ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಿಎಂ – ಯಾರಿಗೆ ಏನೇನು?

Date:

ರಾಜ್ಯದಲ್ಲಿ ಸದ್ಯ ಕಠಿಣ ಕರ್ಫ್ಯೂ ರೀತಿಯ ಲಾಕ್‌ಡೌನ್‌ ಜಾರಿಯಲ್ಲಿದೆ. ಸದ್ಯ ಕೆಲವೊಂದು ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇನ್ನು ಕಠಿಣ ಕರ್ಫ್ಯೂನಿಂದಾಗಿ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ರೈತರು, ದಿನಗೂಲಿ ಕಾರ್ಮಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಕೆಲವೊಂದು ವರ್ಗಕ್ಕೆ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾರೆ. ಕಷ್ಟದ ಸಮಯದಲ್ಲಿ ಅವರ ಕೈ ಹಿಡಿಯಲು ಮುಂದಾಗಿದ್ದಾರೆ. ಒಟ್ಟು 1111.82 ಮೊತ್ತ ಮೌಲ್ಯದ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ಹಂಚಿಕೊಂಡರು.

ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ ರೂ.10,000/- ರಂತೆ ಸಹಾಯ ನೀಡಲಾಗುತ್ತದೆ. ಇದರಿಂದ ಸುಮಾರು 20,000 ರೈತರಿಗೆ ಸಹಕಾರಿಯಾಗಲಿದೆ. ಇದಕ್ಕಾಗಿ 12.73 ಕೋಟಿ ಮೀಸಲಿಡಲಾಗಿದೆ.

.ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ಗರಿಷ್ಠ 1 ಹೆಕ್ಟೇರ್‌ಗೆ ಮಿತಿಗೊಳಿಸಿ ಪ್ರತಿ ಹೆಕ್ಟ್‌ರ್‌ಗೆ ರೂ.10,000/- ರಂತೆ ಸಹಾಯ ಒದಗಿಸಲಾಗುವುದು. ಇದರಿಂದ ಸುಮಾರು 69,000 ರೈತರಿಗೆ ಸಹಕಾರಿಯಾಗಲಿದೆ. ಇದಕ್ಕಾಗ 69.00 ಕೋಟಿ ಮೀಸಲಡಲಾಗುತ್ತದೆ.

ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) – ರೂ. 3000/- ಪ್ರತಿ ಚಾಲಕರಿಗೆ ನೀಡಲಾಗುತ್ತದೆ. ಇದರಿಂದ ಒಟ್ಟು 2.10 ಲಕ್ಷ ಫಲಾನುಭವಿಗಳು ಸಹಾಯವಾಗಲಿದೆ. ಅಲ್ಲದೆ ಇದಕ್ಕಾಗಿ 63.00 ಕೋಟಿ ಮೀಸಲಿಡಲಾಗುತ್ತದೆ.

. ಕಟ್ಟಡ ಕಾರ್ಮಿಕರಿಗೆ ತಲಾ ರೂ. 3000/- (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಸಿದ ಕಾರ್ಮಿಕರಿಗೆ) ನೀಡಲಾಗುತ್ತದೆ. ಒದಕ್ಕಾಗಿ 494 ಕೋಟಿ ಮೀಸಲು.

.ಅಸಂಘಟಿತ ಕಾರ್ಮಿಕರಿಗೆ ತಲಾ ರೂ.2,000/- (ಕ್ಷೌರಿಕರು, ಅಗಸರು, ಟೈಲರ್‌ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‌ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು) ಇನ್ನು ಒಟ್ಟು 3.04 ಲಕ್ಷ ಮಂದಿಗಳು ಫಲಾನುಭವಿಗಳಾಗಿದ್ದು ಇದಕ್ಕಾಗಿ 60.89 ಕೋಟಿ ಮೀಸಲಿಡಲಾಗಿದೆ.

ರಸ್ತೆ ಬದಿಯ ವ್ಯಾಪಾರಸ್ಥರು ತಲಾ ರೂ.2,000/- (ಆತ್ಮ ನಿರ್ಭರ್ ನಿಧಿಯಲ್ಲಿ ನೊಂದಣಿ ಹೊಂದಿದವರು) ಸಿಗಲಿದೆ. ಒಟ್ಟು 2.20 ಲಕ್ಷ ಫಲಾನುಭವಿಗಳಿರಲಿದ್ದಾರೆ. ಇನ್ನು ಇದಕ್ಕಾಗಿ 44.00 ಕೋಟಿ ಮೀಸಲಿಡಲಾಗಿದೆ.

ಕಲಾವಿದರು /ಕಲಾ ತಂಡಗಳಿಗೆ ತಲಾ ರೂ.3,000/ ನೀಡಲಾಗುತ್ತದೆ. ಇದರಿಂದ 16,095 ಫಲಾನುಭವಿಗಳಿಗೆ ಸಹಾಯವಾಗಲಿದೆ. ಒಟ್ಟು 4.82 ಕೋಟಿ ಮೀಸಲಿರಿಸಲಾಗುತ್ತದೆ.

 

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...