No menu items!
6.3 C
Munich
Friday, May 1, 2026

ಗುಪ್ತಾಂಗಗಳ ಬಗ್ಗೆ ಸತ್ಯವೆಂದೇ ನಂಬಿರುವ ಸುಳ್ಳುಗಳು ಇವು..!

Must read

01: ಕೆಳಗಿನ ಆ ಸಂಪೂರ್ಣ ಜಾಗವನ್ನು ಜನನಾಂಗ ಎನ್ನುತ್ತಾರೆ.

ಹೌದು.. ಈ ವಿಷಯದಲ್ಲಿ ಶಿಕ್ಷಿತರೂ ಹಾಗೇ ನಂಬಿದ್ದಾರೆ. ಆದರೆ, ನಿಜವೆಂದರೆ ವೆಜೈನಾ ಎಂಬುದು ಮಹಿಳಾ ಜನನೇಂದ್ರಿಯದ ಒಂದು ಭಾಗವೇ ಹೊರತು ಜನನಾಂಗವೇ ಎಲ್ಲ ಅಲ್ಲ. ಹೊರಗಿನ ಭಾಗವನ್ನು ವಲ್ವಾ ಎಂದೂ ಒಳಗಿನ ಭಾಗವನ್ನು ಯೋನಿ ಎಂದೂ ಕರೆಯಲಾಗುತ್ತೆ.
02: ಗುಪ್ತಾಂಗವನ್ನು ಸದಾ ಸ್ವಚ್ಛಗೊಳಿಸುತ್ತಲೇ ಇರಬೇಕು.
ಮಾರುಕಟ್ಟೆಯ ಹಲವು ಉತ್ಪನ್ನಗಳು ವೆಜೈನಾವನ್ನು ಸಂಪೂರ್ಣ ಸ್ವಚ್ಛಗೊಳಿಸುವ ಭರವಸೆ ನೀಡುತ್ತವೆ. ಅವು ಯಾವುವೂ ಅವಶದ್ಯಕತೆ ಇರೋದಿಲ್ಲ. ಜನನಾಂಗವು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಶಕ್ತವಾಗಿದ್ದು, ಅದಕ್ಕೆ ಕ್ಲೀನ್ ಮಾಡಲು ಹೊರಗಿನ ಯಾವ ಸಹಾಯವೂ ಬೇಡ. ಇನ್ಫೆಕ್ಷನ್ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೂರವಿಡಲು ಜನನಾಂಗದಲ್ಲಿ ಅದರದ್ದೇ ಆದ ವ್ಯವಸ್ಥೆ ಇರುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಮಾತ್ರ ತನ್ನಲ್ಲಿ ಬಿಟ್ಟುಕೊಳ್ಳುತ್ತದೆ. ಸತ್ಯವೆಂದ್ರೆ ಜನನಾಂಗ ಸ್ವಚ್ಛಗೊಳಿಸುವುದಾಗಿ ಹೇಳುವ ಉತ್ಪನ್ನಗಳು ವೆಜೈನಾದ ಪಿಎಚ್ ಬ್ಯಾಲೆನ್ಸ್ ಹಾಳು ಮಾಡಿ ಮತ್ತಷ್ಟು ಕೆಟ್ಟದ್ದನ್ನೇ ಮಾಡುತ್ತವೆ.

03: ಮಗು ಜನಿಸಿದ ಬಳಿಕ ಜನನಾಂಗ ಶಾಶ್ವತವಾಗಿ ಅಗಲವಾಗಿಬಿಡುತ್ತದೆ.
ಮಗುವಾದ ಬಳಿಕ ಅಲ್ಲಿ ಟೈಟ್ನೆಸ್ ಕಳೆದುಕೊಳ್ಳುವ ಭಯ ಹಲವು ಮಹಿಳೆಯರನ್ನು ಗುಟ್ಟಾಗಿ ಕಾಡುತ್ತಲೇ ಇರುತ್ತದೆ. ಆದರೆ ಕೆಲವೇ ತಿಂಗಳಲ್ಲಿ ಯೋನಿಯು ಮುಂಚಿನಂತಾಗುತ್ತದೆ. ಪೆಲ್ವಿಕ್ ಫ್ಲೋರ್ ಎಕ್ಸಸೈಸ್ ಮಾಡಿದಲ್ಲಿ ಬಹಳ ಬೇಗ ಯೋನಿಗೆ ಟೈಟ್ನೆಸ್ ಬರುತ್ತದೆ.

