ಸಚಿನ್ ತೆಂಡೂಲ್ಕರ್ ….ವಿಶ್ವ ಕ್ರಿಕೆಟ್ ಅನ್ನು ಅನಭಿಷಕ್ತ ದೊರೆಯಾಗಿ ಆಳಿದ ಮಹಾನ್ ಕ್ರಿಕೆಟಿಗ….ಕ್ರಿಕೆಟ್ ಪರಿಚಯವಾಗಿದ್ದೇ ಸಚಿನ್ ಗಾಗಿ….ಸಚಿನ್ ಈ ನಾಡಲ್ಲಿ ಜನ್ಮವೆತ್ತಿದ್ದೇ ಕ್ರಿಕೆಟಿಗಾಗಿ..! ವಿಶ್ವ ಕ್ರಿಕೆಟ್ ಕಂಡ ಅದ್ಭುತ ಸಚಿನ್…ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುತ್ತಾರೆ. ಅವರು ಕಲೆಹಾಕಿರುವ ದಾಖಲೆಯ ರನ್ ಗಳು, ಮಾಡಿರುವ ದಾಖಲೆಗಳು ಸಚಿನ್ ಗೆ ಕ್ರಿಕೆಟ್ ದೇವರ ಪಟ್ಟ ತಂದಿಟ್ಟಿದೆ…ಆ ಪಟ್ಟಕ್ಕೆ ಅವರು ಅರ್ಹರು ಕೂಡ…!
ಇಂಥಾ ಸಚಿನ್ ತೆಂಡೂಲ್ಕರ್ರೇ ಆ ಒಂದು ಅವಕಾಶಕ್ಕಾಗಿ ಕಾಡಿ ಬೇಡಿದ್ದರು…ಆ ಒಂದೇ ಒಂದು ಚಾನ್ಸ್ ಗೆ ಪರಿ ಪರಿ ಬೇಡಿದ್ದರು..!
ಹೌದು…ಸಚಿನ್ನೇ ಬೇಡಿದ್ದರು ಎಂಬುದು ಆಶ್ಚರ್ಯವೆನಿಸಿದರೂ ನಂಬಲೇ ಬೇಕು…ಸಾಧಿಸುವ ಮುನ್ನ ಎಲ್ಲರ ಸ್ಥಿತಿಯೂ ಹೀಗೇ ಅಲ್ಲವೆ? ಸಚಿನ್ ಕೂಡ ಅಂತಹದ್ದೇ ಪರಿಸ್ಥಿತಿ ಎದುರಿಸಿದ್ದರು….ಆ ದಿನಗಳ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ…
ಸಚಿನ್ ಸಹ ಕಾಡಿ ಬೇಡಿ ಅವಕಾಶ ಪಡೆದು ಸಾಧನೆಯ ಉನ್ನತ ಶಿಖರ ಹೇರಿದ ಹಠವಾದಿ..ಛಲಗಾರ….ಸಾಮಾನ್ಯವಾಗಿ ಕ್ರಿಕೆಟಲ್ಲಿ ಬ್ಯಾಟ್ಸ್‌ಮನ್ ಗಳಿಗೆ ತಾವು ಆರಂಭಿಕರಾಗಿ ಕಣಕ್ಕಿಳಿಯುವ ಹಂಬಲ ಹೆಚ್ಚಿರುತ್ತೆ. ಅಂತೆಯೇ ಸಚಿನ್ ಗೂ ಆ ಇಷ್ಟ ಇತ್ತು…ಆದರೆ ತಂಡ ಕೂಡಿಕೊಂಡಿದ್ದು ಮಾತ್ರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ.
ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ಭಾರತ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸಚಿನ್ ಗೆ ಆರಂಭದ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದ್ದರಿಂದ ಓಪನರ್ ಆಗುವ ಹಂಬಲವಿತ್ತು.
ಆದರೆ, ಸಚಿನ್ ಅವರನ್ನು ಆರಂಭಿಕರಾಗಿ ಕಣಕ್ಕಿಸಬಹುದು ಎಂದು ಯಾರೂ ಕೂಡ ಯೋಚಿಸಿರಲಿಲ್ಲ. ಸಚಿನ್ ಸ್ವತಃ ತನಗೊಂದು ಅವಕಾಶ ಕೊಡಿ ಎಂದು ಕೇಳುವ ತನಕ…!
1994ರ ಸೆಪ್ಟೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತನಗೆ ಓಪನರ್ ಆಗಿ ಅವಕಾಶ ನೀಡುವಂತೆ ಮ್ಯಾನೇಜ್ಮೆಂಟನ್ನು ಸಚಿನ್ ಬೇಡಿದ್ದರಂತೆ…! ಚಾಟ್ ಶೋ ಒಂದರಲ್ಲಿ ಸ್ವತಃ ಅವರೇ ಈ ವಿಷಯವನ್ನು ಹೇಳಿದ್ದಾರೆ…!
ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶಕ್ಕಾಗಿ ಭಿಕ್ಷುಕನಂತೆ ಬೇಡಿದ್ದೆ ಎಂದು ಕ್ರಿಕೆಟ್ ದೇವರು ಹೇಳಿಕೊಂಡಿದ್ದಾರೆ.
ಆರಂಭಿಕನಾಗಿ ಆಕ್ರಮಣಕಾರಿ ಆಟ ಆಡುವ ವಿಶ್ವಾಸವಿತ್ತು. ಈ ಕುರಿತು ನಾಯಕನಿಗೆ ಮತ್ತು ಮ್ಯಾನೇಜ್ಮೆಂಟ್ ಗೆ ಮನವರಿಕೆ ಮಾಡಿಕೊಟ್ಟೆ. ಅಕಸ್ಮಾತ್ ನಾನು ವಿಫಲನಾದರೆ ಮತ್ತೆ ಎಂದೂ ಕೂಡ ಅವಕಾಶ ಕೇಳಲ್ಲ ಎಂದು ಹೇಳಿದೆ. ಅಂದಿನ ಓಪನರ್ ಸಿಧು ಅವರಿಗೆ ಕುತ್ತಿಗೆ ನೋವಿತ್ತು. ಆದ್ದರಿಂದ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಿರಲಿಲ್ಲ. ಈ ವೇಳೆ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಮ್ಯಾನೇಜರ್ ಅಜಿತ್ ವಾಡೆಕರ್ ಅವರಲ್ಲಿ ತನಗೆ ಒಂದು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದೆ.ಆದರೆ ಎಲ್ಲರ ಮೊದಲ ಪ್ರತಿಕ್ರಿಯೆ ನಾನ್ಯಾಕೆ ಇನ್ನಿಂಗ್ಸ್ ಆರಂಭಿಸಬೇಕು ಎಂಬುದಾಗಿತ್ತು..! ನನಗೆ ವಿಶ್ವಾಸವಿತ್ತು. ನಾಯಕ ಮತ್ತು ಮ್ಯಾನೇಜರ್ ಗೆ ಮನವರಿಕೆ ಮಾಡಿಕೊಟ್ಟೆ ..ಕೊನೆಗೆ ಅವರು ಒಪ್ಪಿದರು ..ಹೀಗೆ ಆರಂಭಿಕನಾಗುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.
ಹೀಗಾಗಿ ಆಕ್ಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನನ್ನನ್ನು ಆರಂಭಿಕನಾಗಿ ಕಣಕ್ಕಿಳಿಸಿದರು. ಆ ಪಂದ್ಯದಲ್ಲಿ 49 ಎಸೆತಗಳಲ್ಲಿ 82 ರನ್ ಬಾರಿಸಿದ್ದೆ. ಹಾಗಾಗಿ ಎರಡನೇ ಸಲ ತನಗೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ಕೊಡಿ ಎಂದು ಕೇಳುವ ಪ್ರಮೆಯವೇ ಬರಲಿಲ್ಲ ಎಂದು ಸಚಿನ್ ಮೆಲುಕು ಹಾಕಿದ್ದಾರೆ….
ಆರಂಭಿಕರಾಗಿ ಕಣಕ್ಕಿಳಿದ ಮೇಲೆ ಸಚಿನ್ ಹಿಂತಿರುಗಿ ನೋಡಲೇ ಇಲ್ಲ…ಮೊದಲ ಐದು ಇನ್ನಿಂಗ್ಸ್ ಗಳಲ್ಲಿ 82, 63, 40, 63 ಹಾಗೂ 73 ರನ್ ಮಾಡಿದರು. ಕೊಲಂಬೊದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ( ತಮ್ಮ 76 ನೇ ಇನ್ನಿಂಗ್ಸ್) ಮೊದಲ ಏಕದಿನ ಶತಕ ಸಿಡಿಸಿದರು….ಅಲ್ಲಿಂದ ಶುರುವಾದ ಶತಕದ ಅಭಿಯಾನ ಅಂತರರಾಷ್ಟ್ರೀಯ ಕ್ರಿಕೆಟಲ್ಲಿ 100 ಶತಕ ದಾಖಲಿಸುವ ತನಕ ಸಾಗಿತು…
2011 ರ ವಿಶ್ವಕಪ್ ಗೆಲಿವಿನ ಸವಿಯುಂಡು ನಿವೃತ್ತಿಯಾಗುವ ಮುನ್ನ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ನಿರ್ಮಿಸಿದ್ರು….