ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಶರಣ್ ಹೇಳಿಕೊಂಡಿದ್ದೇನು?

Date:

ಬೆಂಗಳೂರು : ನಿನ್ನೆ ಅವತಾರ ಪುರುಷ ಸಿನಿಮಾ ಸೆಟ್ ನಲ್ಲಿ ದಿಢೀರ್ ಅಂತ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದ ಸ್ಯಾಂಡಲ್ ವುಡ್ ಅಧ್ಯಕ್ಷ ಖ್ಯಾತಿಯ ನಟ ಶರಣ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಬಗ್ಗೆ ಅವರು

‘ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ನಾನು ಅನುಭವಿಸಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ. ಅನಂತರ ‘ಅವತಾರ ಪುರುಷ’ ಟೀಂನವರೇ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ಡಾಕ್ಟರ್ ಪರೀಕ್ಷೆ ನಡೆಸಿ ಕಿಡ್ನಿ ಸ್ಟೋನ್ ಆಗಿದೆ ಅಂತ ತಿಳಿಸಿದ್ರು. ಸಣ್ಣ ಪ್ರಮಾಣದಲ್ಲಿ ಸ್ಟೋನ್ ಆಗಿದೆ. ಸದ್ಯಕ್ಕೆ ಏನು ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ. ಮೂರು ದಿನಗಳ ಬಳಿಕ ಏನು ಕಡಿಮೆ ಆಗದಿದ್ರೆ ಸರ್ಜರಿ ಮಾಡೋದಾಗಿ ಡಾಕ್ಟರ್ ತಿಳಿಸಿದ್ದಾರೆ. ಶೂಟಿಂಗ್​ ಸಮಯದಲ್ಲಿ ಈ ಥರ ತುಂಭಾನೇ ನಡೆಯುತ್ತಿರುತ್ತೆ. ಡ್ಯಾನ್ಸ್, ಫೈಟ್​ ಅಂತ ಬಂದಾಗ ಮಸಲ್​ ಕ್ಯಾಚ್​ ಆಗೋದು ಸಾಮಾನ್ಯ. ಆದ್ರೆ, ಇದು ಸ್ವಲ್ಪ ತೀವ್ರವಾಗಿತ್ತು. ಮನೆಯಲ್ಲೇ ನೋವು ಕಾಣಿಸಿಕೊಂಡಾಗ ಡಾಕ್ಟರ್​ಗೆ ತೋರಿಸಲು ಹೇಳಿದ್ರು. ಇದನ್ನೆಲ್ಲಾ ಏನು ತೋರಿಸೋದು ಅಂತ ಸುಮ್ಮನಾದೆ. ದೇವರ ದಯೆಯಿಂದ ಅದಾಗೇ ಕಡಿಮೆನೂ ಆಯ್ತು. ಒಂದು ಎರಡು ಗಂಟೆ ಅಷ್ಟೇ ಇತ್ತು ನೋವು. ನಾನು ಯಾಮಾರಿದ್ದು ಅಲ್ಲೇ. ಮತ್ತೆ ನೋವು ಬರಲ್ಲ ಅಂದುಕೊಂಡೆ. ಸದ್ಯ ಈ ನೋವು ಯಾಕೆ ಅನ್ನೋದು ಗೊತ್ತಾಯ್ತು ಅನ್ನೋ ಸಮಾಧಾನ ಇದೆ. ಇನ್ನು ನೀರು ಚೆನ್ನಾಗಿ ಕುಡೀಬೇಕು. ಈ ಮುಖಾಂತರ ಎಲ್ಲರಿಗೂ ಹೇಳಬೇಕಾಗಿರೋದು, ಯಾರಾದ್ರು ಬಂದು ನಿಮಗೆ ನೀರು ಕುಡೀರಿ ಅಂದಾಗ ಕಡೆಗಣಿಸಬೇಡಿ. ದಯವಿಟ್ಟು ಹಾಗೇ ಮಾಡ್ಬೇಡಿ. ಅತಿ ಹೆಚ್ಚು ನಮ್ಮನ್ನ ನಾವು ಹೈಡ್ರೇಟ್​ ಮಾಡ್ಕೊಂಡು ಇಟ್ಟುಕೊಳ್ಳೋಣ. ನನಗೆ ನೀರು ಕುಡಿಯುವ ಅಭ್ಯಾಸನೇ ಇಲ್ಲ. ಇದೇ ಮೊದಲ ಸಲ ನನಗೆ ಈ ಥರ ತೊಂದರೆ ಕಾಣಿಸಿಕೊಂಡಿದ್ದು. ನೀರಿನ ಮಹತ್ವದ ಬಗ್ಗೆ ಈಗ ಗೊತ್ತಾಗಿದೆ. ಎಲ್ಲರಿಗೂ ಗೊತ್ತಾಗಬೇಕು. ನನಗೆ ವಿಶ್​ ಮಾಡಿ ಒಂದಿಷ್ಟು ಮೆಸೇಜ್​ಗಳು ಬಂದಿವೆ. ಅದರಲ್ಲಿ ಶೇಕಡ 99ರಷ್ಟು ನೀರು ಕುಡೀರಿ ಅಂತನೇ ವಿಶ್​ ಮಾಡಿದ್ದಾರೆ.” ಎಂದು ಹೇಳಿಕೊಂಡಿದ್ದಾರೆ.

