ಟಲು ಸಾಧ್ಯವಾಗದ ಯೋಶಿನೊಳನ್ನು ಅಪಾರ್ಟ್‌ಮೆಂಟ್ ಮಾಲೀಕ ಒತ್ತಾಯಪೂರ್ವಕವಾಗಿ ಮನೆ ಖಾಲಿ ಮಾಡಿಸಿದ್ದಾನೆ. ಬಳಿಕ ಕೆಲಸಗಾರ ಮನೆ ಸ್ವಚ್ಛ ಮಾಡುತ್ತಿದ್ದ ವೇಳೆ ಫ್ರೀಜರ್‌ನಲ್ಲಿ 10 ವರ್ಷ ಹಳೆಯ ಮೃತದೇಹ ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಅಪಾರ್ಟ್‌ಮೆಂಟ್ ಮಾಲೀಕ, ಇದು ಯೋಶಿನೊ ಅವರ ತಾಯಿಯ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾನೆ. ಕೂಡಲೇ ಯೋಶಿನೋಳನ್ನು ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ 10 ವರ್ಷದಿಂದ ತಾಯಿಯ ಮೃತದೇಹ ಫ್ರೀಜರ್‌ನಲ್ಲಿಟ್ಟಿದ್ದಾಗಿ ಸತ್ಯ ಒಪ್ಪಿಕೊಂಡಿರುವ ಯೋಶಿನೊ, ಮನೆ ಬಿಡಲು ಮನಸ್ಸಿಲ್ಲದೇ ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
ಯೋಶಿನೊ ತಾಯಿ ತಮ್ಮ 60ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಯೋಶಿನೊ ಕಳೆದ 10 ವರ್ಷಗಳಿಂದ ತನ್ನ ತಾಯಿಯ ಮೃತದೇಹದೊಮದಿಗೆ ಜೀವನ ನಡೆಸುತ್ತಿದ್ದಳು. ಸದ್ಯ ಯೋಶಿನೋಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.