ಇಂಗ್ಲೆಂಡ್‌ನ ಕೆಲ ಅನುಭವಿ ಆಟಗಾರರು ಆ್ಯಷಸ್ ಸರಣಿ ಬಹಿಷ್ಕರಿಸಲು ಯೋಚಿಸಿದ್ದರೂ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಸಿಸಿಬಿ) ಆ್ಯಷಸ್ ಸರಣಿ ಮುಂದೂಡುವ ಬಗ್ಗೆ ಏನೂ ಯೋಚಿಸುತ್ತಿಲ್ಲ. ಯಾವ ಆಟಗಾರರು ಆಡದಿದ್ದರೂ ಆ್ಯಷಸ್‌ನಲ್ಲಿ ಪಾಲ್ಗೊಳ್ಳುವ ಯೋಚನೆಯಲ್ಲಿ ಇಸಿಬಿ ಇದೆ. ಈ ಬಗ್ಗೆ ಬೋರ್ಡ್, ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಮಧ್ಯೆ ಮಾತುಕತೆ ನಡೆಯುತ್ತಿದೆ.
“ಇಂಗ್ಲೆಂಡ್‌ನ ಫೀಲ್ಡಿಂಗ್ ಗಮನಾರ್ಹವಾಗಿ ಕಡಿಮೆ ಸಾಮರ್ಥ್ಯ ಹೊಂದಿದೆ. ಮುಂಬರುವ ಆ್ಯಷಸ್ ವೇಳೆ ಇನ್ನೂ ಸಮಸ್ಯೆ ಬೆಳೆಯಬಹುದು. ಈ ಬಗ್ಗೆ ಇಸಿಬಿ ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ,” ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ.
ಕ್ವಾರಂಟೈನ್ ನಿಯಮ ಸ್ವಲ್ಪ ಮಟ್ಟಿಗೆ ಸಡಿಲಿಸುವಂತೆ ಅಥವಾ ಪ್ರವಾಸ ಸರಣಿ ಮುಂದೂಡುವಂತೆ ಇಂಗ್ಲೆಂಡ್ ಆಟಗಾರರು ಮಾಡಿಕೊಂಡ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿರಸ್ಕರಿಸಿದೆ. ಇದರಿಂದ ಇಂಗ್ಲೆಂಡ್ ಅನುಭವಿ ಆಟಗಾರರು ನಿರಾಶೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
“ಇಂಗ್ಲೆಂಡ್ ಬೋರ್ಡ್ ಜೊತೆಗಿನ ಮನವಿ ಈಡೇರದಿದ್ದರಿಂದ ಆಟಗಾರರು ಅವರವರ ಆಯ್ಕೆ ಪರಿಗಣಿಸಲಿದ್ದಾರೆ. ಇವುಗಳಲ್ಲಿರುವ ಒಂದು ಆಯ್ಕೆಯೆಂದರೆ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಎಲ್ಲರೂ ಸೇರಿ ಪ್ರವಾಸ ಬಹಿಷ್ಕರಿಸೋದು,” ಎಂದು ಮೂಲವೊಂದು ಮಾಹಿತಿ ನೀಡಿದೆ. ಅಂದ್ಹಾಗೆ, ಇಂಗ್ಲೆಂಡ್‌ನ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲೂ ಆಡುತ್ತಿಲ್ಲ.