ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

Date:

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯ. ಆದರೆ, ಆಹಾರವನ್ನು ಯಾವ ರೀತಿಯ ಪಾತ್ರೆಗಳಲ್ಲಿ ತಯಾರಿಸಲಾಗುತ್ತಿದೆ ಎಂಬುದೂ ಸಮಾನವಾಗಿ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಾನ್-ಸ್ಟಿಕ್ ಮತ್ತು ಉಕ್ಕಿನ ಪಾತ್ರೆಗಳನ್ನು ಬಿಟ್ಟು ಹಿತ್ತಾಳೆ ಪಾತ್ರೆಗಳತ್ತ ಜನರ ಬೇಡಿಕೆ ಹೆಚ್ಚುತ್ತಿದೆ.

ಹಿತ್ತಾಳೆ (Bronze) ತಾಮ್ರ ಮತ್ತು ಸತುವಿನ ಮಿಶ್ರಣದಿಂದ ತಯಾರಿಸಲ್ಪಟ್ಟ ಲೋಹ. ಹಿಂದಿನ ಕಾಲದಲ್ಲಿ ರಾಜಮನೆತನದಿಂದ ಹಿಡಿದು ಸಾಮಾನ್ಯ ಮನೆಗಳವರೆಗೂ ಹಿತ್ತಾಳೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಇದರಲ್ಲಿರುವ ಹಲವು ಆರೋಗ್ಯಕರ ಗುಣಗಳು ಕಾರಣದಿಂದಾಗಿ ಇಂದಿಗೂ ಮತ್ತೆ ಜನಪ್ರಿಯತೆ ಪಡೆಯುತ್ತಿದೆ.

ಹಿತ್ತಾಳೆ ಪಾತ್ರೆಗಳ ಪ್ರಮುಖ ಪ್ರಯೋಜನಗಳು:

ಆಹಾರ ಹೆಚ್ಚು ಕಾಲ ಬಿಸಿ ಉಳಿಯುತ್ತದೆ: ಹಿತ್ತಾಳೆ ಶಾಖವನ್ನು ಆಕರ್ಷಿಸಿ ದೀರ್ಘಕಾಲ ಆಹಾರವನ್ನು ಬಿಸಿಯಾಗಿಡುತ್ತದೆ.

ಪೋಷಕಾಂಶ ಕಾಪಾಡುತ್ತದೆ: ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಿದಾಗ ತರಕಾರಿಗಳ ಪೋಷಕಾಂಶ ಕಡಿಮೆ ಆಗುವುದಿಲ್ಲ.

ಜೀರ್ಣಕ್ರಿಯೆಗೆ ಸಹಕಾರಿ: ಹಿತ್ತಾಳೆಯ ಕ್ಷಾರೀಯ ಗುಣ ದೇಹದ pH ಮಟ್ಟವನ್ನು ಸಮತೋಲನಗೊಳಿಸಿ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಖನಿಜಗಳ ಲಾಭ: ತಾಮ್ರ ಮತ್ತು ಸತುವಿನಂತಹ ಖನಿಜಗಳನ್ನು ಒದಗಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರಕ್ತ ಪರಿಚಲನೆ ಮತ್ತು ಚರ್ಮದ ಹೊಳಪು: ತಾಮ್ರವು ರಕ್ತ ಸಂಚಾರವನ್ನು ಸುಧಾರಿಸಿ ಚರ್ಮಕ್ಕೆ ಹೊಳಪು ನೀಡುತ್ತದೆ.

ಕೂದಲಿನ ಬೆಳವಣಿಗೆ: ಸತುವಿನ ಅಂಶವು ಕೂದಲಿನ ಆರೋಗ್ಯಕ್ಕೆ ಸಹಕಾರಿ.

ಬ್ಯಾಕ್ಟೀರಿಯಾ ವಿರುದ್ಧ ಹೋರಾಟ: ಸತುವಿನ ಅಂಶವು ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುತ್ತದೆ.

ಹೀಗಾಗಿ, ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಹಾರ ಪೌಷ್ಟಿಕತೆ ಕಾಪಾಡುವುದರ ಜೊತೆಗೆ ದೇಹದ ಆರೋಗ್ಯಕ್ಕೂ ನೆರವಾಗುತ್ತದೆ. ನಮ್ಮ ಪೂರ್ವಜರು ನೀರನ್ನು ಹಿತ್ತಾಳೆ ಪಾತ್ರೆಗಳಲ್ಲಿ ಸಂಗ್ರಹಿಸಿ ಕುಡಿಯುತ್ತಿದ್ದುದೂ ಇದೇ ಕಾರಣಕ್ಕಾಗಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...