ಐಸಿಸಿ ಏಕದಿನ ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಇಂಗ್ಲೆಂಡ್ ಫೈನಲ್ ಗೆ ಎಂಟ್ರಿ ಪಡೆದಿದೆ.
5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮುಗ್ಗರಿಸಿದೆ. 1992 ರ ಬಳಿಕ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಜುಲೈ 14 ರಂದು ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.
1979, 1987, 1992 ರಲ್ಲಿ ಇಂಗ್ಲೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು. ನ್ಯೂಜಿಲೆಂಡ್ ಸತತ ಎರಡನೇ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ. 8 ಸಲ ಸೆಮಿಫೈನಲ್ ಪ್ರವೇಶಿಸಿ 5 ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಸೆಮಿಫೈನಲಿನಲ್ಲಿ ಮುಗ್ಗರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49 ಓವರ್ ಗಳಲ್ಲಿ 223 ರನ್ ಗೆ ಆಲೌಟ್ ಆಯಿತು.ಇಂಗ್ಲೆಂಡ್ 32.1 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಫೈನಲ್ ಗೆ ಪ್ರವೇಶಿಸಿದೆ.