ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನಾಳೆಯೇ ಕಡೇ ದಿನ

1
25

ಕೋವಿಡ್‌ ನಿರೋಧಕ ಲಸಿಕೆ ಸ್ವೀಕರಿಸಲು ಫೆ.20ರಂದು ಆರೋಗ್ಯ ಕಾರ‍್ಯಕರ್ತರಿಗೆ ಕಡೇ ದಿನವಾಗಲಿದೆ. ನೋಂದಣಿ ಮಾಡಿದವರು ತಕ್ಷಣವೇ ತೆಗೆದುಕೊಳ್ಳಬೇಕು. ಈ ಬಳಿಕ ಅವರಿಗೆ ಅವಕಾಶ ಇರುವುದಿಲ್ಲ. ಉಳಿದಂತೆ ಲಸಿಕೆಯ ಎರಡನೇ ಡೋಸ್‌ ತೆಗೆದುಕೊಳ್ಳುವ ಮಂದಿಗೆ ಫೆ.28ರ ವರೆಗೆ ಅವಕಾಶ ಇರಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸುವ ಕಾರ‍್ಯ ಫೆ.22ರ ರಾತ್ರಿ 12 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಈಗಾಗಲೇ ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆ ಮಾಡುವ ಕಾರ‍್ಯ ಆರಂಭವಾಗಿದ್ದು, ಫೆ.22ರಂದು ಖಾಸಗಿ ವಲಯದಿಂದ ಕೂಡ ಪರೀಕ್ಷೆಗಳು ಆರಂಭವಾಗಲಿದೆ. ಪ್ರಯಾಣಿಕರು ನೆಗೆಟಿವ್‌ ವರದಿಯನ್ನು ತಂದು ಬರಬೇಕು. ಜತೆಗೆ ಮಂಗಳೂರಿಗೆ ಬಂದ ಬಳಿಕ ಕೂಡ ಪರೀಕ್ಷೆ ಮಾಡುವ ಕಾರ‍್ಯವಾಗಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

: ಫೆ.18ರಂದು ನಗರದ ಖ್ಯಾತ ಕಾಲೇಜೊಂದರ 6 ವಿದ್ಯಾರ್ಥಿಗಳ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 46 ವಿದ್ಯಾರ್ಥಿಗಳ ಗಂಟಲು ಸ್ರಾವವನ್ನು ಶುಕ್ರವಾರ ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಇದರ ವರದಿ ಎರಡು ದಿನಗಳಲ್ಲಿ ತಲುಪುವ ಸಾಧ್ಯತೆಯಿದೆ. ಇದರ ಜತೆಗೆ ದೇರಳಕಟ್ಟೆಯ ಆಸ್ಪತ್ರೆಯ 6 ಪಾಸಿಟಿವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ 43 ಮಂದಿಗಳ ವರದಿ ಫೆ.20ರಂದು ಬರಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here