ಕುರುಕ್ಷೇತ್ರ ಕನ್ನಡ ಚಿತ್ರ ಬಿಡುಗಡೆಯಾದಾಗಿನಿಂದ ಸಹ ಸಾಕಷ್ಟು ದಾಖಲೆಗಳನ್ನು ನಿರ್ಮಿಸುತ್ತಾ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಟ್ರೋಲ್ ಗಳನ್ನು ಎದುರಿಸಿದ್ದ ಕುರುಕ್ಷೇತ್ರ ಬಿಡುಗಡೆಯಾದ ನಂತರ ಎಲ್ಲ ವರ್ಗದ ಪ್ರೇಕ್ಷಕರಿಗೂ ಸಹ ಇಷ್ಟವಾಯಿತು. ಇನ್ನು ಜನಗಳಿಂದ ಮೆಚ್ಚುಗೆ ಪಡೆದುಕೊಂಡ ಕುರುಕ್ಷೇತ್ರ ಚಿತ್ರ ಇದೀಗ ವಿಶ್ವ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಲು ತಯಾರಾಗುತ್ತಿದೆ.
ಹೌದು ಈ ಬಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಒಟ್ಟು 28 ಚಿತ್ರಗಳು ಸೆಲೆಕ್ಟ್ ಆಗಿವೆ. ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯ ಇಷ್ಟು ಚಿತ್ರಗಳ ಪೈಕಿ ಕನ್ನಡದಿಂದ ಆಯ್ಕೆಯಾಗಿರುವುದು ಕೇವಲ ಕುರುಕ್ಷೇತ್ರ ಮಾತ್ರ. ಇನ್ನು ಬಿಡುಗಡೆಗೂ ಮುನ್ನ ಸಾಕಷ್ಟು ಟೀಕೆಗೆ ಒಳಗಾಗಿದ್ದ ಕುರುಕ್ಷೇತ್ರ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿ ರೇಸ್ನಲ್ಲಿ ಕನ್ನಡದಿಂದ ಸ್ಥಾನ ಪಡೆದುಕೊಂಡ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.