2020ರ ಜಗಮೆಚ್ಚಿದ ನಾಯಕರು ಇವರೇ ನೋಡಿ..!

ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಇಂದಿನಿಂದ ‘ಪ್ರತಿಕ್ಷಣ ನಿಮ್ಮೊಂದಿಗೆ’ ನ್ಯೂಸ್ ಫಸ್ಟ್ ..!

IPL 2020 : ಉದ್ಘಾಟನಾ ಪಂದ್ಯದಲ್ಲಿ  ಗೆದ್ದು ಬೀಗಿದ ಧೋನಿ ಪಡೆ ..!

ಧೋನಿ ಪಡೆಗೆ 163 ರನ್​ ಗುರಿ ನೀಡಿದ ರೋಹಿತ್ ಪಡೆ..!

ಎಲ್ಲಿದ್ದೀಯಪ್ಪಾ ಮೋದಿ ಎಂದ ಸಿದ್ದರಾಮಯ್ಯ..!

ಅವಳಿಗಾಗಿಯೇ…! ಕೇವಲ 26 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರೇಮಿ ಕಥೆ..!

ಸಂಜೆ ಧೂಮಕೇತು ನೋಡೋದನ್ನು ಮಿಸ್ ಮಾಡ್ಕೋ ಬೇಡಿ – 6800 ವರ್ಷಗಳೊರೆಗೆ ಹಿಂತಿರುಗಲ್ಲ,…!

ನಿತ್ಯ ಭವಿಷ್ಯ : ಈ ದಿನ ಯಾರಿಗೆ ಸುದಿನ …? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲಗಳು…

ತನ್ನ ತಟ್ಟೆಯಲ್ಲಿ ಬೀದಿ ನಾಯಿಗಳಿಗೆ ಊಟ ನೀಡಿದ ಭಿಕ್ಷುಕ …ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …

ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಆದೇಶ

ಧ್ರುವಾ ಸರ್ಜಾ ದಂಪತಿಗೆ ಕೊರೋನಾ …! 

ಅಂದು ಸೈಕಲ್ ನಲ್ಲಿ ಮನೆಗೆ ಹಾಲು ಹಾಕ್ತಿದ್ದವರು ಇಂದು…?

ಸರ್ಕಾರಿ ಕೆಲಸಬಿಟ್ಟು ರೈತನಾದ ಇಂಜಿನಿಯರ್ ಸ್ಟೋರಿ ..!

ನಿತ್ಯ ಭವಿಷ್ಯ : ಈ ರಾಶಿಯವರಿಗೆ ಮಾತೇ ಸಮಸ್ಯೆ ತಂದೊಡ್ಡುತ್ತದೆ ..!

ಹುಡುಗರು ಹೆಚ್ಚು ಆಕರ್ಷಿತರಾಗೋದು ಚಂದದ ಹುಡ್ಗೀರಿಲ್ಲ..! ಮತ್ತೆ?

ದ್ವಿತೀಯ ಪಿಯುಸಿ ಫಲಿತಾಂಶ : ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ..! ಯಾವ ಜಿಲ್ಲೆ ಫಸ್ಟ್? ಯಾವ್ದು ಲಾಸ್ಟ್?

ಯಾರ್ ಬೇಕಿದ್ರು ಕೃಷಿ ಭೂಮಿ ಖರೀಸಬಹುದೆಂಬ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ..!

ಕೊರೋನಾ ದೆಸೆಯಿಂದ ಸೆಕ್ಯುರಿಟಿ ಗಾರ್ಡ್ ಆದ ಸ್ಯಾಂಡಲ್ ವುಡ್ ಜನಪ್ರಿಯ ನಟ ..!

ನಿತ್ಯಭವಿಷ್ಯ : ಈ ಶುಭ ಮಂಗಳವಾರದ ರಾಶಿ ಭವಿಷ್ಯ

ಇಲ್ಲಿದೆ ಸರ್ಕಾರ ಹೊರಡಿಸಿದ ಲಾಕ್ ಡೌನ್ ಮಾರ್ಗಸೂಚಿ ..! ಏನಿರುತ್ತೆ ? ಏನಿರಲ್ಲ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಕಪ್ ಮ್ಯಾನ್ ವಿಧಿವಶ

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...