04: ಆರೋಗ್ಯಯುತ ಯೋನಿಯು ವಾಸನೆ ಬರುವುದಿಲ್ಲ ಗೊತ್ತಾ..?
ಜನನೇಂದ್ರಿಯದ ಎಲ್ಲ ಅಂಗಗಳೂ ಸ್ವಲ್ಪ ವಾಸನೆ ಹೊಂದಿರುತ್ತವೆ. ಆದರೆ, ಯೋನಿಯು ಹಾರ್ಮೋನ್ ವ್ಯತ್ಯಾಸದಿಂದಾಗಿ ತಿಂಗಳಲ್ಲಿ ಕೆಲ ದಿನಗಳಲ್ಲಿ, ಪ್ರೆಗ್ನನ್ಸಿ ಸಂದರ್ಭದಲ್ಲಿ ಹಾಗೂ ಸೆಕ್ಸ್ ಬಳಿಕ ಹೆಚ್ಚಿನ ವಾಸನೆ ಬರಬಹುದು. ಅಲ್ಲದೆ, ಆ ಭಾಗದಲ್ಲಿ ಬೆವರಿನ ಗ್ರಂಥಿಗಳು ಹೆಚ್ಚಿದ್ದು, ಬೆವರ ವಾಸನೆಯೂ ಇದಕ್ಕೆ ಸೇರಿಕೊಳ್ಳಬಹುದು. ಆದರೆ ಇವು ಯಾವುದೂ ಅಸಹಜವಲ್ಲ, ಅನಾರೋಗ್ಯದ ಲಕ್ಷಣವಲ್ಲ.

05: ಸಣ್ಣ ಗಾತ್ರದ ಹುಡುಗಿಯರಿಗೆ ವೆಜೈನಾ ಹೆಚ್ಚು ಟೈಟ್ ಇರುತ್ತದೆ.
ಯುವತಿಯ ಎತ್ತರ, ದಪ್ಪ, ಅಗಲ ಯಾವುವೂ ಆಕೆಯ ವೆಜೈನಾದ ಗಾತ್ರವನ್ನಾಗಲೀ, ಟೈಟ್ನೆಸ್ಸನ್ನಾಗಲಿ ಹೇಳಲಾರವು. ಕೆಲವೊಮ್ಮೆ ಸಣ್ಣ ವಯಸ್ಸಿನ ಹುಡುಗಿಯರಿಗೆ ಬಿಗಿಯಾದ ಯೋನಿ ಇರುತ್ತದೆ ಎಂದು ನಂಬಲಾಗುತ್ತದೆ. ಇದೂ ನಿಜವಲ್ಲ. ಯೋನಿಯು ಸಿಕ್ಕಾಪಟ್ಟೆ ಎಲಾಸ್ಟಿಕ್ ಆಗಿದ್ದು, ಮಗು ಹೆರುವ ಹಾಗೂ ಸೆಕ್ಸ್ನ ಸಂದರ್ಭದಲ್ಲಿ ಶೇ.200ರಷ್ಟು ಹಿಗ್ಗಬಲ್ಲದು.

06: ಎಲ್ಲ ವೆಜೈನಲ್ ಡಿಸ್ಚಾರ್ಜ್ ಬಗ್ಗೆಯೂ ನೀವು ಚಿಂತಿಸಬೇಕು.
ಎಲ್ಲ ರೀತಿಯ ಡಿಸ್ಚಾರ್ಜ್ಗಳೂ ಕೆಟ್ಟದ್ದೆಂದು ನೀವು ಕೇಳಿರಬಹುದು. ಅದು ನಿಜವಲ್ಲ. ಕೆಲವೊಂದು ಡಿಸ್ಚಾರ್ಜ್ಗಳು ಸಂಪೂರ್ಣ ಆರೋಗ್ಯವಂತಿಕೆಯ ಲಕ್ಷಣವಾಗಿದ್ದು, ಒಳ್ಳೆಯ ಅಗತ್ಯವಿರುವ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಇದು ಯೋನಿಯನ್ನು ಇನ್ಫೆಕ್ಷನ್ಮುಕ್ತಗೊಳಿಸಲೆಂದೇ ಡಿಸ್ಚಾರ್ಜ್ ಆಗುತ್ತದೆ. ಇದು ಸಾಮಾನ್ಯವಾಗಿ ಬಿಳಿಯಾಗಿದ್ದು, ವಾಸನೆರಹಿತವಾಗಿರುತ್ತದೆ. ಆದರೆ, ಕೆಲವೊಮ್ಮೆ ಈ ಡಿಸ್ಚಾರ್ಜ್ ವಾಸನೆ ಹೊಂದಿದ್ದು ನಾರ್ಮಲ್ ಅಲ್ಲ ಎನಿಸಿದರೆ ವೈದ್ಯರನ್ನು ಕಾಣಬೇಕಗುತ್ತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article