ಪತ್ರಿಕೋದ್ಯಮಕ್ಕೂ ಸಿನಿಮಾ ಕ್ಷೇತ್ರಕ್ಕೂ ಎಲ್ಲಿಲ್ಲದ ನಂಟು. ಪತ್ರಿಕೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳುತ್ತಾ ಸಿನಿಯಾನ ಆರಂಭಿಸಿದ ಅನೇಕರು ನಮ್ಮ ನಡುವೆ ಇದ್ದಾರೆ.
ಇದೀಗ ಜನಪ್ರಿಯ ಸುದ್ದಿವಾಹಿನಿ ಸುವರ್ಣ ನ್ಯೂಸ್ ನ ರಮಾಕಾಂತ್ ಅವರ ಸರದಿ.
ರಮಾಕಾಂತ್… ಬಹುಶಃ ಇವರ ಹೆಸರು ಕೇಳದೇ ಇರುವವರೇ ಇಲ್ಲ. ಕರ್ನಾಟಕದ ಮನೆಮನೆಗೂ ಗೊತ್ತಿರುವ ನಿರೂಪಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಒಬ್ಬರು ಆ್ಯಂಕರ್ ರಮಾಕಾಂತ್.
ಪತ್ರಿಕೋದ್ಯಮದಲ್ಲಿ ತನ್ನದೇಯಾದ ಗುರುತು ಮೂಡಿಸಿರುವ ರಮಾಕಾಂತ್ ಸಿನಿಮಾ ಮಾಡಿದ್ದಾರೆ..!
ಗಿರೀಶ್ ಎಂಬ ಹೊಸ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಒಂದ್ ಕಥೆ ಹೇಳ್ಲಾ’ ಸಿನಿಮಾದಲ್ಲಿ ರಮಾಕಾಂತ್ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಣದ ಜವಬ್ದಾರಿಗೂ ಕೈ ಜೋಡಿಸಿದ್ದಾರೆ.
ಸಿನಿಮಾದಲ್ಲಿ ಉಪಕತೆಯೊಂದರಲ್ಲಿ ರಮಾಕಾಂತ್ ಮತ್ತು ಅವರ ಪತ್ನಿ ಸೌಮ್ಯ ರಮಾಕಾಂತ್ ಅಭಿನಯಿಸಿದ್ದಾರೆ. ಕಾಕತಾಳಿಯವೆಂದರೆ ಸಿನಿಮಾದಲ್ಲೂ ರಮಾಕಾಂತ್ ಮತ್ತು ಸೌಮ್ಯ ದಂಪತಿ.
ಪ್ರಮುಖ ಪಾತ್ರದಲ್ಲಿ ತಾಂಡವ್ ರಾವ್, ಶಕ್ತಿ ಸೋಮಣ್ಣ ಕಾಣಿಸಿಕೊಂಡಿದ್ದಾರೆ.
ಕೀರ್ತನ್ ಪೂಜಾರಿ ಛಾಯಾಗ್ರಹಣದ ಹೊಣೆ ನಿಭಾಯಿಸಿದ್ದು. ರೋಣದ ಬಕ್ಕೇಶ್ , ಕಾರ್ತಿಕ್ ಸಿ ರಾವ್ ಸಂಗೀತದ ಬಲ ತುಂಬಿದ್ದಾರೆ. ರಮಾಕಾಂತ್ ಅವರಲ್ಲದೆ ನಿರ್ದೇಶಕ ಗಿರೀಶ್ ಸೇರಿ 23 ಮಂದಿ ಬಂಡವಾಳ ಹಾಕಿದ್ದಾರೆ.
ಆ್ಯಂಕರ್ ರಮಾಕಾಂತ್ ಈಗ ಆ್ಯಕ್ಟರ್.!
Date: