ಐಪಿಎಲ್ ಹತ್ತಿರವಾಗುತ್ತಿದ್ದಂತೆ ಎಲ್ಲಾ ತಂಡಗಳ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವಾರು ಆಟಗಾರರು ಅಭ್ಯಾಸವನ್ನು ಆರಂಭ ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಭ್ಯಾಸವನ್ನು ಆರಂಭಿಸಿದೆ.
ಇತ್ತೀಚೆಗಷ್ಟೇ ಮಹಮ್ಮದ್ ಸಿರಾಜ್ ಮತ್ತು ಯುಜುವೇಂದ್ರ ಚಾಹಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲು ಪಯಣವನ್ನ ಬೆಳೆಸಿದ್ದರು. ಇದೀಗ ಪವರ್ ಹಿಟ್ಟರ್ ಮಿಸ್ಟರ್ 360, ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲು ಪಯಣ ಬೆಳೆಸಿದ್ದಾರೆ.
ಈ ಕುರಿತು ಸ್ವತಃ ಎಬಿ ಡಿವಿಲಿಯರ್ಸ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದು ವಿಷಯವನ್ನು ಹಂಚಿಕೊಂಡಿದ್ದಾರೆ.