‘ಆಹಾರದ ಕಳಪೆ ಗುಣಮಟ್ಟ’ದ ಬಗ್ಗೆ ವಿಡಿಯೋ ಮಾಡಿದ್ದ ಯೋಧನ ಮಗ ಅನುಮಾನಸ್ಪದ ಸಾವು..!! ನಡೆದಿದ್ದೇನು..??
ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆಂದು ಆರೋಪಿಸಿದ್ದ ತೇಜ್ ಬಹದ್ದೂರ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು.. ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಬಹದ್ದೂರ್ ಆರೋಪ ಸುಳ್ಳು ಎಂದು ಹೇಳಿದ್ರು.. ಆನಂತರ ಕೆಲಸದಿಂದ ವಜಾ ಕೂಡ ಮಾಡಲಾಗಿತ್ತು..
ಸದ್ಯ ಈ ವಿಚಾರದ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಈ ಯೋಧನ ಮನೆಯಲ್ಲಿ ಅನುಮಾನಸ್ಪದ ಸಾವು ಸಂಭವಿಸಿದೆ.. ಈತನ ಮಗ ರೋಹಿತ್ ಮನೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.. ರೋಹಿತ್ ಕೋಣೆ ಬಾಗಿಲು ಹಾಕಿರುವುದನ್ನ ಕಂಡು ಮನೆಯವರು ನಂತರ ಬಾಗಿಲು ತೆಗೆಯುವಂತೆ ಹೇಳಿದ್ದಾರೆ.. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದಿದ್ರಿಂದ ಬಾಗಿಲನ್ನ ಮುರಿದು ಒಳಗೆ ಪ್ರವೇಶ ಮಾಡಲಾಗಿದೆ..
ಈ ಸಂದರ್ಭದಲ್ಲಿ ಮಗ ರೋಹಿತ್ ಮೃತಪಟ್ಟಿರುವುದು ಕಂಡು ಬಂದಿದೆ.. ಜೊತೆಗೆ ಆತನ ಕೈಯಲ್ಲಿ ಬಂದೂಕು ಸಹ ಇತ್ತು ಎಂಬುದನ್ನ ಪೊಲೀಸರು ತಿಳಿಸಿದ್ದಾರೆ.. ಸದ್ಯ ತೇಜ್ ಬಹದ್ದೂರ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದ ಕರ್ತವ್ಯದಲ್ಲಿದ್ದು, ಅವರಿಗೆ ಈ ಕುರಿತು ಮಾಹಿತಿಯನ್ನ ತಿಳಿಸಲಾಗಿದ್ಯಂತೆ.. ಆದರೆ ಮಗನ ಸಾವಿಗೆ ಸೂಕ್ತ ಕಾರಣ ಇನ್ನು ತಿಳಿದು ಬಂದಿಲ್ಲ.. ಸದ್ಯ ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ..